‘ಹ್ಯಾಪಿಲಿ ಮ್ಯಾರೀಡ್’ ಸ್ಟೋರಿ: ಪೃಥ್ವಿ ಅಂಬಾರ್-ಮಾನ್ವಿತಾ ಕಾಮತ್ ಜೋಡಿಯ ಹೊಸ ಚಿತ್ರ
Team Udayavani, Sep 2, 2021, 3:36 PM IST
“ದಿಯಾ’ ಖ್ಯಾತಿಯ ನಟ ಪೃಥ್ವಿ ಅಂಬಾರ್ ಹಾಗೂ “ಟಗರು’ ಪುಟ್ಟಿ ಮಾನ್ವಿತಾ ಕಾಮತ್ ಮೊದಲ ಬಾರಿಗೆ ತೆರೆಮೇಲೆ ಹೊಸ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರಕ್ಕೆ “ಹ್ಯಾಪಿಲಿ ಮ್ಯಾರೀಡ್’ ಎಂದು ಹೆಸರಿಡಲಾಗಿದೆ.
ಈಗಾಗಲೇ ಪ್ರಿಯಾಂಕಾ ಉಪೇಂದ್ರ ಅಭಿನಯದ “ಲೈಫ್ ಈಸ್ ಬ್ಯುಟಿಫುಲ್’ ಚಿತ್ರಕ್ಕೆ ನಿರ್ದೇಶನ ಮಾಡಿರುವ ಅರುಣ್ ಕುಮಾರ್. ಎಂ ಮತ್ತು ಸಬು ಅಲೋಷಿಯಸ್ ಜಂಟಿಯಾಗಿ ನಿರ್ದೇಶನ ಮಾಡುತ್ತಿರುವ “ಹ್ಯಾಪಿಲಿ ಮ್ಯಾರೀಡ್’ ಚಿತ್ರಕ್ಕೆ “ಫ್ರೈಡೇ ಫಿಲಂಸ್’ ಬ್ಯಾನರ್‌ನಲ್ಲಿ ಲೋಹಿತ್ ಹೆಚ್. ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.
“ಸಿಲ್ವರ್‌ಟ್ರೈಲ್ ಇಂಟರ್‌ನ್ಯಾಶನಲ್’ ಮತ್ತು “ಟಿನಿ ಹ್ಯಾಂಡ್ಸ್ ಪ್ರೊಡಕ್ಷನ್ಸ್’ ಬ್ಯಾನರ್ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವ “ಹ್ಯಾಪಿಲಿ ಮ್ಯಾರೀಡ್’ಗೆ ಬಿ. ಜಿ ಅರುಣ್, ಜೋಸ್‌ಕುಟ್ಟಿ ಮದತ್ತಿಲ್ ಮತ್ತು ರಂಜಿತ್ ಮನಂಬರಕ್ಕಟ್ ಸಹ ನಿರ್ಮಾಣವಿದೆ.
ಇದನ್ನೂ ಓದಿ:ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಫೋಟೋ ಗ್ಯಾಲರಿ
ಅತಿಯಾಗಿ ಪ್ರೀತಿಸಿ ಮದುವೆಯಾದ ಪ್ರೇಮಿಗಳ ಧೋರಣೆ ಮತ್ತು ಗುಣಗಳಿಂದ ಸಂಬಂಧಗಳು ಹೇಗೆ ಒಡೆದು ಹೋಗುತ್ತದೆ ಎನ್ನುವುದರ ಸುತ್ತ ಚಿತ್ರ ಸಾಗಲಿದ್ದು, ಲವ್‌ಕಂ ಫ್ಯಾಮಿಲಿ ಥ್ರಿಲ್ಲರ್ ಶೈಲಿಯಲ್ಲಿ “ಹ್ಯಾಪಿಲಿ ಮ್ಯಾರೀಡ್’ ಚಿತ್ರ ತೆರೆಗೆ ಬರುತ್ತಿದೆ. ಇದರ ಜೊತೆಗೆ ಬರುವ ಒಂದಷ್ಟು ವಿಭಿನ್ನ ಪಾತ್ರಗಳು ಚಿತ್ರದಕಥೆಗೆ ತಿರುವು ನೀಡಲಿದ್ದು, ಮನುಷ್ಯನಲ್ಲಿರುವ ಒಳಿತು-ಕೆಡುಕುಗಳನ್ನು ತೆರೆದಿಡುತ್ತಾ ಸಾಗುತ್ತದೆ.
ಮನೋ ವೈಜ್ಞಾನಿಕ ಆಟದಲ್ಲಿ ಮುಂದೇನು ಎನ್ನುವಂತ ಸನ್ನಿವೇಶಗಳು ನೋಡುಗನಿಗೆಕುತೂಹಲ ಹುಟ್ಟಿಸುತ್ತದೆ. ಒಂದು ಮಾಮೂಲಿ ಜಗಳ ತಾರಕಕ್ಕೆ ಹೋದಾಗ ಏನಾಗುತ್ತದೆ ಎಂಬುದನ್ನು ತೋರಿಸುವ ಪ್ರಯತ್ನ ಈ ಸಿನಿಮಾದಲ್ಲಿ ಮಾಡಲಾಗಿದೆ ಎಂದು ಕಥಾಹಂದರದ ವಿವರಣೆ ನೀಡುತ್ತದೆ ಚಿತ್ರತಂಡ.
ಇನ್ನು “ಹ್ಯಾಪಿಲಿ ಮ್ಯಾರೀಡ್’ ಚಿತ್ರದಲ್ಲಿ ಪೃಥ್ವಿ ಅಂಬಾರ್ ಹಾಗೂ ಮಾನ್ವಿತಾ ಕಾಮತ್ ಅವರೊಂದಿಗೆ ಧರ್ಮಣ್ಣ ಕಡೂರ್, ಶ್ರೀಜಿತ್ ರವಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ ಚಿತ್ರದ ಚಿತ್ರೀಕರಣ ಶುರು ಮಾಡಿರುವ ಚಿತ್ರತಂಡ, ಬೆಂಗಳೂರು ಸುತ್ತಮುತ್ತ ಸುಮಾರು ಎರಡು ವಾರಗಳ ಚಿತ್ರೀಕರಣ ಮುಗಿಸಿದೆ. ಉಳಿದಂತೆ “ಹ್ಯಾಪಿಲಿ ಮ್ಯಾರೀಡ್’ ಚಿತ್ರದಲ್ಲಿ ಹಾಡುಗಳಿಗೆ ಅವಕಾಶ ಇರುವುದಿಲ್ಲವಂತೆ.
ಚಿತ್ರಕ್ಕೆ ಜಿತಿನ್ ದಾಸ್ ಛಾಯಾಗ್ರಹಣ, ಎಂ.ಜೆ ವಿನಯನ್ ಸಂಕಲನವಿದೆ. ಇತ್ತೀಚೆಗೆ “ಹ್ಯಾಪಿಲಿ ಮ್ಯಾರೀಡ್’ ಚಿತ್ರದ ಮೊದಲ ಮೋಶನ್ ಪೋಸ್ಟರ್ ಅನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.