“ಒಡೆಯ’ ಎಂಟ್ರಿಗೆ ಸಿದ್ಧತೆ ಜೋರು
ಅರ್ಧಶತಕದತ್ತ ಕುರುಕ್ಷೇತ್ರ
Team Udayavani, Sep 21, 2019, 3:04 AM IST
ದರ್ಶನ್ ಅಭಿನಯದ “ಕುರುಕ್ಷೇತ್ರ’ ಚಿತ್ರ 50 ದಿನಗಳನ್ನು ಪೂರೈಸುತ್ತಿದೆ. ಇದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಚಿತ್ರದ 50ನೇ ದಿನದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ನಡುವೆಯೇ ದರ್ಶನ್ ತಮ್ಮ ಟ್ವೀಟರ್‌ನಲ್ಲಿ ಹಾಕಿಕೊಂಡಿರುವ ಮತ್ತೊಂದು ಫೋಟೋ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಅದು “ಒಡೆಯ’.
ದರ್ಶನ್ “ಒಡೆಯ’ ಚಿತ್ರವನ್ನು ಒಪ್ಪಿಕೊಂಡಿದ್ದು, ಸದ್ದಿಲ್ಲದೇ ಆ ಚಿತ್ರದ ಚಿತ್ರೀಕರಣ ಮುಗಿಸಿರೋದು ನಿಮಗೆ ಗೊತ್ತೇ ಇದೆ. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ದರ್ಶನ್ ಈಗ ಚಿತ್ರದ ಖಡಕ್ ಲುಕ್‌ನ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಮಾಸ್ ಸಿನಿಮಾ ಮೂಲಕ ಎಂಟ್ರಿಕೊಡುತ್ತಿರುವ ಸುಳಿವು ನೀಡಿದ್ದಾರೆ. ಎಂ.ಡಿ.ಶ್ರೀಧರ್ ಈ ಚಿತ್ರದ ನಿರ್ದೇಶಕರು.
ಸಂದೇಶ್ ನಾಗರಾಜ್ ನಿರ್ಮಾಣದ ಈ ಚಿತ್ರದಲ್ಲಿ ದರ್ಶನ್ ಜೊತೆ ಪಂಕಜ್, ಯಶಸ್ ಸೇರಿದಂತೆ ಇನ್ನೂ ಅನೇಕರು ನಟಿಸಿದ್ದಾರೆ. ದರ್ಶನ್ ತಮ್ಮ ಸಿನಿಮಾ ವಿಚಾರದಲ್ಲಿ ತಮ್ಮದೇ ಆದ ನಿಯಮ ಮಾಡಿದ್ದಾರೆ. ಅದು ಒಂದು ಸಿನಿಮಾ ಬಿಡುಗಡೆಯಾಗುವ ಮೊದಲು ಇನ್ನೊಂದು ಸಿನಿಮಾದ ಸುದ್ದಿಯಾಗಲಿ, ಫೋಟೋ ಆಗಲಿ ಬಿಡುವುದಿಲ್ಲವೆಂದು. ಅದೇ ಕಾರಣಕ್ಕೆ ಇಷ್ಟು ದಿನ “ಕುರುಕ್ಷೇತ್ರ’ ಬಿಟ್ಟು ಬೇರೆ ಸಿನಿಮಾ ಬಗ್ಗೆ ದರ್ಶನ್ ಮಾತನಾಡಿದ್ದು ಕಡಿಮೆ.
#Odeya pic.twitter.com/HMdqu1u8AY
— Darshan Thoogudeepa (@dasadarshan) September 20, 2019
ಈಗ “ಕುರುಕ್ಷೇತ್ರ’ ಚಿತ್ರ 50 ದಿನಗಳನ್ನು ಪೂರೈಸುತ್ತಿದೆ. ಮುಂದಿನ ಚಿತ್ರವಾಗಿ “ಒಡೆಯ’ ಬಿಡುಗಡೆಯಾಗಲಿದೆ. ಇದು ಔಟ್ ಅಂಡ್ ಔಟ್ ಮಾಸ್ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸವಿದೆ. ಈಗಾಗಲೇ ದರ್ಶನ್ ಹಾಗೂ ನಿರ್ದೇಶಕ ಎಂ.ಡಿ.ಶ್ರೀಧರ್ ಕಾಂಬಿನೇಶನ್‌ನಲ್ಲಿ “ಪೊರ್ಕಿ’, “ಬುಲ್ ಬುಲ್’ ಚಿತ್ರಗಳು ಬಂದಿವೆ. ಈಗ “ಒಡೆಯ’ ಮೂರನೇ ಚಿತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.