ಸ್ಪಟಿಕ ಸುಂದರಿ ಕಾಶ್ಮೀರದಲ್ಲಿ ಜೇಮ್ಸ್…ಕಣಿವೆ ರಾಜ್ಯದಲ್ಲಿ ಪವರ್ ಸ್ಟಾರ್ ಫೈಟ್
Team Udayavani, Feb 17, 2021, 10:00 PM IST
ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ತೆರೆಗೆ ಬರಲು ತುದಿಗಾಲಿನ ಮೇಲೆ ನಿಂತಿದೆ. ಇದರ ಜತೆಗೆ ಅವರ ಮತ್ತೊಂದು ಸಿನಿಮಾ ಜೇಮ್ಸ್ ಶೂಟಿಂಗ್ ಭರ್ಜರಿಯಾಗೇ ನಡಿಯುತ್ತಿದೆ.
ಬಹದ್ದೂರು ಖ್ಯಾತಿಯ ಚೇತನ್ ಕುಮಾರ್ ಹಾಗೂ ಚಂದನವನದ ರಾಜಕುಮಾರ ಪುನೀತ್ ಕಾಂಬಿನೇಶನ್ ನ ‘ಜೇಮ್ಸ್’ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರದ ಘೋಷಣೆಯಾದಾಗಲೇ ಗಾಂಧಿನಗರದಲ್ಲಿ ದೊಡ್ಡ ಕ್ರೇಜ್ ಹುಟ್ಟಿಕೊಂಡಿತು. ಆ್ಯಕ್ಷನ್ ಕಮರ್ಷಿಯಲ್ ಜಾನರ್ ನ ಜೇಮ್ಸ್ ಸಿನಿರಸಿಕರಿಗೆ ಭರ್ಜರಿ ಮನರಂಜನೆಯ ರಸದೌತಣ ನೀಡುವುದು ಪಕ್ಕಾ ಎನ್ನುವ ನಿರೀಕ್ಷೆ ಇದೆ.
ಸದ್ಯ ಈ ಚಿತ್ರದ ಶೂಟಿಂಗ್ ಕಾಶ್ಮೀರದಲ್ಲಿ ನಡೆಯುತ್ತಿದೆ. ಸ್ಟಟಿಕ ಸುಂದರಿ ಎಂದು ಕರೆಯಿಸಿಕೊಳ್ಳುವ ಕಾಶ್ಮೀರದಲ್ಲಿ ಹರ್ಷ ಮಾಸ್ಟರ್ ನಿರ್ದೇಶನದಲ್ಲಿ ಒಂದು ಸಾಂಗ್ ಹಾಗೂ ಸಾಹಸ ನಿರ್ದೇಶಕ ವಿಜಯ್ ನಿರ್ದೇಶನದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಚಿತ್ರೀಕರಣ ನಿಮಿತ್ತ ಇಂದು (ಫೆ.17) ಕಾಶ್ಮೀರ ಕಣಿವೆಯಲ್ಲಿ ಪುನೀತ್ ರಾಜಕುಮಾರ್ ಸೇರಿದಂತೆ ಇಡೀ ಚಿತ್ರತಂಡ ಲ್ಯಾಂಡ್ ಆಗಿದೆ.
ಇನ್ನು ಜೇಮ್ಸ್ ಸಿನಿಮಾ ಪ್ರಿಯಾ ಆನಂದ್ ಜೇಮ್ಸ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ನಾಳೆಯಿಂದ ಕಾಶ್ಮೀರದ ಸುಂದರ ತಾಣಗಳಲ್ಲಿ ಜೇಮ್ಸ್ ಚಿತ್ರದ ಚಿತ್ರೀಕರಣ ನಡೆಯಲಿದೆ. ಎ.ಹರ್ಷ ನೃತ್ಯ ನಿರ್ದೇಶನದಲ್ಲಿ ಹಾಡು ಮತ್ತು ವಿಜಯ್ ಸಾಹಸ ನಿರ್ದೇಶನದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣವನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಲಾಗುತ್ತಿದೆ#BoloBoloJames@PuneethRajkumar @BahaddurChethan @PriyaAnand #James pic.twitter.com/n1GHv6SCR1
— James The Movie (@JamesTheMovie1) February 17, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.