ನಾಳೆ ವರದರಾಜು ಪ್ರಶಸ್ತಿ ಪ್ರದಾನ
Team Udayavani, Feb 18, 2018, 6:00 PM IST
ಡಾ.ರಾಜಕುಮಾರ್ ಅವರ ಸಹೋದರ ಎಸ್.ಪಿ. ವರದರಾಜು ಅವರ ಹೆಸರಿನಲ್ಲಿ ಕಳೆದ ಹನ್ನೊಂದು ವರ್ಷಗಳಿಂದಲೂ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಈ ಬಾರಿ ನಡೆಯಲಿರುವ ಹನ್ನೆರಡನೇ ಪ್ರಶಸ್ತಿಗೆ ರಂಗಭೂಮಿಯ ಹಿರಿಯ ಕಲಾವಿದೆ ಪ್ರತಿಭಾ ನಾರಾಯಣ ಹಾಗು ಹಿರಿಯ ನಟ ಎಂ.ಎಸ್.ಉಮೇಶ್ ಅವರು ಭಾಜನರಾಗಿದ್ದಾರೆ.
ಫೆ.19 (ಇಂದು) ರಂದು ನಯನಾ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಂ.ವಿ.ರಾಜಶೇಖರನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಗಾಯಕಿ ಮಂಜುಳ ಗುರುರಾಜ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಎಸ್.ಪಿ.ವರದರಾಜು ಆತ್ಮೀಯರ ಬಳಗದ ಡಾ.ಬರಗೂರು ರಾಮಚಂದ್ರಪ್ಪ, ಡಾ.ಜಯಮಾಲ, ದೊಡ್ಡ ಹುಲ್ಲೂರು ರುಕ್ಕೋಜಿ, ಎಚ್.ಎಕ.ಗೋವಿಂದಪ್ಪ, ಬಿ.ಎನ್.ಸುಬ್ರಹ್ಮಣ್ಯ ಸೇರಿದಂತೆ ಬಳಗದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಳೆದ 2007 ರಲ್ಲಿ ಎಸ್.ಪಿ.ವರದರಾಜು ಪ್ರಶಸ್ತಿ ಕೊಡಮಾಡುವುದನ್ನು ಶುರುಮಾಡಿರುವ ಆತ್ಮೀಯರ ಬಳಗ, ಇಲ್ಲಿಯವರೆಗೆ ಪರಮಶಿವನ್, ಎಂ.ಎನ್.ಲಕ್ಷ್ಮೀದೇವಿ, ಆರ್.ನಾಗರತ್ನಮ್ಮ, ಕೆ.ಎಂ.ರತ್ನಾಕರ್, ಸರೋಜಮ್ಮ ಧುತ್ತರಗಿ, ಶನಿಮಹದೇವಪ್ಪ, ಬಿ.ಪಿ.ರಾಜಮ್ಮ, ಸದಾಶಿವ ಬ್ರಹ್ಮಾವರ, ಲಾಲ್‌ವುಹಮದ್ ಅಲ್ದಾಳ, ರೇವತಿ ಕಲ್ಯಾಣಕುಮಾರ್, ರಂಗನಾಯಕಮ್ಮ, ಅಶ್ವತ್ಥನಾರಾಯಣ, ಮಮತಾ ಗುಡೂರು, ರಾಜೇಂದ್ರ ಕೃಷ್ಣ, ಫಕೀರಪ್ಪ ವರವಿ, ಶಾಂತಮ್ಮ, ಜಯಕುಮಾರ್, ಬಿ.ಜಯ, ಕೊಟ್ಟೂರು ಕೋಮಲಮ್ಮ, ಡಿಂಗ್ರಿ ನಾಗರಾಜ್, ಅಶೋಕ ಬಸ್ತಿ ಹಾಗೂ ಎಸ್.ಕೆ.ಪದ್ಮಾದೇವಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.