‘ಕಾಂತಾರ’ ಚಿತ್ರದ ರಿಷಬ್ ಪಾತ್ರವನ್ನು ‘ಅಪ್ಪು’ ಮಾಡಬೇಕಿತ್ತು, ಆದರೆ…
Team Udayavani, Sep 20, 2022, 10:46 AM IST
ರಿಷಬ್ ಶೆಟ್ಟಿ ಅವರು ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ರಿಲೀಸ್ ಆಗಿರುವ ಒಂದು ಹಾಡು ಮತ್ತು ಟ್ರೈಲರ್ ನ ಮೂಲಕ ಹವಾ ಕ್ರಿಯೇಟ್ ಮಾಡಿರುವ ರಿಷಬ್ ಶೆಟ್ರ ತಂಡ ಇದೀಗ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಹೊಂಬಾಳೆ ಫಿಲಂಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸೆ.30ರಂದು ಸಿನಿಮಾ ರಿಲೀಸ್ ಆಗುತ್ತಿದೆ.
ಕೆಆರ್ ಜಿ ಫಿಲಂಸ್ ನ ಕಾರ್ತಿಕ್ ಗೌಡ ಅವರು ಚಿತ್ರದ ಬಗ್ಗೆ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರು ‘ಕಾಂತಾರ’ ಚಿತ್ರದ ಬಗ್ಗೆ ಏನಾದ್ರೂ ಕೇಳಿ ಎಂದು ಪೋಸ್ಟ್ ಮಾಡಿದ್ದರು. ಅಲ್ಲಿ ಫ್ಯಾನ್ಸ್ ಕೇಳಿದ ಪ್ರಶ್ನೆಗಳಿಗೆ ಕಾರ್ತಿಕ್ ಗೌಡ ಉತ್ತರಿಸಿದ್ದಾರೆ.
ಈ ಪ್ರಶ್ನೋತ್ತರದ ವೇಳೆ ‘ಕಾಂತಾರ ಚಿತ್ರದ ಒಂದು ಕ್ಲಿಪ್ ಆದ್ರೂ ಅಪ್ಪು ಸರ್ ನೋಡಿದ್ದರಾ’ ಎಂದು ಒಬ್ಬರು ಕೇಳಿದ್ದಾರೆ. ಅದಕ್ಕೆ ಉತ್ತರಿಸುವ ವೇಳೆ ಇಂಟ್ರೆಸ್ಟಿಂಗ್ ವಿಚಾರವನ್ನು ಕಾರ್ತಿಕ್ ಗೌಡ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ:‘ತ್ರಿಬಲ್ ರೈಡ್’ ಮಾಡಲು ಬಂದ ಗೋಲ್ಡನ್ ಸ್ಟಾರ್
‘ಯಾರಿಗೂ ತಿಳಿಯದ ವಿಚಾರವೊಂದಿದೆ. ಅಪ್ಪು ಸರ್ ಕಾಂತಾರ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಬೇಕಿತ್ತು. ಚಿತ್ರವನ್ನು ಒಂದು ನಿರ್ದಿಷ್ಟ ಅವಧಿಯಲ್ಲೇ ಚಿತ್ರೀಕರಣ ಮಾಡಬೇಕಿತ್ತು ಆದರೆ ಅಪ್ಪು ಸರ್ ಗೆ ಇದಕ್ಕೆ ಡೇಟ್ಸ್ ಕ್ಲ್ಯಾಶ್ ಆಗುತ್ತಿದ್ದ ಕಾರಣ ಅವರೇ ರಿಷಬ್ ಶೆಟ್ಟಿ ಅವರೇ ಲೀಡ್ ಪಾತ್ರದಲ್ಲಿ ನಟಿಸುವಂತೆ ಸಲಹೆ ಕೊಟ್ಟರು’ ಎಂದು ಕಾರ್ತಿಕ್ ಗೌಡ ಹೇಳಿದ್ದಾರೆ.
Wish this had happened!
Revealed by @Karthik1423 @PuneethRajkumar @shetty_rishab@VKiragandur @hombalefilms#TheRajkumars #PuneethRajkumarLivesOn #Legend #Kantara #Appu #PowerStar #PuneethRajkumar #DrPuneethRajkumar #RishabShetty #PuneethFC pic.twitter.com/s9WiECD8As— PuneethFC™ (@PuneethFC_17) September 20, 2022
ಈ ಚಿತ್ರದಲ್ಲಿ ಕಿಶೋರ್, ರಘು ಪಾಂಡೇಶ್ವರನ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಪ್ತಮಿ ಗೌಡ ಈ ಚಿತ್ರದಲ್ಲಿ ನಾಯಕಿ. ಅಂದಹಾಗೆ, ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿದೆ. ಅಜನೀಶ್ ಲೋಕನಾಥ್ ಸಂಗೀತವಿದೆ.
“ಕಾಂತಾರ’ ದಲ್ಲಿ ಕಂಬಳವೂ ಪ್ರಮುಖ ಆಕರ್ಷಣೆ. ಅದಕ್ಕಾಗಿ ಚಿತ್ರತಂಡ ಕಂಬಳ ಓಟವನ್ನು ಆಯೋಜಿಸಿ, ಆ ಮೂಲಕ ಚಿತ್ರೀಕರಿಸಿದೆ. ಜೊತೆಗೆ ಕಂಬಳ ಓಟದಲ್ಲಿ ಸ್ವತಃ ರಿಷಭ್ ಕಾಣಿಸಿಕೊಂಡಿದ್ದು, ಅದಕ್ಕಾಗಿ ವಾರಗಟ್ಟಲೇ ತರಬೇತಿ ಕೂಡಾ ಪಡೆದಿದ್ದಾರೆ. “ಕಂಬಳ ಓಡಿದ್ದು ಒಂದು ವಿಭಿನ್ನ ಅನುಭವ. ಸಿನಿಮಾಗೆ ಅವಶ್ಯಕತೆ ಇರುವಷ್ಟನ್ನು ಮಾತ್ರ ಮಾಡಿದೆ. ಇದರ ಜತೆಗೆ ಕರಾವಳಿ ಭಾಗದ ಹಳ್ಳಿ ಯುವಕ ಮತ್ತು ಕೋಣ ಓಡಿಸುವವನು ಹೇಗಿರುತ್ತಾನೋ ಎಂಬ ಲುಕ್ ಕೂಡಾ ಇಲ್ಲಿದೆ’ ಎನ್ನುವುದು ರಿಷಭ್ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.