ಚಂಬಲ್ ಕಣಿವೆಯಲ್ಲಿ ಪುನೀತ್
Team Udayavani, Jan 28, 2019, 5:40 AM IST
ಕನ್ನಡದಲ್ಲಿ ಸದ್ಯಕ್ಕೆ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಪಟ್ಟಿಯಲ್ಲಿ ನೀನಾಸಂ ಸತೀಶ್ ಅಭಿನಯದ “ಚಂಬಲ್’ ಚಿತ್ರವೂ ಒಂದು. ಈ ಚಿತ್ರ ಈಗ ಬಿಡುಗಡೆಯ ತಯಾರಿಯಲ್ಲಿದೆ. ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯಾವುದೇ ಕಟ್ ಇಲ್ಲದೆ “ಯು/ಎ’ ಪ್ರಮಾಣ ಪತ್ರ ನೀಡಿದೆ. ಈಗ “ಚಂಬಲ್’ನ ಹೊಸ ಸುದ್ದಿಯೆಂದರೆ, ಅದು ಟ್ರೇಲರ್ ಬಿಡುಗಡೆ.
ಹೌದು, ಈ ಚಿತ್ರದ ಟ್ರೇಲರ್ ಜನವರಿ 31 ರಂದು ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ಚಿತ್ರದ ಟ್ರೇಲರ್‌ಗೆ ಪುನೀತ್‌ರಾಜಕುಮಾರ್ ಅವರು ಚಾಲನೆ ನೀಡಲಿದ್ದಾರೆ. ಚಿತ್ರದ ಹೀರೋ ನೀನಾಸಂ ಸತೀಶ್ ಅವರಿಗೆ ಪುನೀತ್ ಅವರಿಂದಲೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಸಬೇಕು ಎಂಬ ಆಸೆ. ಆ ಆಸೆಗೆ ಪುನೀತ್ ಕೂಡ ಗ್ರೀನ್‌ಸಿಗ್ನಲ್ ನೀಡುತ್ತಿದ್ದು, ಸತೀಶ್ ಅವರ ಆಸೆಯಂತೆ ಜನವರಿ 31 ರಂದು ಪುನೀತ್ ಅವರು ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ.
ಈ ಹಿಂದೆ ಕೂಡ ಸತೀಶ್ ಅಭಿನಯದ “ಅಯೋಗ್ಯ’ ಚಿತ್ರದ ಹಾಡೊಂದನ್ನು ಪುನೀತ್ ಬಿಡುಗಡೆ ಮಾಡಿದ್ದರು. ಅದೇ ಖುಷಿಯಲ್ಲಿರುವ ಸತೀಶ್ ಅವರಿಂದ ಬಿಡುಗಡೆ ಮಾಡಿಸಲು ಮುಂದಾಗಿದ್ದಾರೆ. ಅಂದಹಾಗೆ, ಈ ಹಿಂದೆ ಪುನೀತ್ ಅವರಿಗೆ “ಪೃಥ್ವಿ’ ಚಿತ್ರವನ್ನು ನಿರ್ದೇಶಿಸಿದ್ದ ಜೇಕಬ್ ವರ್ಗಿಸ್ ಅವರೇ “ಚಂಬಲ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, “ಚಂಬಲ್’ ಅಂದಾಕ್ಷಣ, ಚಂಬಲ್ ಕಣಿವೆಯ ಡಕಾಯಿತರ ನೆನಪಾಗುತ್ತೆ. ಚಿತ್ರದಲ್ಲೂ ಆ ಅಂಶಗಳಿವೆಯಾ? ಎಂಬುದಕ್ಕೆ ಚಿತ್ರ ಬರುವವರೆಗೂ ಕಾಯಬೇಕು ಎಂಬುದು ಚಿತ್ರತಂಡದ ಮಾತು.
ಆದರೂ, ಟ್ರೇಲರ್‌ನಲ್ಲಿ ಒಂದಷ್ಟು ಸೂಕ್ಷ್ಮ ವಿಷಯಗಳಿವೆ. ಅದನ್ನು ನೋಡಿದವರಿಗೆ ಇದು ಯಾವ ರೀತಿಯ ಸಿನಿಮಾ ಎಂಬುದು ಗೊತ್ತಾಗಲಿದೆಯಂತೆ. ಕಥೆಯಲ್ಲಿ ಒಬ್ಬ ಅಮಾಯಕ, ಒಂದು ಕೂಪದಲ್ಲಿ ಸಿಲುಕೊಂಡು, ಒದ್ದಾಡಿ, ಆ ಬಳಿಕ ಹೇಗೆ ಹೊರಬರುತ್ತಾನೆ ಎಂಬ ವಿಷಯ ಅಡಕವಾಗಿದೆಯಂತೆ. ಇನ್ನು, ಈ ಚಿತ್ರದಲ್ಲಿ ರೋಜರ್ ನಾರಾಯಣ್, ಸೋನು ಗೌಡ, ಸರ್ದಾರ್ ಸತ್ಯ, ಅಚ್ಯುತ್ ಕುಮಾರ್ ಸೇರಿದಂತೆ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.