ಮಾ.24ರಂದು ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್
Team Udayavani, Mar 23, 2021, 11:14 AM IST
ಮಣಿಪಾಲ: ಕನ್ನಡ, ತುಳು ಚಿತ್ರರಂಗದ ಯುವ ನಟ, ‘ದಿಯಾ’ ಚಿತ್ರದಿಂದ ರಾಜ್ಯಾದ್ಯಂತ ಮನೆಮಾತಾದ ನಟ ಪೃಥ್ವಿ ಅಂಬಾರ್ ಅವರು ಮಾರ್ಚ್ 24ರಂದು ‘ಉದಯವಾಣಿ ಡಾಟ್ ಕಾಮ್’ ನ ತೆರೆದಿದೆ ಮನೆ ಬಾ ಅತಿಥಿ ಫೇಸ್ ಬುಕ್ ಲೈವ್ ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪೃಥ್ವಿ ಅಂಬಾರ್ ಅವರು ಸಂಜೆ ಮಾರ್ಚ್ 24ರಂದು 5.30 ರಿಂದ ಫೇಸ್ ಲೈವ್ ನಲ್ಲಿ ಮಾತುಕತೆ ನಡೆಸಲಿದ್ದು, ಈ ಸಂದರ್ಭದಲ್ಲಿ ಓದುಗರು ಕೂಡಾ ಅವರಿಗೆ ತಮ್ಮ ಪ್ರಶ್ನೆಗಳನ್ನು ಲೈವ್ ಚಾಟ್ ಮೂಲಕ ಕೇಳಿ ಉತ್ತರ ಪಡೆಯಬಹುದಾಗಿದೆ.
ಇದನ್ನೂ ಓದಿ:ಸಖತ್ ನಲ್ಲಿ ಅಂಧನಾದ ಗಣೇಶ್: ಕುತೂಹಲ ಹೆಚ್ಚಿಸಿದ ಹೊಸತರದ ಪಾತ್ರ
ಉಡುಪಿ ಜಿಲ್ಲೆಯ ಕಾಪುವಿನವರಾದ ಪೃಥ್ವಿ ಅಂಬಾರ್ ಮಂಗಳೂರಿನಲ್ಲಿ ಆರ್.ಜೆ (ರೇಡಿಯೋ ಜಾಕಿ) ಯಾಗಿ ವೃತ್ತಿ ಜೀವನ ಆರಂಭಿಸಿದರು. ಮಾಡೆಲ್, ಡ್ಯಾನ್ಸರ್ ಆಗಿ ಮಿಂಚಿದ್ದ ಅವರು, 2014ರಲ್ಲಿ ಬರ್ಕೆ ಎಂಬ ತುಳು ಚಿತ್ರದ ಮೂಲಕ ದೊಡ್ಡ ಪರದೆಗೆ ಪದಾರ್ಪಣೆ ಮಾಡಿದರು.
ತುಳು ಚಿತ್ರಗಳಾದ ‘ಪಿಲಿಬೈಲ್ ಯಮುನಕ್ಕ’, ‘ಪಮ್ಮಣ್ಣೆ ದಿ ಗ್ರೇಟ್’, ‘ಗೋಲ್ಮಾಲ್’, ‘ಆಟಿದೊಂಜಿ ದಿನ’, ‘ಎನ್ನ’, ‘ರಡ್ಡ್ ಎಕ್ರೆ’ ಮುಂತಾದ ಚಿತ್ರಗಳಲ್ಲಿ ನಟಿಸಿ ಕರಾವಳಿ ಭಾಗದಲ್ಲಿ ಮನೆಮಾತಾದರು. ಸದ್ಯ ಸೂರಜ್ ಶೆಟ್ಟಿ ನಿರ್ದೇಶನದ, ಪೃಥ್ವಿ ಅಂಬಾರ್ ನಾಯಕ ನಟನಾಗಿ ಅಭಿನಯಿಸುತ್ತಿರುವ ‘ಇಂಗ್ಲೀಷ್’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
ಇದನ್ನೂ ಓದಿ: 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಇಲ್ಲಿದೆ ನೋಡಿ
ಕಳೆದ ವರ್ಷ ಬಿಡುಗಡೆಯಾದ ಕನ್ನಡದ ‘ದಿಯಾ’ ಚಿತ್ರದಲ್ಲಿನ ಪೃಥ್ವಿ ಅಂಬಾರ್ ನಟನೆ ಅವರನ್ನು ರಾಜ್ಯಾದ್ಯಂತ ಗುರುತಿಸುವಂತೆ ಮಾಡಿದೆ. ಬಳಿಕ ಕನ್ನಡದ “ಜೊತೆ ಜೊತೆಯಲಿ” ಧಾರವಾಹಿಯಲ್ಲಿ ‘ನೀಲ್’ ಪಾತ್ರದಲ್ಲಿ ಮಿಂಚಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.