ಮನೆ ಕೆಲಸದವರ ಜೊತೆ ರಾಘಣ್ಣ ಹೊಸ ವರ್ಷ ಆಚರಣೆ
Team Udayavani, Jan 5, 2020, 7:00 AM IST
ಈ ಬಾರಿ ಪ್ರತಿಯೊಬ್ಬರೂ ಹೊಸ ವರ್ಷವನ್ನು ಅವರದೇ ಆದ ಶೈಲಿಯಲ್ಲಿ ಆಚರಣೆ ಮಾಡಿದ್ದಾರೆ. ಸ್ಟಾರ್ಗಳೂ ಸಹ ತುಂಬ ಉತ್ಸಾಹದಿಂದಲೇ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ನಟ ಕಮ್ ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಅವರು ಈ ಬಾರಿ ಹೊಸ ವರ್ಷವನ್ನು ತುಂಬಾ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಹೌದು, ಅವರ ಮನೆಯಲ್ಲಿ ಹಲವು ವಿಭಾಗಗಳಲ್ಲಿ ಕೆಲಸ ಮಾಡುವವರ ಜೊತೆ ಸೇರಿ ಹೊಸ ವರ್ಷವನ್ನು ಸಂಭ್ರಮಿಸಿದ್ದಾರೆ.
ಅವರನ್ನೆಲ್ಲಾ ಕರೆದು, ಒಂದಷ್ಟು ಮಾತನಾಡಿ, ಅವರೊಟ್ಟಿಗೆ ಕುಳಿತು ಊಟ ಮಾಡಿದ್ದು ವಿಶೇಷ. ತಮ್ಮ ಮನೆಯಲ್ಲಿ ಕಸಗೂಡಿಸುವವರು, ಪಾತ್ರ, ಬಟ್ಟೆ ತೊಳೆಯುವವರು ಸೇರಿದಂತೆ ಎಲ್ಲರನ್ನೂ ಹೋಟೆಲ್ಗೆ ಕರೆದುಕೊಂಡು ಹೋಗಿ ಊಟ ಮಾಡಿಸಿದ್ದಾರೆ. ಈ ವೇಳೆ, ತಮ್ಮ ಮನೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಸಹ ನಮ್ಮ ಕುಟುಂಬದವರಿದ್ದಂತೆ ಎಂದು ಹೇಳಿಕೊಂಡಿದ್ದಾರೆ.
ರಾಜಕುಮಾರ್ ಅವರು ಸಹ ಮನೆಯಲ್ಲಿ ಕೆಲಸ ಮಾಡುವವರ ಜೊತೆ ಊಟ ಮಾಡುತ್ತಿದ್ದದ್ದನ್ನು ಪುತ್ರ ರಾಘವೇಂದ್ರ ರಾಜಕುಮಾರ್ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅಂತೂ ರಾಘವೇಂದ್ರ ರಾಜಕುಮಾರ್ ಅವರು ಈ ವರ್ಷ ಅರ್ಥಪೂರ್ಣ ಎಂಬಂತೆ ಹೊಸ ವರ್ಷವನ್ನು ಆಚರಿಸಿಕೊಂಡ ಖುಷಿಯಲ್ಲಿದ್ದಾರೆ. ತಮ್ಮ ಹೆಂಡತಿ, ಮಕ್ಕಳನ್ನು ಇನ್ನಷ್ಟು ಪ್ರೀತಿಸಬೇಕು ಎಂಬುದು ಅವರ ಪ್ರತಿ ವರ್ಷದ ಸಂಕಲ್ಪವಾಗಿದೆಯಂತೆ. ಇದೇ ಸಂದರ್ಭದಲ್ಲಿ ಅವರು ಪ್ಲಾಸ್ಟಿಕ್ ಬಳಕೆ ಮಾಡಬೇಡಿ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.