ವಿದೇಶಕ್ಕೆ ಹಾರಲಿರುವ ಪುಷ್ಪಕ ವಿಮಾನ
Team Udayavani, Jan 12, 2017, 11:32 AM IST
ರಮೇಶ್ ಅರವಿಂದ್ ಅವರ “ಪುಷ್ಪಕ ವಿಮಾನ’ದ ಹಾರಾಟ ಜೋರಾಗಿದೆ. ವಿಮಾನದಲ್ಲಿ ಪ್ರಯಾಣಿಸಿದವರೆಲ್ಲಾ ಖುಷಿಯಾಗಿದ್ದಾರೆ. ಕೇವಲ ದೇಶವಷ್ಟೇ ಅಲ್ಲದೇ, ವಿದೇಶಗಳಲ್ಲೂ “ಪುಷ್ಪಕ ವಿಮಾನ’ ಹಾರಿಸಲು ಚಿತ್ರತಂಡ ನಿರ್ಧರಿಸಿದೆ. ಮುಂದಿನ ವಾರ “ಪುಷ್ಪಕ ವಿಮಾನ’ ಸಿನಿಮಾ ವಿದೇಶಗಳಲ್ಲೂ ಬಿಡುಗಡೆಯಾಗಲಿದೆ. ಈಗಾಗಲೇ ಅದಕ್ಕೆ ಬೇಕಾದ ತಯಾರಿ ನಡೆಸಿದೆ ಚಿತ್ರತಂಡ.
ಇನ್ನು ಸಿನಿಮಾದ ಕಲೆಕ್ಷನ್ ವಿಷಯದಲ್ಲೂ ಚಿತ್ರತಂಡ ಖುಷಿಯಾಗಿದ್ದು, ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಾಗುತ್ತಿದೆ ಎಂಬುದು ಚಿತ್ರತಂಡದ ಮಾತು. ಸಾಮಾನ್ಯವಾಗಿ ಒಂದು ಸಿನಿಮಾವನ್ನು ಮಾಸ್ ಅಥವಾ ಕ್ಲಾಸ್ ಪ್ರೇಕ್ಷಕರು ಇಷ್ಟಪಡುತ್ತಾರೆ. ಆದರೆ, “ಪುಷ್ಪಕ ವಿಮಾನ’ ಚಿತ್ರವನ್ನು ಎಲ್ಲಾ ವರ್ಗದವರು ಇಷ್ಟಪಡುತ್ತಿದ್ದು, ಅದರಲ್ಲೂ ಫ್ಯಾಮಿಲಿ ಆಡಿಯನ್ಸ್ “ಪುಷ್ಪಕ ವಿಮಾನ’ವನ್ನು ಮೆಚ್ಚಿಕೊಂಡಿರೋದು ಚಿತ್ರತಂಡದ ಖುಷಿಗೆ ಕಾರಣವಾಗಿದೆ.
ಇದು ಅಪ್ಪ-ಮಗಳ ನಡುವಿನ ಸೆಂಟಿಮೆಂಟ್ ಕಥೆಯಾಗಿದ್ದು, ಮಗಳೇ ತನ್ನ ಪ್ರಪಂಚ ಎಂದು ಭಾವಿಸಿರುವ ಅಪ್ಪ ಹಾಗೂ ಅಪ್ಪನನ್ನು ಬಿಟ್ಟರೇ ಬೇರೆ ಜಗತ್ತೇ ಇಲ್ಲ ಎಂದುಕೊಂಡಿರುವ ಮಗಳ ಸಂಬಂಧದ ನಡುವೆ ನಡೆಯುವ ಕಥೆಯನ್ನು ನಿರ್ದೇಶಕ ರವೀಂದ್ರ ಅವರ ಮನತಟ್ಟುವಂತೆ ಹೇಳುವ ಮೂಲಕ “ಪುಷ್ಪಕ ವಿಮಾನ’ ಚಿತ್ರವನ್ನು ಜನ ಇಷ್ಟಪಡುತ್ತಿದ್ದಾರೆ. ಚಿತ್ರದಲ್ಲಿ ರಮೇಶ್ ಅರವಿಂದ್, ಯುವಿನಾ, ರಚಿತಾ ರಾಮ್, ಜೂಹಿ ಚಾವ್ಲಾ, ರವಿಕಾಳೆ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.