Ragini Dwivedi; ‘ಗಜರಾಮ’ ಸ್ಪೆಷಲ್ ಹಾಡಿಗೆ ರಾಗಿಣಿ ಮಸ್ತ್ ಸ್ಟೆಪ್ಸ್!
Team Udayavani, Oct 3, 2023, 2:47 PM IST
ನಟ ರಾಜವರ್ಧನ್ ನಾಯಕನಾಗಿ ಅಭಿನಯಿಸುತ್ತಿರುವ “ಗಜರಾಮ’ ಸಿನಿಮಾದ ಕೆಲಸಗಳು ಭರದಿಂದ ನಡೆಯುತ್ತಿದೆ. ಇದೀಗ “ಗಜರಾಮ’ ಸಿನಿಮಾದ ಸ್ಪೆಷಲ್ ಹಾಡೊಂದರಲ್ಲಿ ನಟಿ ರಾಗಿಣಿ ದ್ವಿವೇದಿ ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಹೊರವಲಯದ ಚಿಕ್ಕ ಗುಬ್ಬಿಯಲ್ಲಿ ಹಾಕಲಾಗಿದ್ದ ವರ್ಣರಂಜಿತ ಸೆಟ್‌ನಲ್ಲಿ ನಟಿ ರಾಗಿಣಿ, ನಾಯಕ ರಾಜವರ್ಧನ್ ಜೊತೆಯಾಗಿ ಹೆಜ್ಜೆ ಹಾಕಿದ ಈ ಹಾಡು ಧನು ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಮೂಡಿಬಂದಿತು. ಛಾಯಾಗ್ರಹಕ ಕೆ. ಎಸ್. ಚಂದ್ರಶೇಖರ್ ನಿರ್ದೇಶಕ ಸುನೀಲ್ ಕುಮಾರ್ ಮತ್ತು ಚಿತ್ರತಂಡ ಈ ಹಾಡನ್ನು ಚಿತ್ರೀಕರಿಸಿತು.
ಇದೇ ವೇಳೆ ಮಾತನಾಡಿದ ರಾಗಿಣಿ ದ್ವಿವೇದಿ, “”ಗಜರಾಮ’ ಸಿನಿಮಾದಲ್ಲಿ ಮನೋಮೂರ್ತಿ ಸಂಗೀತ ನೀಡಿದ ಈ ಹಾಡು ಕೇಳಿ ತುಂಬ ಇಷ್ಟವಾಯಿತು. ನನಗಾಗಿ ಈ ಸ್ಪೆಷಲ್ ಸಾಂಗ್ ಮಾಡಿದ್ದಾರೆ. ಅದಕ್ಕೆ ಒಳ್ಳೆಯ ಕೊರಿಯೋಗ್ರಫಿ ಇದೆ. ರಾಜವರ್ಧನ್ ತುಂಬ ಒಳ್ಳೆಯ ನಟ, ಹಾಗಾಗಿ ಈ ಸ್ಪೆಷಲ್ ಸಾಂಗ್ ನಲ್ಲಿ ಅವರೊಂದಿಗೆ ಡ್ಯಾನ್ಸ್ ಮಾಡಲು ಒಪ್ಪಿಕೊಂಡೆ. ಈ ವರ್ಷದ ಹಿಟ್ ಹಾಡುಗಳಲ್ಲಿ ಇದೂ ಕೂಡ ಒಂದಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಾಯಕ ನಟ ರಾಜವರ್ಧನ್ ಮಾತನಾಡಿ, “ರಾಗಿಣಿ ಮೇಡಂ ನನಗೆ ಕಾಲೇಜ್ ಟೈಮ್‌ನಿಂದ ಕ್ರಶ್. ಈಗ ವರ್ಕ್ ಮಾಡುವ ಅವಕಾಶ ಸಿಕ್ಕಿದೆ. ಡ್ರೀಮ್ ಕಂಪ್ಲೀಟ್ ಆಗಿದೆ. ಮೆಲೋಡಿ ಕಿಂಗ್ ಮನೋಮೂರ್ತಿ ಈ ಸಿನಿಮಾದ ಹಾಡುಗಳ ಮೂಲಕ ಮಾಸ್ ಕಿಂಗ್ ಆಗಿದ್ದಾರೆ’ ಎಂದರು.
“ಗಜರಾಮ’ ಸಿನಿಮಾದ ನಿರ್ದೇಶಕ ಸುನೀಲ್ ಕುಮಾರ್, ಸಂಗೀತ ನಿರ್ದೇಶಕ ಮನೋಮೂರ್ತಿ, ನಿರ್ಮಾಪಕ ನರಸಿಂಹಮೂರ್ತಿ, ನಾಯಕಿ ತಪಸ್ವಿನಿ ಸೇರಿದಂತೆ “ಗಜರಾಮ’ ಸಿನಿಮಾದ ಪ್ರಮುಖ ಕಲಾವಿದರು, ತಂತ್ರಜ್ಞರು ಸಿನಿಮಾದ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.