ಪೃಥ್ವಿ ಅಂಬರ್ ನಟನೆಯ ‘ದೂರದರ್ಶನ’ ಫಸ್ಟ್ ಲುಕ್ ಬಂತು
Team Udayavani, Jul 22, 2022, 4:16 PM IST
ಪೃಥ್ವಿ ಅಂಬರ್ ನಟನೆಯ “ದೂರದರ್ಶನ’ ಚಿತ್ರದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಮೂಡಿ ಬಂದಿರುವ ಪೋಸ್ಟರ್ನಲ್ಲಿ ಪೃಥ್ವಿ ಅಂಬರ್, ಉಗ್ರಂ ಮಂಜು, ಹರಿಣಿ, ಸುಂದರ್, ಆಯಾನ ಕಾಣಿಸಿಕೊಂಡಿದ್ದು, ಜೊತೆಗೆ ದೂರದರ್ಶನವನ್ನು ಚಿತ್ರತಂಡ ಪೋಸ್ಟರ್ನಲ್ಲಿ ತೋರಿಸಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸುಕೇಶ್ ಶೆಟ್ಟಿ, 1980ರ ಕಾಲಘಟ್ಟದಲ್ಲಿ ನಡೆಯುವ ಸಬ್ಜೆಕ್ಟ್ ಇದು. ನಾವು ನಮ್ಮ ಹಿರಿಯರ ಜೊತೆ ಅನುಭವಿಸಿ, ಕಳೆದು ಹೋದ, ನಾವು ನೋಡಿರುವ, ಕೇಳಿರುವ ಮಾಹಿತಿ ಕಲೆ ಹಾಕಿ ಕಥೆಯನ್ನು ಕಟ್ಟಿಕೊಡಲಾಗಿದೆ. ಒಂದು ಟಿವಿ ಸುತ್ತ ಕಥೆ ನಡೆಯುತ್ತದೆ. ಪೃಥ್ವಿ, ಉಗ್ರಂ ಮಂಜು ಹೀಗೆ ಪ್ರತಿಯೊಬ್ಬರನ್ನು ನೀವು ಬೇರೆ ರೀತಿ ನೋಡಬಹುದು. 1980 ಕಾಲಘಟ್ಟ ಅಂದ್ರೆ ರೆಟ್ರೋ ಅಂದುಕೊಳ್ತಾರೆ. ನಾವು ರಿಯಲಿಸ್ಟಿಕ್ ಆಗಿ, ಅದೇ ರೀತಿ ಮ್ಯಾನರಿಸಂನಲ್ಲಿ ಕಟ್ಟಿಕೊಡಲಾಗಿದೆ’ ಎಂದು ಚಿತ್ರದ ಬಗ್ಗೆ ವಿವರ ನೀಡಿದರು.
ನಾಯಕ ಪೃಥ್ವಿ ಅಂಬರ್ ಮಾತನಾಡಿ, “ಈ ಸಿನಿಮಾ ನನಗೆ ಬಹಳ ಕನೆಕ್ಟ್ ಆಗಿದೆ. ನಾನು ಹುಟ್ಟಿದ್ದು 88ರಲ್ಲಿ. ನನ್ನ ಪೀಳಿಕೆಗೆಯಲ್ಲಿ ಪ್ರೀ-ಟೆಕ್ನಾಲಜಿ ಹಾಗೂ ಟೆಕ್ನಾಲಜಿ ಎರಡನ್ನೂ ನೋಡಿದ್ದೇನೆ. ನಾನು ಹಳ್ಳಿಯಲ್ಲಿ ಹುಟ್ಟಿದವನು. ನಮ್ಮ ಮನೆಗೆ ಟಿವಿ ಬರುವ ಮೊದಲು ಬೇರೆಯವರ ಮನೆಗೆ ಟಿವಿ ನೋಡಲು ಹೋಗುತ್ತಿದ್ದೆವು. ಆ ಬಳಿಕ ನಮ್ಮ ಮನೆಗೆ ಕಲರ್ ಟಿವಿ ಬಂತು. ಆ ದಿನಗಳು ನನಗೆ ಬಹಳ ಕಾಡಿದವು. ಸುಕೇಶ್ ಅವರು ಕಥೆ ಹೇಳಿದಾಗ ನಮ್ಮೂರ ಕಥೆ ಕೇಳಿದಂತೆ ಆಯ್ತು. ಈ ಸಿನಿಮಾ ಮಾಡಲೇಬೇಕು ಎಂದು ಮಾಡಿದ್ದೇನೆ. 80ರ ದಶಕವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೇವೆ’ ಎಂದರು. ಚಿತ್ರವನ್ನು ರಾಜೇಶ್ ಭಟ್ ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.