“ರಗಡ್’ಗಾಗಿ ರಗಡ್ ಲುಕ್
Team Udayavani, Mar 23, 2018, 2:28 PM IST
ವಿನೋದ್ ಪ್ರಭಾಕರ್ ಅವರ ತಂದೆ ಟೈಗರ್ ಪ್ರಭಾಕರ್ ಅವರಿಗೆ “ಮಿಸ್ಟರ್ ಮೈಸೂರ್’ ಆಗುವ ಆಸೆ ಇತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಈಗ ವಿನೋದ್ ತಮ್ಮ ತಂದೆಯ ಆಸೆಯನ್ನು ಪೂರೈಸುವುದಕ್ಕೆ ಹೆಜ್ಜೆ ಇಟ್ಟಿದ್ದಾರೆ.
“ಮಿಸ್ಟರ್ ಮೈಸೂರು’ ಅಲ್ಲದಿದ್ದರೂ, ಬಾಡಿಬಿಲ್‌ಡ್ ಮಾಡಿ ವಿಜಯನಗರದಲ್ಲಿ ಮೇ ತಿಂಗಳಲ್ಲಿ ನಡೆಯುವ ಸ್ಪರ್ಧೆಗೆ ಗೆಸ್ಟ್ ಪೋಸ್ ಕೊಡೋಕ್ಕಾದರೂ ಹೋಗುವುದಕ್ಕೆ ತೀರ್ಮಾನಿಸಿದ್ದಾರೆ. ಇದೆಲ್ಲವೂ ಶುರುವಾಗಿದ್ದು ವಿನೋದ್ ಅಭಿನಯದ “ರಗಡ್’ ಚಿತ್ರದಿಂದ. ಆ ಚಿತ್ರದಲ್ಲಿನ ಒಂದು ದೃಶ್ಯಕ್ಕೆ ಏಯ್ಟ್ ಪ್ಯಾಕ್‌ನ ಅವಶ್ಯಕತೆ ಇತ್ತಂತೆ.
ಅದಕ್ಕಾಗಿ ವರ್ಕೌಟ್ ಮಾಡುತ್ತಾ ಮಾಡುತ್ತಾ ಈಗ ಏಯ್ಟ್ ಪ್ಯಾಕ್ ಮಾಡಿ ಸ್ಪರ್ಧೆಯಲ್ಲಿ ಗೆಸ್ಟ್ ಪೋಸ್ ಕೊಡುತ್ತಿರುವುದಷ್ಟೇ ಅಲ್ಲ, ತಮ್ಮ ಹೊಸ ಲುಕ್‌ನ ಫೋಟೋಶೂಟ್ ಮಾಡಿಸಿದ್ದಾರೆ. ಕಳೆದ ಆರು ತಿಂಗಳಿಂದ ಜಿಮ್‌ನಲ್ಲಿ ಸಖತ್ ವರ್ಕೌಟ್ ಮಾಡಿ, ಉಪ್ಪು-ಖಾರವಿಲ್ಲದ ಡಯಟ್ ಫುಡ್ ತಿಂದು ದೇಹವನ್ನು ಸಖತ್ ಫಿಟ್ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.