ಅತ್ತೆಯಿಂದ ಭೇಷ್ ಎನಿಸಿಕೊಂಡ ರಾಧಿಕಾ
Team Udayavani, Oct 18, 2017, 11:00 PM IST
ಆಗಿಂದ ಈಗ ಒಂದೇ ವ್ಯತ್ಯಾಸ. ಆಗ ದಿನಾ ಬೆಳಿಗ್ಗೆ ರಾಧಿಕಾ ಪಂಡಿತ್ ಅವರನ್ನು ಅವರ ತಾಯಿ ಎಬ್ಬಿಸಿ ಬೋರ್ನ್ವೀಟಾ ಕೊಡುತ್ತಿದ್ದರಂತೆ. ಈಗ ಅದೇ ಕೆಲಸವನ್ನು ಖುದ್ದು ರಾಧಿಕಾ ಪಂಡಿತ್ ಮಾಡಬೇಕಾಗಿ ಬಂದಿದೆ. ಈ ಮಾತು ಯಾಕೆ ಬಂತು ಎಂದರೆ, ಮದುವೆ ಆದ ಮೇಲೆ ಜೀವನದಲ್ಲಾದ ಬದಲಾವಣೆ ಏನು, ಎಂದರೆ ರಾಧಿಕಾ ಹೇಳಿದ್ದು ಇದೇ ಮಾತು. “ಜವಾಬ್ದಾರಿ ಹೆಚ್ಚಿದೆ. ಮದುವೆಗೆ ಮುನ್ನ ಅಮ್ಮ ನನ್ನನ್ನ ಎಬ್ಬಿಸಿ ಬೋರ್ನ್ವೀಟಾ ಕೊಡೋರು. ಈಗ ನಾನೇ ಕೊಡಬೇಕು. ಅದಕ್ಕೇ ಹೇಳಿದ್ದು ಜವಾಬ್ದಾರಿ ಹೆಚ್ಚಿದೆ ಮತ್ತು ತಾಳ್ಮೆ ಸಹ ಬಂದಿದೆ’ ಎಂದು ನಕ್ಕರು ರಾಧಿಕಾ ಪಂಡಿತ್.
ರಾಧಿಕಾ ಮದುವೆಯಾದ ಮೇಲೆ ಮಾತಿಗೆ ಸಿಕ್ಕಿರಲಿಲ್ಲ. ಸಿಕ್ಕಿರಲಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ಸಮಾರಂಭಗಳಲ್ಲಿ, ಪತ್ರಿಕಾಗೋಷ್ಠಿಯಲ್ಲಿ ಅವರು ಕಾಣಿಸಿಕೊಂಡಿದ್ದು ಕಡಿಮೆಯೇಎ. ವಿನಯಾ ಪ್ರಸಾದ್ ನಿರ್ದೇಶನದ “ಲಕ್ಷ್ಮೀನಾರಾಯಣರ ಪ್ರಪಂಚವೇ ಬೇರೆ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಬಂದಿದ್ದ ಅವರು, ಮದುವೆಯಾದ ನಂತರ ಲೈಫು ಎಷ್ಟು ಬದಲಾಗಿದೆ ಎಂದರು. ಗಂಡನಿಗೆ ಬೋರ್ನ್ವೀಟಾ ಕೊಡುವುದರಿಂದ, ಮುದ್ದೆ ಮಾಡಿ ಅತ್ತೆಯನ್ನು ಮೆಚ್ಚಿಸಿದ್ದರಿಂದ, ತಮ್ಮ ಹೆಸರಿಡದ ಹೊಸ ಚಿತ್ರದವರೆಗೂ ಹಲವು ವಿಷಯಗಳನ್ನು ಮಾತನಾಡಿದರು.
ಈ ಎಂಟು ತಿಂಗಳಲ್ಲಿ ಏನೆಲ್ಲಾ ಲೈಫ್ನಲ್ಲಿ ಏನೆಲ್ಲಾ ಬದಲಾವಣೆಯಾಗಿದೆ?
