![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 30, 2019, 3:01 AM IST
ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಈಗ ಮತ್ತೂಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅದು ವಿದೇಶಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಜವಾಬ್ದಾರಿ. “ಗೋಧಿ ಬಣ್ಣ ಸಾಧಾರಣ ಮೈ ಕಟ್ಟು’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಪುಷ್ಕರ್ ನಂತರದ ದಿನಗಳಲ್ಲಿ ಸಿನಿಮಾ ನಿರ್ಮಾಣ, ಪೋಸ್ಟ್ ಪ್ರೊಡಕ್ಷನ್‌ಗೆ ಬೇಕಾದ ಎಲ್ಲಾ ಅಂಶಗಳೊಂದಿಗೆ ತಯಾರಾಗಿದ್ದು ಗೊತ್ತೇ ಇದೆ.
ಇತ್ತೀಚೆಗಷ್ಟೇ ಗಾಂಧಿನಗದಲ್ಲಿ ಡಿಸ್ಟ್ರಿಬ್ಯೂಶನ್ ಆಫೀಸ್ ತೆರೆದು ಸಿನಿಮಾ ವಿತರಣಾ ಕ್ಷೇತ್ರಕ್ಕೂ ಲಗ್ಗೆ ಇಟ್ಟಿರುವ ಪುಷ್ಕರ್ ಈಗ ಫಾರಿನ್ ಡಿಸ್ಟ್ರಿಬ್ಯೂಶನ್‌ನತ್ತ ಮುಖ ಮಾಡಿದ್ದಾರೆ. ಈ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಹೊಸ ಕನಸಿನ ಬಗ್ಗೆ ಮಾತನಾಡುವ ಪುಷ್ಕರ್, “ಈ ಹಿಂದೆ ನಮ್ಮ ಸಿನಿಮಾಗಳನ್ನು ಸತೀಶ್ ಶಾಸ್ತ್ರಿ ಎನ್ನುವವರ ಸ್ಯಾಂಡಲ್‌ವುಡ್ ಟಾಕೀಸ್ ಬ್ಯಾನರ್ ಮೂಲಕ ಬಿಡುಗಡೆ ಮಾಡುತ್ತಿದ್ದೆವು.
ಈಗ “ಅವನೇ ಶ್ರೀಮನ್ನಾರಾಯಣ’ ಸಿನಿಮಾ ಮೂಲಕ ಪುಷ್ಕರ್ ಬ್ಯಾನರ್ ಕೂಡಾ ವಿದೇಶದಲ್ಲಿ ಸಿನಿಮಾ ವಿತರಣೆಗೆ ಮುಂದಾಗಿದೆ. ಪುಷ್ಕರ್ ಬ್ಯಾನರ್ ಹಾಗೂ ಸ್ಯಾಂಡಲ್‌ವುಡ್ ಟಾಕೀಸ್ ಜೊತೆಯಾಗಿ ಫಾರಿನ್ ಡಿಸ್ಟ್ರಿಬ್ಯೂಶನ್ ಮಾಡಲಿದೆ’ ಎನ್ನುವ ಪುಷ್ಕರ್, ಮುಂದಿನ ದಿನಗಳಲ್ಲಿ ಬೇರೆ ಸಿನಿಮಾಗಳ ವಿತರಣೆಯನ್ನು ಮಾಡಲಿದ್ದಾರಂತೆ. “ನನ್ನ ಉದ್ದೇಶ ನಿರ್ಮಾಪಕನಿಗೆ ಮೋಸವಾಗಬಾರದು. ಎಲ್ಲವೂ ಪಾರದರ್ಶಕವಾಗಿ ನಡೆಯಬೇಕು.
ಒಂದೊಂದು ರೂಪಾಯಿಯ ಲೆಕ್ಕ ಕೂಡಾ ನೇರವಾಗಿ ನಿರ್ಮಾಪಕನ ಅಕೌಂಟ್‌ಗೆ ಬರುವಂತಾಗಬೇಕು. ನಾವು ಆ ನಿಟ್ಟಿನಲ್ಲಿ ಪ್ರಯತ್ನಿಸಲಿದ್ದೇವೆ’ ಎನ್ನುತ್ತಾರೆ. ಸುಮಾರು 20ಕ್ಕೂ ಹೆಚ್ಚು ದೇಶಗಳಲ್ಲಿ “ಅವನೇ ಶ್ರೀಮನ್ನಾರಾಯಣ’ ಬಿಡುಗಡೆಯಾಗಲಿದೆಯಂತೆ. “ಅವನೇ ಶ್ರೀಮನ್ನಾರಾಯಣ’ ಚಿತ್ರ ಡಿಸೆಂಬರ್ 27 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ನಂತರ ಪುಷ್ಕರ್ ಬೇರೆ ಸಿನಿಮಾಗಳ ವಿತರಣೆಯನ್ನು ಕರ್ನಾಟಕದಲ್ಲೂ ಮಾಡಲಿದ್ದಾರಂತೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.