ಪುನೀತ್ ಹುಟ್ಟುಹಬ್ಬಕ್ಕೆ ಜೇಮ್ಸ್
Team Udayavani, Feb 7, 2019, 10:18 AM IST
ಪುನೀತ್‌ರಾಜ್‌ಕುಮಾರ್ ಅಭಿನಯದ ‘ನಟಸಾರ್ವ ಭೌಮ’ ಚಿತ್ರ ತೆರೆ ಕಂಡಿದೆ. ಈಗ ‘ಯುವರತ್ನ’ ಚಿತ್ರಕ್ಕೆ ತಯಾರಿ ನಡೆದಿದೆ. ಅದರ ಬೆನ್ನಹಿಂದೆಯೇ ಮತ್ತೂಂದು ಹೊಸ ಚಿತ್ರದ ಸುದ್ದಿಯೂ ಹೊರ ಬಿದ್ದಿದೆ. ಹೌದು, ಪುನೀತ್‌ರಾಜ್‌ಕುಮಾರ್ ಅವರು ಚೇತನ್‌ಕುಮಾರ್ ನಿರ್ದೇಶನದಲ್ಲಿ ‘ಜೇಮ್ಸ್’ ಚಿತ್ರ ಮಾಡುತ್ತಿದ್ದಾರೆ.
ಹಾಗಂತ ಇದೇನು ಹೊಸ ಸುದ್ದಿಯಂತೂ ಅಲ್ಲ. ಈ ಹಿಂದೆಯೇ ನಿರ್ದೇಶಕ ಚೇತನ್‌ಕುಮಾರ್ ‘ಜೇಮ್ಸ್’ ಚಿತ್ರವನ್ನು ಪುನೀತ್ ಅವರಿಗೆ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಈಗ ಆ ಚಿತ್ರಕ್ಕೆ ಪುನಃ ಜೀವ ಬಂದಿದೆ. ‘ಜೇಮ್ಸ್’ ಚಿತ್ರಕ್ಕೆ ಚೇತನ್‌ಕುಮಾರ್ ಕೈ ಹಾಕಿದ್ದಾರೆ. ಆ ಚಿತ್ರದಲ್ಲಿ ಪುನೀತ್ ಇರಲಿದ್ದಾರೆ ಎಂಬ ಸುದ್ದಿ ಬಿಟ್ಟರೆ ಬೇರೇನೂ ವಿಷಯ ಇರಲಿಲ್ಲ. ಈಗ ‘ಜೇಮ್ಸ್’ ಸಿನಿಮಾ ಪುನಃ ಸುದ್ದಿಯಾಗಿದೆ. ‘ಜೇಮ್ಸ್’ ಚಿತ್ರವನ್ನು ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡುತ್ತಿದ್ದಾರೆ. ಇದು ಬಿಟ್ಟರೆ ‘ಜೇಮ್ಸ್’ ಬಗ್ಗೆ ಹೆಚ್ಚೇನೂ ಮಾಹಿತಿ ಇಲ್ಲ.
ಹಾಗಂತ, ‘ಜೇಮ್ಸ್’ ಮಾಡುವ ಕುರಿತು 2015 ರಲ್ಲೇ ಒಂದು ಸುತ್ತಿನ ಮಾತುಕತೆ ನಡೆದಿತ್ತು. ಆದರೆ, ಚಿತ್ರ ಯಾವಾಗ ಎಂಬ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಈಗಲೂ ‘ಜೇಮ್ಸ್’ ಯಾವಾಗ ಸೆಟ್ಟೇರುತ್ತೆ ಎಂಬುದಕ್ಕೆ ಸ್ಪಷ್ಟ ಉತ್ತರವೂ ಇಲ್ಲ. ಯಾಕೆಂದರೆ, ಪುನೀತ್‌ರಾಜ್‌ಕುಮಾರ್ ಅವರು ಸದ್ಯಕ್ಕೆ ‘ಯುವರತ್ನ’ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಆ ಚಿತ್ರದ ಬಳಿಕ ‘ಜೇಮ್ಸ್’ ಬಗ್ಗೆ ಗಮನಹರಿಸಬಹುದು. ಅತ್ತ ನಿರ್ದೇಶಕ ಚೇತನ್‌ಕುಮಾರ್ ಕೂಡ ‘ಭರಾಟೆ’ ಚಿತ್ರೀಕರಣದಲ್ಲಿದ್ದಾರೆ.
ಆ ಚಿತ್ರ ಇನ್ನೂ ಶೇ.30 ರಷ್ಟು ಚಿತ್ರೀಕರಣದ ಬಾಕಿ ಇದೆ. ಮಾರ್ಚ್‌ನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬವಿದೆ. ಆ ಸಮಯದಲ್ಲಿ ‘ಜೇಮ್ಸ್’ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬೀಳಲಿದೆ. ಚಿತ್ರ ಯಾವಾಗ ಶುರುವಾಗಲಿದೆ, ಚಿತ್ರದಲ್ಲಿ ಯಾರೆಲ್ಲಾ ಇರುತ್ತಾರೆ ಎಂಬಿತ್ಯಾದಿ ವಿಷಯಗಳು ತಿಳಿಯಲಿವೆ. ಅದೇನೆ ಇದ್ದರೂ, ‘ಜೇಮ್ಸ್’ ಬಗ್ಗೆ ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಪುನೀತ್‌ರಾಜ್‌ಕುಮಾರ್ ಅವರ ಬರ್ತ್‌ಡೇ ವೇಳೆ ‘ಜೇಮ್ಸ್’ ಕುರಿತು ಇನ್ನಷ್ಟು ವಿಷಯಗಳು ಹೊರಬೀಳಲಿವೆ.
ಈ ಕುರಿತು ನಿರ್ದೇಶಕ ಚೇತನ್‌ಕುಮಾರ್ ಅವರನ್ನು ವಿಚಾರಿಸಿದರೆ, ‘ಒಂದು ಸುತ್ತು ಮಾತುಕತೆ ನಡೆದಿದೆ ಬಿಟ್ಟರೆ, ಬೇರೇನೂ ಚರ್ಚೆಯಾಗಿಲ್ಲ. ಎಲ್ಲವನ್ನೂ ಅಧಿಕೃತವಾಗಿ ಅವರೇ ಹೇಳಲಿದ್ದಾರೆ. ಹುಟ್ಟುಹಬ್ಬದ ದಿನದಂದು ಒಂದು ಸ್ಪಷ್ಟತೆ ಸಿಗಲಿದೆ’ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಚೇತನ್‌ಕುಮಾರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
MUST WATCH
ಹೊಸ ಸೇರ್ಪಡೆ
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.