ಪ್ರಶ್ನೆ ಮುಗಿಯುತ್ತಿದ್ದಂತೆಯೇ, “ಮುದ್ದೆ ಮಾಡೋದನ್ನ ಕಲಿತೆ …’ ಎಂದು ಉತ್ತರಿಸಿದರು ರಾಧಿಕಾ ಪಂಡಿತ್. ರಾಧಿಕಾ ಪಂಡಿತ್ ಮುದ್ದೆ ಮಾಡುವುದನ್ನು ಕಲಿಯುವುದರ ಜೊತೆಗೆ, ತಮ್ಮ ಅತ್ತೆ (ಯಶ್ ತಾಯಿ)ಯಿಂದ ಮೆಚ್ಚುಗೆಯನ್ನು ಪಡೆದಿದ್ದಾರಂತೆ. ಆ ಕುರಿತು ಸಂಭ್ರಮದಿಂದ ಹೇಳಿಕೊಳ್ಳುತತಾರೆ ಅವರು. “ಮುಂಚೆ ನನಗೆ ಮುದ್ದೆ ಮಾಡೋಕೆ ಬರುತ್ತಿರಲಿಲ್ಲ. ಈಗ ಕಲಿತಿದ್ದೀನಿ. ರೌಂಡ್ ಆಗಿ, ಯಾವುದೇ ಗಂಟಿಲ್ಲದೆ ಮುದ್ದೆ ಮಾಡುವುದಕ್ಕೆ ಬರುತ್ತೆ. ತುಪ್ಪ ಹಾಕದಿದ್ದರೂ ಗಂಟಿಲ್ಲದೆ ಮಾಡುವುದಕ್ಕೆ ಬರುತ್ತದೆ.
ಅತ್ತೆ ಖುಷಿಯಾಗಿದ್ದಾರೆ. ಅವರು ಗಂಟಿದ್ಯಾ ಅಂತ ನೋಡಿದರು. ಇರಲಿಲ್ಲ. ಗೌಡ್ರು ಹೆಣ್ಮಕೆÛà ಹೀಗೆ ಮಾಡಲ್ಲ …’ ಅಂತ ಹೇಳಿ ಖುಷಿಪಟ್ಟರು ರಾಧಿಕಾ ಪಂಡಿತ್.
ಅಂದಹಾಗೆ, ರಾಧಿಕಾ ಮತ್ತೆ ಬಣ್ಣ ಹಚ್ಚುವುದಕ್ಕೆ ತಯಾರಾಗಿದ್ದಾರೆ. ಈ ತಿಂಗಳು ಅವರ ಹೊಸ ಚಿತ್ರ ಪ್ರಾರಂಭವಾಗಲಿದೆ. ಬಹುಶಃ ಮದುವೆಯಾಗಿ ಅತ್ಯಂತ ಕಡಿಮೆ ಸಮಯದಲ್ಲಿ ಎಂಟ್ರಿ ಕೊಡುತ್ತಿರುವ ನಟಿಯರಲ್ಲಿ ರಾಧಿಕಾ ಮೊದಲಿಗರೇನೋ? ಇಷ್ಟಕ್ಕೂ ಅವರು ಬ್ರೇಕ್ ಪಡೆಯುವುದಕ್ಕೂ ಒಂದು ಬಲವಾದ ಕಾರಣವಿದೆ.
“ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಬ್ರೇಕ್ ಪಡೆದಿರಲಿಲ್ಲ. ಹಾಗಾಗಿ ಮದುವೆಯಾದ ಮೇಲೆ ಬ್ರೇಕ್ ಪಡೆಯಬೇಕು ಎಂದು ನಾನು ಮೊದಲೇ ತೀರ್ಮನಿಸಿದ್ದೆ. ನನಗೆ ಫ್ಯಾಮಿಲಿ ಲೈಫ್ ಮಿಸ್ ಮಾಡಿಕೊಳ್ಳುವುದಕ್ಕೆ ಇಷ್ಟವಿರಲಿಲ್ಲ. ಹಾಗಾಗಿ ಅವಕಾಶಗಳು ಬರುತ್ತಿದ್ದರೂ, ನಾನು ಒಪ್ಪಿರಲಿಲ್ಲ. ಈಗೊಂದು ತಿಂಗಳ ಹಿಂದೆ ಒಂದು ಚಿತ್ರ ಒಪ್ಪಿಕೊಂಡೆ. ನಾನು ಒಪ್ಪಿದ್ದಿಕ್ಕೂ ಕಾರಣವಿದೆ. ಪ್ರಮುಖವಾಗಿ ಚಿತ್ರರಂಗದ ದೃಷ್ಟಿಕೋನ ಬದಲಿಸಬೇಕಿತ್ತು. ನನ್ನ ಸಮಕಾಲೀನರ್ಯಾರೂ ಮದುವೆಯಾಗಿಲ್ಲ.
