“ತೂಗುದೀಪ ದರ್ಶನ’ಕ್ಕೆ ಪುನೀತ್ ಸಾಥ್
ಮೀನಾ ತೂಗುದೀಪ ಹಂಚಿಕೊಂಡ ಹಲವು ವಿಷಯಗಳು ದಾಖಲು
Team Udayavani, Mar 9, 2020, 7:00 AM IST
ತೂಗುದೀಪ ಫ್ಯಾಮಿಲಿ ಕುರಿತಾದ “ತೂಗುದೀಪ ದರ್ಶನ’ ಎಂಬ ಪುಸ್ತಕವೊಂದು ಸಿದ್ಧವಾಗಿದೆ. ಪತ್ರಕರ್ತ ವಿನಾಯಕರಾಮ್ ಕಲಗಾರು ಅವರು ಬರೆದಿರುವ ಈ ಪುಸ್ತಕದ ಮುಖಪುಟವನ್ನು ಇತ್ತೀಚೆಗೆ ನಟ ಪುನೀತ್ ರಾಜ್‌ಕುಮಾರ್ ಅವರು ಬಿಡುಗಡೆ ಮಾಡಿ ಶುಭಕೋರಿದ್ದಾರೆ.
ಈ ಪುಸ್ತಕದಲ್ಲಿ ಮೀನಾ ತೂಗುದೀಪ ಅವರು ತಮ್ಮ ಕಲಾ ಕುಟುಂಬದ ಆರಂಭದ ದಿನಗಳಿಂದ ಹಿಡಿದು ಹಲವು ಅಪರೂಪದ ಹಾಗು ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತೂಗುದೀಪ ಶ್ರೀನಿವಾಸ್ ಅವರ ಕುರಿತಾದ ಅಪರೂಪದ ಘಟನೆಗಳು, ದರ್ಶನ್ ಅವರ ಸಿನಿಮಾ ಹಾದಿ, ಆ ಹಾದಿ ಯಲ್ಲಿ ಎದುರಾದ ಸವಾಲುಗಳು, ಸಮಸ್ಯೆಗಳು … ಹೀಗೆ ಹಲವು ಅಂಶಗಳನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.
ಇದು ಮೊದಲ ವರ್ಶನ್ ಆಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದರ ಬೆನ್ನಿಗೆ ಮತ್ತೂಂದು ವರ್ಶನ್ ತರುವ ತಯಾರಿಯಲ್ಲಿದ್ದಾರೆ ಲೇಖಕ ವಿನಾಯಕರಾಮ್ ಕಲಗಾರು. ಅಂದಹಾಗೆ, ಈ ಪುಸ್ತಕ ಶ್ರೀನಿವಾಸ್ ಅವರ ಜೋಹಾರ್ ಪ್ರಕಾಶನದಿಂದ ಹೊರಬರುತ್ತಿರುವುದು ವಿಶೇಷ. ಈಗಾಗಲೇ ಸಾಕಷ್ಟು ಸಿನಿಮಾ ಗಣ್ಯರು, ನಟರು, ಪುಸ್ತಕ ಬಗ್ಗೆ ಮಾತನಾಡಿದ್ದು, ದರ್ಶನ್ ಅಭಿಮಾನಿಗಳಲ್ಲಿ ಪುಸ್ತಕ ಸಾಕಷ್ಟು ಕುತೂಹಲ ಕೆರಳಿಸಿರುವುದಂತೂ ನಿಜ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.