ವಿಷ್ಣುವರ್ಧನ್ ನಾಟಕೋತ್ಸವಕ್ಕೆ ಸಿದ್ಧತೆ
ಅಭಿಮಾನಿಗಳ ಕಾರ್ಯಕ್ಕೆ ಶುಭ ಕೋರಿದ ಸುದೀಪ್
Team Udayavani, Aug 19, 2019, 3:03 AM IST
ಪ್ರತಿವರ್ಷ ಸೆಪ್ಟೆಂಬರ್ ತಿಂಗಳು ಹತ್ತಿರ ಬರುತ್ತಿದ್ದಂತೆ ನಟ, ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಅಭಿಮಾನ, ಸಂತೋಷ ಎರಡೂ ಇಮ್ಮಡಿಯಾಗುತ್ತದೆ. ಅದಕ್ಕೆ ಕಾರಣ ಸೆ. 18ಕ್ಕೆ ವಿಷ್ಣುವರ್ಧನ್ ಜನ್ಮದಿನ. ಹೌದು, ವಿಷ್ಣುವರ್ಧನ್ ಕನ್ನಡ ಚಿತ್ರರಂಗವನ್ನು ಅಗಲಿ ದಶಕವಾಗುತ್ತಾ ಬಂದರೂ, ಅಭಿಮಾನಿಗಳ ಮನದಲ್ಲಿ ಅವರ ನೆನಪು, ಚಿತ್ರಗಳು ಇಂದಿಗೂ ಹಸಿರಾಗಿಯೇ ಉಳಿದಿದೆ.
ಪ್ರತಿವರ್ಷ ಸೆ. 18ರಂದು ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುತ್ತಾ ಬಂದಿರುವ ಅಭಿಮಾನಿಗಳು, ವಿಷ್ಣುವರ್ಧನ್ ಅವರನ್ನು ನೆನಪುಗಳಲ್ಲಿ ಜೀವಂತವಾಗಿರಿಸುತ್ತಿದ್ದಾರೆ. ಇನ್ನು ಈ ವರ್ಷ ಕೂಡ ಸೆ. 18 ಹತ್ತಿರ ಬರುತ್ತಿದ್ದಂತೆ, ವಿಷ್ಣುವರ್ಧನ್ ಜನ್ಮದಿನಕ್ಕೆ ಅಭಿಮಾನಿಗಳು ನಿಧಾನವಾಗಿ ತಯಾರಿ ಶುರು ಮಾಡಿಕೊಳ್ಳುತ್ತಿದ್ದಾರೆ.
ಪ್ರತಿವರ್ಷ ವಿಭಿನ್ನವಾಗಿ ಮತ್ತು ವಿಶೇಷವಾಗಿ “ಡಾ. ವಿಷ್ಣು ಸೇನಾ ಸಮಿತಿ’ಯ ನೇತೃತ್ವದಲ್ಲಿ ವಿಷ್ಣುವರ್ಧನ್ ಜನ್ಮದಿನವನ್ನು ಆಚರಿಸುತ್ತ ಬಂದಿರುವ ವಿಷ್ಣು ಅಭಿಮಾನಿಗಳು, ಈ ವರ್ಷ ಕೂಡ ಸೆ. 18 ರಂದು ವಿಷ್ಣುದಾದ ಜನ್ಮದಿನದ ಅಂಗವಾಗಿ “ಡಾ. ವಿಷ್ಣುವರ್ಧನ್ ನಾಟಕೋತ್ಸವ’ ಆಯೋಜಿಸಿದ್ದಾರೆ. ಸೆ. 18 ರಂದು ಆರಂಭವಾಗಲಿರುವ ಈ ನಾಟಕೋತ್ಸವ ಸೆ. 20ರ ವರೆಗೆ ಮೂರು ದಿನಗಳಕಾಲ ನಡೆಯಲಿದ್ದು, ದಿನ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಿವಿಧ ನಾಟಕಗಳು ಪ್ರದರ್ಶನವಾಗಲಿವೆ.
ಇನ್ನು “ಡಾ. ವಿಷ್ಣುವರ್ಧನ್ ನಾಟಕೋತ್ಸವ’ದಲ್ಲಿ ಮೈಸೂರು ಕರ್ನಾಟಕ, ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಿಂದ ತಲಾ ಒಂದೊಂದು ರಂಗಭೂಮಿ ತಂಡಗಳು ಭಾಗವಹಿಸಲಿದ್ದು, ನಾಟಕವನ್ನು ಪ್ರದರ್ಶಿಸಲಿವೆ. ಈ ಮೂಲಕ ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ನಾಟಕೋತ್ಸವ ನಡೆಸಲು ಅಭಿಮಾನಿಗಳು ತಯಾರಾಗಿದ್ದಾರೆ.
ಇದಲ್ಲದೆ “ಡಾ. ವಿಷ್ಣುವರ್ಧನ್ ನಾಟಕೋತ್ಸವ’ದ ಜೊತೆಗೆ ಪ್ರತಿದಿನ ವಿಷ್ಣುವರ್ಧನ್ ಗೀತೆಗಳ ಸಂಗೀತ ಸಂಜೆ, ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ, ಕನ್ನಡ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ, ವಿಷ್ಣುವರ್ಧನ್ ಛಾಯಾಚಿತ್ರ ಪ್ರದರ್ಶನ ಸೇರಿದಂತೆ ಇನ್ನೂ ಹಲವು ಕಾರ್ಯಕ್ರಮಗಳು ನಡೆಯಲಿದೆ.
ಶುಭ ಕೋರಿದ ಸುದೀಪ್: ಮತ್ತೊಂದೆಡೆ “ಡಾ. ವಿಷ್ಣುವರ್ಧನ್ ನಾಟಕೋತ್ಸವ’ಕ್ಕೆ ಅಭಿಮಾನಿಗಳು ತಯಾರಿ ಆರಂಭಿಸಿರುವಂತೆಯೇ, ನಟ ಸುದೀಪ್ ಕೂಡ ಕಾರ್ಯಕ್ರಮಕ್ಕೆ ಶುಭ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ “ಯಜಮಾನ್ರಿಗೊಂದು ರಂಗನಮನ.
ಡಾ. ವಿಷ್ಣು ಅವರ ಹೆಸರನ್ನು ಕನ್ನಡಿಗರ ಮನದಾಳದಲ್ಲಿ ಹಚ್ಚ ಹಸಿರಾಗಿರಿಸಲು ಅವರ ಅಭಿಮಾನಿಗಳಿಂದ ಡಾ. ವಿಷ್ಣುವರ್ಧನ ನಾಟಕೋತ್ಸವ ಎಂಬ ಅರ್ಥಪೂರ್ಣ ಕಾರ್ಯಕ್ರಮ ಸೆಪ್ಟೆಂಬರ್ 18 ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಈ ರಂಗೋತ್ಸವ ಯಶಸ್ವಿಯಾಗಲಿ. ಯಜಮಾನರ ಹೆಸರು ಅಜರಾಮರವಾಗಲಿ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.