ಆಡಿಸಿದಾತನ ಹಿಂದೆ ರಾಘಣ್ಣ
ವೃತ್ತಿ ಜೀವನದ 25ನೇ ಚಿತ್ರವಿದು
Team Udayavani, Mar 25, 2019, 11:03 AM IST
ಇತ್ತೀಚೆಗಷ್ಟೇ “ಅಮ್ಮನ ಮನೆ’ ಮೂಲಕ ಹೊಸ ಇನ್ನಿಂಗ್ಸ್ ಶುರು ಮಾಡಿದ್ದ ರಾಘವೇಂದ್ರ ರಾಜಕುಮಾರ್, ಆ ಚಿತ್ರದ ಚಿತ್ರೀಕರಣ ಶುರುವಾಗುತ್ತಿರುವಂತೆಯೇ, “ತ್ರಯಂಬಕಂ’ ಚಿತ್ರಕ್ಕೂ ಅಣಿಯಾಗಿದ್ದರು. “ಅಮ್ಮನ ಮನೆ’ ತೆರೆಕಂಡಿದೆ. ಈಗ “ತ್ರಯಂಬಕಂ’ ಕೂಡ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗುತ್ತಿದೆ.
ಅದರ ಬೆನ್ನಲ್ಲೇ ರಾಘವೇಂದ್ರ ರಾಜಕುಮಾರ್ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ “ಆಡಿಸಿದಾತ’ ಎಂಬ ಹೆಸರನ್ನೂ ಇಡಲಾಗಿದೆ. ಇದೆಲ್ಲಕ್ಕಿತಲೂ ಮುಖ್ಯವಾದ ವಿಷಯವೆಂದರೆ, “ಆಡಿಸಿದಾತ’ ರಾಘವೇಂದ್ರ ರಾಜಕುಮಾರ್ ಅವರ 25 ನೇ ಚಿತ್ರ ಎಂಬುದು ವಿಶೇಷ.
ಹೌದು, “ಆಡಿಸಿದಾತ’ ಶೀರ್ಷಿಕೆ ಕೇಳಿದಾಕ್ಷಣ, “ಕಸ್ತೂರಿ ನಿವಾಸ’ ಚಿತ್ರ ನೆನಪಾಗುತ್ತದೆ. ಆ ಚಿತ್ರದ “ಆಡಿಸಿ ನೋಡು ಬೀಳಿಸಿ ನೋಡು…’ ಹಾಡು ನೆನಪಾಗುತ್ತದೆ. ಶೀರ್ಷಿಕೆಯೇ ಇಲ್ಲಿ ಸಾಕಷ್ಟು ಕುತೂಹಲ ಕೆರಳಿಸುವಂತಿದೆ. ಚಿತ್ರಕ್ಕೆ “ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ’ ಎಂಬ ಅಡಿಬರಹವೂ ಇದೆ.
ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಚಿತ್ರದ ಕಥೆ ಕೂಡ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ಹೊಂದಿದೆ ಎಂದ ಹೇಳಬಹುದು. ಇನ್ನೊಂದು ವಿಶೇಷವೆಂದರೆ, ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರತಂಡ ಈಗಾಗಲೇ ಹರಿಬಿಟ್ಟಿರುವ ಫೋಟೋ ಹೊಸದೊಂದು ಕುತೂಹಲಕ್ಕೆ ಕಾರಣವಾಗಿದೆ. ಚಿತ್ರದ ಪೋಸ್ಟರ್‌ನಲ್ಲಿ ರಾಘವೇಂದ್ರ ರಾಜಕುಮಾರ್ ಕೂಲಿಂಗ್ ಗ್ಲಾಸ್, ಬ್ಲಾಕ್ ಕೋಟ್ ಧರಿಸಿ, ಕೊರಳಲ್ಲೊಂದು ಡಾಲರ್ ಹಾಕಿಕೊಂಡು ಸ್ಟೈಲಿಶ್ ಲುಕ್ ಕೊಟ್ಟಿರುವುದು ವಿಶೇಷವಾಗಿದೆ.
ಸಾಮಾನ್ಯವಾಗಿ ಒಬ್ಬ ಹೀರೋ ತನ್ನ 25 ನೇ ಚಿತ್ರ ಮಾಡಲು ಹೊರಟರೆ ಅಲ್ಲೊಂದು ವಿಶೇಷ ಇದ್ದೇ ಇರಬೇಕು. ಯಾಕೆಂದರೆ, ಅದು ವೃತ್ತಿ ಜೀವನದ ಮೈಲಿಗಲ್ಲು ಕೂಡ. ಹಾಗಾಗಿ, ರಾಘಣ್ಣ ತಮ್ಮ 25 ನೇ ಚಿತ್ರಕ್ಕೆ ಆಯ್ಕೆಮಾಡಿಕೊಂಡಿರುವ ಕಥೆ ಕೂಡ ವಿಶೇಷವಾಗಿದೆ.
ಅಂದಹಾಗೆ, ಈ ಚಿತ್ರವನ್ನು ಹರೀಶ್ ಭಾರಧ್ವಾಜ್ ನಿರ್ದೇಶನ ಮಾಡುತ್ತಿದ್ದಾರೆ. ಬಿ.ಎಂ.ಚೇತನ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಕಥೆ, ಪಾತ್ರ ಸೇರಿದಂತೆ ಚಿತ್ರದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಬಗ್ಗೆ ಗುಟ್ಟು ಬಿಟ್ಟಿಕೊಡದ ನಿರ್ದೇಶಕರು, ಮಾ.25 (ಇಂದು) ಚಿತ್ರದ ಮುಹೂರ್ತ ನೆರವೇರಿಸಲಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ ಸಂಜೆ 5 ಕ್ಕೆ ಚಿತ್ರದ ಮುಹೂರ್ತ ನೆರವೇರಲಿದ್ದು, ಕಾರ್ಯಕ್ರಮಕ್ಕೆ ಚಿತ್ರರಂಗದ ಸಾಕಷ್ಟು ಗಣ್ಯರು ಆಗಮಿಸಲಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತವಿದೆ, ಉದಯ್ ಬಲ್ಲಾಳ್ ಛಾಯಾಗ್ರಹಣವಿದೆ. ಹರೀಶ್ ಕೊಮ್ಮಿ ಸಂಕಲನ ಮಾಡಿದರೆ, ಶ್ರೀ ಹರ್ಷ ಸಂಭಾಷಣೆ ಬರೆದಿದ್ದಾರೆ. ಬೆಂಗಳೂರು, ಮೈಸೂರು ಸೇರಿದಂತೆ ಇತರೆಡೆ ಚಿತ್ರೀಕರಣ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.