ಪುನೀತ್ “ಯುವರತ್ನ’ನಿಗೆ ಸಯೇಶಾ ಜೋಡಿ?
Team Udayavani, Feb 5, 2019, 5:33 AM IST
ಪುನೀತ್‌ರಾಜಕುಮಾರ್ ಅಭಿನಯದ “ನಟಸಾರ್ವಭೌಮ’ ಚಿತ್ರ ಈ ವಾರ ತೆರೆಕಾಣುತ್ತಿದೆ. ಅದರ ಬೆನ್ನಲ್ಲೇ ಅವರ ಮತ್ತೂಂದು ಚಿತ್ರ “ಯುವರತ್ನ’ ಸೆಟ್ಟೇರುತ್ತಿದ್ದು, ಫೆ.14 ರಿಂದ ಆರಂಭವಾಗಲಿದೆ. ಈ ಹಿಂದೆ “ರಾಜ್‌ಕುಮಾರ’ ಚಿತ್ರ ನಿರ್ದೇಶಿಸಿದ್ದ ಸಂತೋಷ್ ಆನಂದರಾಮ್ ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಸಂಬಂಧಿಸಿದಂತೆ ಬಹುತೇಕ ಎಲ್ಲವೂ ಅಂತಿಮವಾಗಿದೆ. ಆದರೆ, ನಾಯಕಿಯ ಆಯ್ಕೆ ಮಾತ್ರ ಇನ್ನೂ ಆಗಿಲ್ಲ.
ಆರಂಭದಲ್ಲಿ “ಯುವರತ್ನ’ ಚಿತ್ರಕ್ಕೆ ತಮನ್ನಾ ಬರುತ್ತಾರೆಂಬ ಸುದ್ದಿ ಕೇಳಿಬಂದಿತ್ತು. ಈಗ ಮತ್ತೂಂದು ಹೊಸ ಹೆಸರು ಕೇಳಿಬರುತ್ತಿದೆ. ಅದು ಸಯೇಶಾ ಸೈಗಲ್. ಈಗಷ್ಟೇ ತೆಲುಗು, ಹಿಂದಿ, ತಮಿಳು ಚಿತ್ರರಂಗದಲ್ಲಿ ನೆಲೆಯೂರುತ್ತಿರುವ ಸಯೇಶಾ, “ಯುವರತ್ನ’ ಚಿತ್ರಕ್ಕೆ ನಾಯಕಿಯಾಗಲಿದ್ದಾರೆಂಬ ಹೊಸ ಸುದ್ದಿ ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಅಷ್ಟಕ್ಕೂ ಈ ಸಯೇಶಾ ಯಾರೆಂದರೆ ಬಾಲಿವುಡ್ ನಟ ಸುಮಿತ್ ಸೈಗಲ್ ಅವರ ಪುತ್ರಿ.
ಈಗಾಗಲೇ ತೆಲುಗಿನ “ಅಖೀಲ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿರುವ ಸಯೇಶಾ, ಅಜಯ್ ದೇವಗನ್ ಅಭಿನಯದ “ಶಿವಾಯ್’ ಚಿತ್ರದಲ್ಲೂ ನಟಿಸಿದ್ದಾರೆ. ಇದಲ್ಲದೇ ತಮಿಳು ಸಿನಿಮಾವೊಂದರಲ್ಲೂ ಸಯೇಶಾ ಕಾಣಿಸಿಕೊಂಡಿದ್ದಾರೆ. ಈಗ ಪುನೀತ್‌ರಾಜಕುಮಾರ್ ಅವರ “ಯುವರತ್ನ’ ಮೂಲಕ ಕನ್ನಡಕ್ಕೆ ಬರುತ್ತಾರೆನ್ನಲಾಗಿದೆ. ಆದರೆ, ಆಕೆ ಬರುವುದು ಇನ್ನೂ ಅಂತಿಮವಾಗಿಲ್ಲ.
ಈಗಷ್ಟೇ ಒಂದು ಸುತ್ತಿನ ಮಾತುಕತೆಯಾಗಿದೆ. ಇವರ ಜೊತೆಗೆ ಇನ್ನಿಬ್ಬರು ನಟಿಯರನ್ನು ಕೂಡಾ ಚಿತ್ರತಂಡ ಸಂಪರ್ಕಿಸಿದೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಸಂತೋಷ್ ಆನಂದರಾಮ್, “ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿಲ್ಲ. ಒಂದಷ್ಟು ನಟಿಯರ ಜೊತೆ ಮಾತುಕತೆ ನಡೆಯುತ್ತಿದೆ. ಅದರಲ್ಲಿ ಸಯೇಶಾ ಕೂಡಾ ಒಬ್ಬರು. ಹಾಗಂತ ಅವರೇ ನಾಯಕಿಯಾಗುತ್ತಾರೆಂದಲ್ಲ. ಮಾತುಕತೆ ನಡೆಸಿರುವುದಂತೂ ನಿಜ’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.