ಶೀಘ್ರ ವಿಲನ್ ಟೀಸರ್
Team Udayavani, Jan 23, 2017, 11:20 AM IST
ಪ್ರೇಮ್ ಈ ಬಾರಿಯಾದರೂ “ದಿ ವಿಲನ್’ ಸಿನಿಮಾವನ್ನು ಆರಂಭಿಸುತ್ತಾರಾ ಎಂದು ಅನೇಕರು ಕೇಳುತ್ತಿದ್ದರು. ಅದಕ್ಕೆ ಉತ್ತರವಾಗಿ ಪ್ರೇಮ್ ಈಗ “ದಿ ವಿಲನ್’ ಸಿನಿಮಾದ ಕೆಲಸ ಆರಂಭಿಸಿದ್ದಾರೆ. ಚಿತ್ರದ ಟೀಸರ್ ಶೂಟ್ ಮಾಡುವಲ್ಲಿ ಪ್ರೇಮ್ ಬಿಝಿಯಾಗಿದ್ದು, ಟೀಸರ್ ಹಾಗೂ ಫೋಸ್ಟರ್ ಅನ್ನು ಅದ್ಧೂರಿಯಾಗಿ ಲಾಂಚ್ ಮಾಡುವ ಉದ್ದೇಶ ಚಿತ್ರತಂಡಕ್ಕಿದೆ. ಚಿತ್ರದಲ್ಲಿ ಶಿವರಾಜಕುಮಾರ್ ಹಾಗೂ ಸುದೀಪ್ ಜೊತೆಯಾಗಿ ನಟಿಸುತ್ತಿದ್ದು, ಪ್ರೇಮ್ ಈಗ ಶಿವರಾಜಕುಮಾರ್ ಅವರನ್ನೊಳಗೊಂಡ ತಂಡದ ಸುತ್ತ ಟೀಸರ್ ಚಿತ್ರೀಕರಣ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಸುದೀಪ್ ಅವರೊಂದಿಗೆ ಹೈದರಾಬಾದ್ನಲ್ಲಿ ಟೀಸರ್ ಶೂಟ್ ಮಾಡುವ ಉದ್ದೇಶ ಪ್ರೇಮ್ಗಿದೆ. ಇತ್ತೀಚೆಗೆ ಪ್ರೇಮ್, ಫೇಸ್ಬುಕ್ ಲೈವ್ ಮೂಲಕ ಚಿತ್ರತಂಡವನ್ನು ಪರಿಚಯಿಸಿದ್ದರು. ಚಿತ್ರದಲ್ಲಿ ನಟಿಸುತ್ತಿರುವ ಹೊಸ ಹುಡುಗರನ್ನು ಕೂಡಾ ಪ್ರೇಮ್, ಫೇಸ್ಬುಕ್ ಲೈವ್ ಮೂಲಕ ಪರಿಚಯಿಸಿದ್ದಾರೆ. “ಟೀಸರ್ ಚಿತ್ರೀಕರಣದ ಕೆಲಸ ಆರಂಭವಾಗಿದೆ. ಮುಂದಿನ ತಿಂಗಳು ಅದ್ಧೂರಿಯಾಗಿ ಟೀಸರ್ ಬಿಡುಗಡೆಯಾಗಲಿದೆ. ಸತತವಾಗಿ ಚಿತ್ರೀಕರಣ ಕೂಡಾ ಆರಂಭಿಸುವ ಉದ್ದೇಶವಿದೆ’ ಎನ್ನುತ್ತಾರೆ ಪ್ರೇಮ್.
ಚಿತ್ರದಲ್ಲಿ ಶ್ರುತಿ ಹರಿಹರನ್ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ, ಶಿವರಾಜಕುಮಾರ್ಗೆ ಜೋಡಿಯಾಗಿ ನಟಿಸುತ್ತಿದ್ದಾರಂತೆ. ಉಳಿದಂತೆ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಅದ್ಧೂರಿಯಾಗಿ ಟೀಸರ್ ಬಿಡುಗಡೆ ಮಾಡಬೇಕೆಂಬ ಉದ್ದೇಶ ಪ್ರೇಮ್ಗಿದ್ದು, ಅದಕ್ಕಾಗಿ ಭರ್ಜರಿ ತಯಾರಿ ಕೂಡಾ ನಡೆಸುತ್ತಿದ್ದಾರೆ. ಸಹಜವಾಗಿಯೇ ಶಿವರಾಜಕುಮಾರ್ ಕೂಡಾ ಪ್ರೇಮ್ ನಿರ್ದೇಶನದಲ್ಲಿ ನಟಿಸುತ್ತಿರುವ ಬಗ್ಗೆ ಖುಷಿಯಾಗಿದ್ದಾರೆ.
ಇವರಿಬ್ಬರ ಕಾಂಬಿನೇಶನ್ನಲ್ಲಿ ಬರುತ್ತಿರುವ ಮೂರನೇ ಸಿನಿಮಾವಿದು. ಈ ಹಿಂದೆ “ಜೋಗಿ’ ಹಾಗೂ “ಜೋಗಯ್ಯ’ ಸಿನಿಮಾದಲ್ಲಿ ಶಿವಣ್ಣ ನಟಿಸಿದ್ದು, “ಜೋಗಿ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ “ದಿ ವಿಲನ್’ ಮೇಲೂ ಶಿವಣ್ಣನಿಗೆ ವಿಶ್ವಾಸವಿದೆ. ಚಿತ್ರವನ್ನು ಸಿ.ಆರ್.ಮನೋಹರ್ ನಿರ್ಮಿಸುತ್ತಿದ್ದಾರೆ. ಅದ್ಧೂರಿ ಬಜೆಟ್ನಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಪರಭಾಷಾ ಚಿತ್ರರಂಗ ತಿರುಗಿ ನೋಡುವಂತೆ ಸಿನಿಮಾ ಮಾಡಬೇಕೆಂಬ ಆಸೆ ಮನೋಹರ್ಗಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.