‘ಕೈ ಜಾರಿದ’ ಅಕ್ಕ-ತಂಗಿಯ ‘ಪ್ರೀತಿ’!
Team Udayavani, May 31, 2022, 1:26 PM IST
ಚಿತ್ರರಂಗದಲ್ಲಿ ಪ್ರೀತಿ ಪ್ರೇಮಗಳ ಕುರಿತ ಸಿನಿಮಾಗಳು ಸಾಕಷ್ಟು ಬಂದಿವೆ. ಇಲ್ಲೊಂದು ಚಿತ್ರ ಪ್ರೀತಿಯ ಕುರಿತಂತೆ ಅರ್ಥಪೂರ್ಣ ಸಂದೇಶ ಸಾರಲು ಸಜ್ಜಾಗಿದೆ. “ಚೈತ್ರಾ ಮೂವೀಸ್ ಬ್ಯಾನರ್ ‘ ಅಡಿಯಲ್ಲಿ ತಯಾರಾದ “ಕೈ ಜಾರಿದ ಪ್ರೀತಿ’ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ.
ಈ ಹಿಂದೆ “ನಾವೆಲ್ಲರೂ ಭಾರತೀಯರು’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದ, ಪುಷ್ಪ ಭದ್ರಾವತಿ ಎರಡನೇ ಬಾರಿ ನಿರ್ಮಾಣ ಮಾಡಿ, ನಿರ್ದೇಶನ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಐದು ಹಾಡುಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ. ಚಿತ್ರದಲ್ಲಿ ಪುಷ್ಪ ಭದ್ರಾವತಿ ಮಗಳು ಮಂಜುಶ್ರೀ ಶೆಟ್ಟಿ.ಕೆ.ಆರ್ ನಾಯಕಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದು, ತಂಗಿ ಮಧು ಶೆಟ್ಟಿ. ಕೆ.ಆರ್ ಉಪ ನಾಯಕಿಯಾಗಿ ನಿರ್ವಹಿಸಿದ್ದಾರೆ.
ಸದ್ದಿಲ್ಲದೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣವನ್ನು ಮುಗಿಸಿ ಐದು ಹಾಡುಗಳನ್ನು ಬಾಕಿ ಉಳಿಸಿಕೊಂಡಿರುವ ಚಿತ್ರತಂಡ ಸದರಿ ಗೀತೆಯನ್ನು ಮಲೆನಾಡು ಭಾಗದಲ್ಲಿ ಸೆರೆ ಹಿಡಿಯಲು ತಯಾರಿ ಮಾಡಿಕೊಂಡಿದೆ.
ಚಿತ್ರದಲ್ಲಿ ಚೇತನ ಕೃಷ್ಣ ಮತ್ತು ಸನತ್ ನಾಯಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸಿಪಿಯಾಗಿ ಹಿರಿಯ ನಟ ಸುಮನ್, ಖಳನಾಗಿ ಡ್ಯಾನಿ ಕುಟ್ಟಪ್ಪ, ಕೋಟೆ ಪ್ರಭಾಕರ್, ಭುವನ್ ಗೌಡ ಉಳಿದಂತೆ ನಾಗೇಂದ್ರ ಅರಸ್, ನಾರಾಯಣಸ್ವಾಮಿ, ಬಾಬುಹಿರಣಯ್ಯ ಅಭಿನಯಿಸಿದ್ದು, ಐಟಂ ಹಾಡಿಗೆ ಆಶಿತಾ ಹೆಜ್ಜೆ ಹಾಕಿದ್ದಾರೆ.
ಸಂಗೀತ ಸಂಯೋಜಕ ಗಂಧರ್ವ ಒಂದು ಹಾಡಿಗೆ ಸಾಹಿತ್ಯ ರಚಿಸಿದ್ದು, ಆರ್.ಗಿರಿ ಛಾಯಾಗ್ರಹಣ, ಥ್ರಿಲ್ಲರ್ ಮಂಜು -ಕೌರವವೆಂಕಟೇಶ್ ಸಾಹಸ, ಗಿರಿ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ರಾಜೇಶ್ ಕೃಷ್ಣನ್, ಅನುರಾಧ ಭಟ್, ಸಂತೋಷ್ ವೆಂಕಿ, ಹೇಮಂತ್, ಚೈತ್ರಾ.ಹೆಚ್.ಜಿ ಮತ್ತು ಶ್ರೀರಾಮ್ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.