ವರ್ಷಾಂತ್ಯದಲ್ಲಿ ರಾಧಿಕಾ ಹೋಂಬ್ಯಾನರ್ ಸಿನಿಮಾ
Team Udayavani, Jul 30, 2017, 10:24 AM IST
ಒಂದಷ್ಟು ಸಮಯ ಸಿನಿಬದುಕಿನಿಂದ ಬ್ರೇಕ್ ತಗೊಂಡಿದ್ದ ರಾಧಿಕಾ ಈಗ ಮತ್ತೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ “ಕಾಂಟ್ರ್ಯಾಕ್ಟ್’ ಹಾಗೂ “ರಾಜೇಂದ್ರ ಪೊನ್ನಪ್ಪ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಡ್ಯಾನ್ಸ್ ಶೋವೊಂದರಲ್ಲೂ ತೀರ್ಪುಗಾರರಾಗಿದ್ದಾರೆ. ಸದ್ಯ ರಾಧಿಕಾ ಅವರಿಗೆ ಸಾಕಷ್ಟು ಕಥೆಗಳು ಹುಡುಕಿಕೊಂಡು ಬರುತ್ತಿವೆಯಂತೆ. ಈಗಾಗಲೇ ನಾಲ್ಕೈದು ಕಥೆಗಳನ್ನು ಕೇಳಿದ್ದಾರೆ. ಮುಂದೆ ಅವರ ಹೋಂಬ್ಯಾನರ್‌ನಲ್ಲಿ ಸಿನಿಮಾ ಮಾಡುವ ಆಲೋಚನೆ ಇದೆಯಂತೆ. ಈಗಾಗಲೇ ಎರಡು ಕಥೆ ಕೇಳಿದ್ದು, ಅದರಲ್ಲೊಂದು ಕಥೆ ಫೈನಲ್ ಆಗಲಿದೆ.
ಆ ಬಳಿಕ ಹೋಂಬ್ಯಾನರ್‌ನ ಸಿನಿಮಾ ಸೆಟ್ಟೇರಲಿದೆಯಂತೆ. “ನಾನು ಬೇರೆ ಬ್ಯಾನರ್‌ನಲ್ಲಿ ಸಿನಿಮಾ ಮಾಡಲು ರೆಡಿ. ಯಾವುದೇ ಸಿನಿಮಾ ಒಪ್ಪಿಕೊಳ್ಳುವ ಮುನ್ನ ನಾನು ನಿರ್ಮಾಪಕರು ಯಾರು, ಅವರಿಗೆ ಸಿನಿಮಾ ದಡ ಮುಟ್ಟಿಸುವ ಅಥವಾ ನಿರ್ದೇಶಕರ ಕಲ್ಪನೆಯನ್ನು ಪೂರೈಸುವ ಸಾಮರ್ಥ್ಯವಿದೆಯಾ ಎಂದು ನೋಡುತ್ತೇನೆ. ಒಂದು ಪಾತ್ರಕ್ಕೆ ಏನೆಲ್ಲಾ ಬೇಕು, ಅವೆಲ್ಲವನ್ನು ಒದಗಿಸೋದು ನಿರ್ಮಾಪಕನ ಜವಾವಾªರಿಯಾಗಿರುತ್ತದೆ. ಹಾಗಾಗಿ, ತುಂಬಾ ಎಚ್ಚರಿಕೆಯಿಂದ ಸಿನಿಮಾ ಒಪ್ಪಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ರಾಧಿಕಾ.
