Quick 5 with Nidhi Subbaiah; ಸಿನಿಮಾ ಬಿಟ್ಟು ಎಲ್ಲೂ ಹೊರಗೆ ಹೋಗಿರಲಿಲ್ಲ..
Team Udayavani, Sep 24, 2023, 3:18 PM IST
1 ಸಿನಿಮಾರಂಗಕ್ಕೆ ನಿಧಿ ಮತ್ತೆ ಕಂ ಬ್ಯಾಕ್ ಎನ್ನಬಹುದೇ..?
ನಾನು ಇದನ್ನು ಕಂ ಬ್ಯಾಕ್ ಅಂಥ ಕರೆಯುವುದಿಲ್ಲ. ಸಿನಿಮಾದಿಂದ ಸ್ವಲ್ಪ ಗ್ಯಾಪ್ ತೆಗೆದುಕೊಂಡಿದ್ದೆ ಅಷ್ಟೇ. ಅದನ್ನು ಬಿಟ್ಟು ನಾನು ಸಿನಿಮಾದಿಂದ ಎಲ್ಲೂ ಹೊರಗೆ ಹೋಗಿರಲಿಲ್ಲ. ಹೀಗಿರುವಾಗ ಅದನ್ನು ಕಂ ಬ್ಯಾಕ್ ಅಂಥ ಹೇಳಲಾಗದು. ನಾನು ಎಲ್ಲೇ ಇದ್ರೂ ಸಿನಿಮಾದ ಬಗ್ಗೆಯೇ ಯೋಚಿಸುತ್ತಿರುತ್ತೇನೆ.
2 ಸದ್ಯ ನಿಮ್ಮ ಕೈಯಲ್ಲಿರುವ ಸಿನಿಮಾಗಳ ಬಗ್ಗೆ ಹೇಳಿ?
ಸದ್ಯದ ಮಟ್ಟಿಗೆ ಹೇಳುವುದಾದರೆ, ಕನ್ನಡದಲ್ಲಿ ಒಟ್ಟಿಗೇ ಮೂರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೇನೆ. ಉಪೇಂದ್ರ ನಟನೆ ಮತ್ತು ನಿರ್ದೇಶನದ “ಯು-ಐ’, ದಿಗಂತ್ ಹೀರೋ ಆಗಿರುವ “ಎಡಗೈಯೇ ಅಪಘಾತಕ್ಕೆ ಕಾರಣ’ ಮತ್ತು ಅನಿರುದ್ಧ್ ಹೀರೋ ಆಗಿರುವ “ಶೆಫ್ ಚಿದಂಬರ’ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೇನೆ
3 ಈ ಸಿನಿಮಾಗಳಲ್ಲಿ ನಿಮ್ಮ ಪಾತ್ರಗಳು ಹೇಗಿದೆ?
ಉಪೇಂದ್ರ ಮತ್ತು ಚಿತ್ರತಂಡದ ಸೂಚನೆಯಂತೆ, “ಯು-ಐ’ ಸಿನಿಮಾದಲ್ಲಿ ನನ್ನ ಪಾತ್ರದ ಬಗ್ಗೆ ಈಗಲೇ ಏನೂ ಹೇಳುವಂತಿಲ್ಲ. ಇನ್ನು “ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದಲ್ಲಿ ಮತ್ತೂಮ್ಮೆ ನಾನು ದಿಗಂತ್ ಜೋಡಿ ಯಾಗಿದ್ದೇವೆ. “ಶೆಫ್ ಚಿದಂಬರ’ದಲ್ಲಿ ಕೂಡ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ
4 ಮುಂದುವರೆದ “ಪಂಚರಂಗಿ’ ಕಾಂಬಿನೇಶನ್ ಬಗ್ಗೆ ಏನಂತೀರಿ..?
ಸುಮಾರು 13 ವರ್ಷಗಳ ಹಿಂದೆ ದಿಗಂತ್ ಮತ್ತು ನನ್ನ ಕಾಂಬಿನೇಶನ್ನಲ್ಲಿ “ಪಂಚರಂಗಿ’ ಸಿನಿಮಾ ಬಂದಿತ್ತು. ದೊಡ್ಡ ಹಿಟ್ ಆಗಿದ್ದ ಆ ಸಿನಿಮಾದ ಸಾಂಗ್ಸ್ ಇವತ್ತಿಗೂ ಜನ ಕೇಳುತ್ತಿ ರುತ್ತಾರೆ. ಇಂದಿಗೂ ಆ ಸಿನಿಮಾದ ಬಗ್ಗೆ ಆಡಿಯನ್ಸ್ ಮಾತನಾಡುತ್ತಾರೆ. ಅದಾದ ತುಂಬ ಗ್ಯಾಪ್ ನಂತರ ಮತ್ತೆ “ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದಲ್ಲಿ ನಾನು ದಿಗಂತ್ ಒಟ್ಟಿಗೆ ಅಭಿನಯಿಸುತ್ತಿದ್ದೇವೆ. ಅದೇ ಥರ ಫನ್ ಇರುವಂಥ ಸಿನಿಮಾವಿದು.
5 ಸಿನಿಮಾ ಬಿಟ್ಟು ಬೇರೇನು ಯೋಚನೆ?
ನನಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ಹಾಗಾಗಿ ದಿನದ ಬಹುತೇಕ ಸಮಯ ಸಿನಿಮಾದ ಬಗ್ಗೆಯೇ ಯೋಜಿಸುತ್ತೇನೆ. ಸಿನಿಮಾ ಬಿಟ್ಟು ಬೇರೆ ಅಂದ್ರೆ, ಯೋಗರಾಜ್ ಭಟ್ ಜೊತೆ “ನೀಲಿ…’ ಎಂಬ ಮ್ಯೂಸಿಕ್ ವಿಡಿಯೋ ಆಲ್ಬಂನಲ್ಲಿ ನಾನೇ ನಟಿಸಿ, ಹಾಡಿದ್ದೇನೆ. ಈ ಮೂಲಕ ಸಿಂಗರ್ ಕೂಡ ಆಗಿದ್ದೇನೆ. ಹಳೆಯ ಭಾವಗೀತೆ ಮತ್ತು ಜಾನಪದ ಗೀತೆಯನ್ನು ಈ ಮ್ಯೂಸಿಕ್ ಆಲ್ಬಂನಲ್ಲಿ ಹೊಸರೂಪದಲ್ಲಿ ತರಲಾಗುತ್ತಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.