ಮದುವೆ ನಟನೆಗೆ ವಾಪಸ್ಸಾಗಿಲ್ಲ. ನಾನು ಒಂದು ಉದಾಹರಣೆಯಾಗಬೇಕಿತ್ತು. ಒಬ್ಬ ನಟಿಯ ಪ್ರೊಫೆಷನಲ್ ಜೀವನಕ್ಕೂ ಪರ್ಸನಲ್ ಜೀವನಕ್ಕೂ ಸಂಬಂಧವಿಲ್ಲ. ಮದುವೆಯಾದ ನಂತರ ಸಹ ನಟಿಸಬಹುದು ಎಂದು ಜನರಿಗೆ ಹೇಳಬೇಕಿತ್ತು. ಅಷ್ಟೇ ಅಲ್ಲ, ಮಹಿಳಾ ಪ್ರಧಾನ ಚಿತ್ರವೊಂದರ ಮೂಲಕ ಬರುವುದಕ್ಕೆ ಇಷ್ಟ ಇರಲಿಲ್ಲ. ಒಂದು ಕಮರ್ಷಿಯಲ್ ಚಿತ್ರದ ಮೂಲಕವೇ ವಾಪಸ್ಸು ಬರಬೇಕು ಎಂಬ ಆಸೆ ಇತ್ತು.
ಹೀಗಿರುವಾಗಲೇ ನನಗೆ ರಾಕ್‌ಲೈನ್ ಪ್ರೊಡಕ್ಷನ್‌ನಿಂದ ಒಂದು ಚಿತ್ರದಲ್ಲಿ ನಟಿಸೋಕೆ ಅವಕಾಶ ಬಂತು. ಚಿತ್ರಕ್ಕೆ ಹೆಸರಿಟ್ಟಿಲ್ಲ. ಪ್ರಿಯಾ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಚೆನ್ನಾಗಿದೆ. ಪಾತ್ರ ಇಷ್ಟವಾಯಿತು. ಅದಕ್ಕೇ ಒಪ್ಪಿಕೊಂಡೆ. ಈ ಕಥೆ ಮದುವೆಗೂ ಮುನ್ನವೇ ಬಂದಿದ್ದರೂ, ಕಣ್ಣುಮುಚ್ಚಿ ಒಪ್ಪಿಕೊಳ್ಳುತ್ತಿದ್ದೆ’ ಎನ್ನುತ್ತಾರೆ ರಾಧಿಕಾ ಪಂಡಿತ್. ನಿರೂಪ್ ಭಂಡಾರಿ ನಾಯಕನಾಗಿರುವ ಈ ಹೆಸರಿಡದ ಸಿನಿಮಾ ಸೆಪ್ಟೆಂಬರ್ 15ಕ್ಕೆ ಶುರುವಾಗಲಿದೆಯಂತೆ.
ಯಶ್ ಮತ್ತು ರಾಧಿಕಾ ಇಬ್ಬರೂ ಪ್ರೊಡಕ್ಷನ್ ಕಂಪೆನಿ ಶುರು ಮಾಡುತ್ತಾರೆಂಬ ಸುದ್ದಿ ಇತ್ತು. ಆ ಕೆಲಸ ಸದ್ಯಕ್ಕಿಲ್ಲವಂತೆ. ಮುಂದೊಂದು ದಿನ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳುತ್ತಾರೆ. ಹಾಗಾದರೆ, ಮುಂದಿನ ಯೋಜನೆ ಮತ್ತು ಕನಸು ಏನು ಎಂದರೆ, ಹೊಸ ಮನೆಗೆ ಶಿಫ್ಟ್ ಆಗುವುದು ಎಂಬ ಉತ್ತರ ಬರುತ್ತದೆ. “ಗಾಲ್ಫ್ ಕೋರ್ಸ್ ಎದುರು ಯಶ್ ಹೊಸದೊಂದು ಪೆಂಟ್ ಹೌಸ್ ಕೊಂಡಿದ್ದಾರೆ. ಅದರ ಇಂಟೀರಿಯರ್ ಇನ್ನೂ ಆಗಿಲ್ಲ. ಅದಾದ ಮೇಲೆ ಆ ಮನೆಗೆ ಶಿಫ್ಟ್ ಆಗುತ್ತೇವೆ’ ಎನ್ನುತ್ತಾರೆ ರಾಧಿಕಾ ಪಂಡಿತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.