ರಘು ಎಂಬ ಅನ್ವೇಷಿ
Team Udayavani, Dec 5, 2017, 11:35 AM IST
ಎಷ್ಟೇ ಸಿನಿಮಾ ಮಾಡಿದ ನಟನಿಗೂ ತನ್ನ ಸಿನಿಮಾ ಬಿಡುಗಡೆಯಾಗುತ್ತದೆ ಎಂದಾಗ ಸಣ್ಣದೊಂದು ಭಯ, ಕಾತರ, ಖುಷಿ ಎಲ್ಲವೂ ಆಗುತ್ತದೆ. ಹೀಗಿರುವಾಗ ಈಗಷ್ಟೇ ಗಾಂಧಿನಗರದಲ್ಲಿ ಬೆಳೆಯುತ್ತಿರುವ ನಟನಿಗೆ ತನ್ನ ಸಿನಿಮಾ ಬಿಡುಗಡೆಯಾಗುವ ಕ್ಷಣ ಹೇಗಿರಬಹುದು ಹೇಳಿ. ಈಗ ರಘು ಭಟ್ ಅಂತಹ ಸಂದರ್ಭದಲ್ಲಿದ್ದಾರೆ. ಯಾವ ರಘು ಭಟ್ ಎಂದರೆ “ಅನ್ವೇಷಿ’ ಸಿನಿಮಾ ಬಗ್ಗೆ ಹೇಳಬೇಕು.
ಈ ವಾರ ತೆರೆಕಾಣುತ್ತಿರುವ “ಅನ್ವೇಷಿ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ ರಘು ಭಟ್. ಹಾಗಾಗಿ, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದಾರೆ. ಈ ಚಿತ್ರವನ್ನು ವೇಮಗಲ್ ಜಗನ್ನಾಥ್ ನಿರ್ದೇಶಿಸಿದ್ದಾರೆ. ಅಂದಹಾಗೆ, ರಘು ಭಟ್ ಮೂಲತಃ ಕಾಸರಗೋಡಿನವರು. ಆದರೆ, ಸಿನಿಮಾದ ಆಸಕ್ತಿಯಿಂದ ಈಗ ಗಾಂಧಿನಗರಕ್ಕೆ ಬಂದಿದ್ದಾರೆ.
ಶಿವರಾಜಕುಮಾರ್ ಅವರ “ಕೃಷ್ಣಲೀಲೆ’ ಚಿತ್ರದಲ್ಲಿ ಬಾಲನಟರಾಗಿ ನಟಿಸಿದ್ದ ರಘು ಈಗ ಈಗ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ಇದೊಂದು ಥ್ರಿಲ್ಲರ್ ಸಿನಿಮಾವಾಗಿದ್ದು, ಜನರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ರಘು ಅವರಿಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ರಘು ಅವರಿಗೆ ಸಿನಿಮಾ ಬಗ್ಗೆ ವಿಶ್ವಾಸ ಹೆಚ್ಚಿದೆ.
ರಘು ಈಗಾಗಲೇ ತೆರೆಕಂಡಿರುವ “ದಾದಾ ಇಸ್ ಬ್ಯಾಕ್’, “ಕರ್ವ’, “ಡ್ರೀಮ್ ಗರ್ಲ್’ ಚಿತ್ರಗಳಲ್ಲೂ ನಟಿಸಿದ್ದಾರೆ. “ಅನ್ವೇಷಿ’ ಹೊರತಾಗಿ ರಘು ಅವರು ರಾಗಿಣಿ ಪ್ರಮುಖ ಪಾತ್ರ ನಿರ್ವಹಿಸಿರುವ “ಎಂ ಎಂ ಸಿ ಹೆಚ್’, “ಲವ್ ಯೂ 2′, “ಚಿತ್ರಾಲಿ’ ಹಾಗೂ “ರಘುವೀರ’ ಚಿತ್ರಗಳಲ್ಲಿ ರಘು ನಟಿಸಿದ್ದು, ಆ ಚಿತ್ರಗಳಿಗಾಗಿ ಎದುರು ನೋಡುತ್ತಿದ್ದಾರೆ ರಘು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.