ಸದ್ಯ ರಾಧಿಕಾ “ಕಾಂಟ್ರ್ಯಾಕ್ಟ್’ ಸಿನಿಮಾ ಒಪ್ಪಿಕೊಳ್ಳಲು ಕಾರಣ, ಕಥೆ ಹಾಗೂ ಡ್ಯಾನ್ಸ್. ರಾಧಿಕಾ ಮೂಲತಃ ಒಳ್ಳೆಯ ಡ್ಯಾನ್ಸರ್. ಈಗ “ಕಾಂಟ್ರ್ಯಾಕ್ಟ್’ ಸಿನಿಮಾದಲ್ಲೂ ಅವರ ಪಾತ್ರಕ್ಕೆ ಡ್ಯಾನ್ಸ್ ಮಾಡುವ ಅವಕಾಶವಿದೆಯಂತೆ. “ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ. ಮೂರು ಭಾಷೆಗಳಲ್ಲಿ ತಯಾರಾಗುತ್ತಿರುವ ಚಿತ್ರ. ಅದೊಂದು ದಿನ ನಿರ್ದೇಶಕರು ಫೋನ್ ಮಾಡಿ, ನಮ್ಮ ಸಿನಿಮಾದಲ್ಲಿ ನೀವು ನಟಿಸಬೇಕೆಂದು ಕೇಳಿಕೊಂಡರು. ಕಥೆ ಕೇಳಿದೆ. ತುಂಬಾ ಇಷ್ಟವಾಯಿತು. ಮುಖ್ಯವಾಗಿ ಇಲ್ಲಿ ಡ್ಯಾನ್ಸ್‌ಗೆ ತುಂಬಾ ಸ್ಕೋಪ್ ಇದೆ. ಹಾಗಾಗಿ, ಒಪ್ಪಿಕೊಂಡೆ’ ಎನ್ನುತ್ತಾರೆ ರಾಧಿಕಾ.
ಇನ್ನು ರಾಧಿಕಾ ಸಿನಿಮಾದಲ್ಲಿ ಆ್ಯಕ್ಟೀವ್ ಆಗಿರುತ್ತಾರಂತೆ. ಹಾಗಂತ ಬಂದ ಕಥೆಗಳನ್ನೆಲ್ಲಾ ಒಪ್ಪೋದಿಲ್ಲ ಎಂದು ಹೇಳಲು ಮರೆಯುವುದಿಲ್ಲ. “ನನ್ನದೇ ಆದ ಒಂದು ತಂಡವಿದೆ. ಕಥೆ ಬಂದರೆ ಅವರು ಕೇಳುತ್ತಾರೆ. ಆ ನಂತರ ನಾನು ಚರ್ಚೆ ಮಾಡುತ್ತೇನೆ. ಇಷ್ಟವಾದರೆ ಮಾಡುತ್ತೇನೆ’ ಎಂದು ತಮ್ಮ ಕಥೆಯ ಆಯ್ಕೆ ಬಗ್ಗೆ ಹೇಳುತ್ತಾರೆ ರಾಧಿಕಾ. ರಾಧಿಕಾ ಸಂಭಾವನೆ ಎಷ್ಟು, ಅವರು ಕಾಸ್ಟ್ಲಿನಾ ಎಂಬ ಪ್ರಶ್ನೆ ಬರುತ್ತದೆ. “ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವ ನಟಿಯರು ಎಷ್ಟು ಸಂಭಾವನೆ ಪಡೆಯುತ್ತಾರೋ ಅಷ್ಟು ನಾನು ಪಡೆಯುತ್ತೇನೆ.
ಹಾಗಂತ ಒಳ್ಳೆಯ ಕಥೆ ಬಂದರೆ ಸಂಭಾವನೆ ಮುಖ್ಯವಾಗೋದಿಲ್ಲ’ ಎನ್ನುತ್ತಾರೆ. ರಾಧಿಕಾ ಖುಷಿಯಾಗಲು ಮತ್ತೂಂದು ಕಾರಣವೆಂದರೆ ಅವರನ್ನು ಹುಡುಕಿಕೊಂಡು ಒಂದಷ್ಟು ವಿಭಿನ್ನ ಪಾತ್ರಗಳು ಬರುತ್ತಿವೆಯಂತೆ. ಅದರಲ್ಲಿ ಬಹುತೇಕ ನಾಯಕಿ ಪ್ರಧಾನ ಚಿತ್ರಗಳೆಂಬುದು ಗಮನಾರ್ಹ ಅಂಶ. ಹಾಗಂತ ರಾಧಿಕಾಗೆ ನಾಯಕಿ ಪ್ರಧಾನ ಚಿತ್ರವೇ ಮಾಡಬೇಕೆಂಬ ಆಸೆ ಇಲ್ಲ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಇದೆಯಷ್ಟೇ ಎನ್ನಲು ಅವರು ಮರೆಯೋದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.