ರಾಗಿಣಿಗೆ ದಶಕದ ಸಂಭ್ರಮ
ಬಯೋಪಿಕ್‌ನಲ್ಲಿ ನಟಿಸುವ ಆಸೆ
Team Udayavani, Apr 8, 2019, 3:00 AM IST
ಸ್ಯಾಂಡಲ್‌ವುಡ್‌ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸದ್ಯ ಹ್ಯಾಪಿ ಮೂಡ್‌ನಲ್ಲಿದ್ದಾರೆ. ರಾಗಿಣಿ ಈ ಹ್ಯಾಪಿ ಮೂಡ್‌ಗೆ ಕಾರಣವಾಗಿದ್ದು ಕನ್ನಡ ಚಿತ್ರರಂಗದಲ್ಲಿ ಅವರ ಜರ್ನಿ. ಹೌದು, ಕನ್ನಡ ಚಿತ್ರರಂಗದಲ್ಲಿ ರಾಗಿಣಿ ಸದ್ದಿಲ್ಲದೆ ಹತ್ತು ವರ್ಷಗಳ ಸಿನಿಜರ್ನಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಅದೇ ಖುಷಿಯಲ್ಲಿ ರಾಗಿಣಿ, ಚಿತ್ರರಂಗದಲ್ಲಿ ಕಳೆದ ಹತ್ತು ವರ್ಷಗಳಿಂದ ತಮಗೆ ಸಹಕಾರ, ಪ್ರೋತ್ಸಾಹ, ಬೆಂಬಲ ನೀಡುತ್ತಾ ಬಂದಿರುವ ಹಿತೈಷಿಗಳು, ಸ್ನೇಹಿತರಿಗಾಗಿ ಕೃತಜ್ಞತೆ ತಿಳಿಸುತ್ತಲೇ ತಮ್ಮ ಸಿನಿಮಾ ಜರ್ನಿ ಬಗ್ಗೆ ಮಾತನಾಡಿದ್ದಾರೆ. “ಕನ್ನಡ ಚಿತ್ರರಂಗಕ್ಕೆ ಬಂದಿರುವುದಕ್ಕೆ ತುಂಬಾ ಖುಷಿಯಿದೆ. ಆರಂಭದಿಂದ ಇಲ್ಲಿಯವರೆಗೆ ಎಲ್ಲರೂ ನನಗೆ ಬೆಂಬಲ, ಪ್ರೋತ್ಸಾಹ, ಸಹಕಾರ ನೀಡುತ್ತಾ ಬಂದಿದ್ದಾರೆ.
ಅದರಲ್ಲೂ ಈಗಿನ ಮಟ್ಟಿಗೆ ಹೇಳುವುದಾದರೆ, ಚಿತ್ರರಂಗದಲ್ಲಿ ಹೀರೊಯಿನ್ ಆಗಿ ಹತ್ತು ವರ್ಷಗಳನ್ನು ಪೂರೈಸುವುದು ಅಂದ್ರೇನೆ ದೊಡ್ಡ ವಿಷಯ ಅಂಥ ಎಲ್ಲರೂ ಹೇಳ್ತಾರೆ. ಹೀಗಿರುವಾಗ ಹತ್ತು ವರ್ಷಗಳಿಂದ ಅದೇ ಪ್ರೀತಿ, ವಿಶ್ವಾಸ ಇಲ್ಲಿ ಸಿಗುತ್ತಿದೆ ಅಂದ್ರೆ ನಾನು ನಿಜಕ್ಕೂ ಲಕ್ಕಿ ಎಂದೇ ಭಾವಿಸುತ್ತೇನೆ’ ಎನ್ನುವುದು ರಾಗಿಣಿ ಮಾತು.
ಇನ್ನು ಇಲ್ಲಿಯವರೆಗೆ ಹಳ್ಳಿ ಹುಡುಗಿ, ಕಾಲೇಜ್ ಗರ್ಲ್, ಪೊಲೀಸ್ ಆಫೀಸರ್, ಲೇಡಿ ಡಾನ್, ಐಟಂ ಡ್ಯಾನ್ಸರ್, ಅಕ್ಕ, ತಂಗಿ, ಲವರ್ ಹೀಗೆ ಹತ್ತು ಹಲವು ಪಾತ್ರಗಳಿಗೆ ಬಣ್ಣ ಹಚ್ಚಿರುವ ಮಾಡಿರುವ ರಾಗಿಣಿಗೆ ಈ ಥರದ ಎಲ್ಲಾ ಪಾತ್ರಗಳು ಸಾಕಾಗಿದೆಯಂತೆ!. ರಾಗಿಣಿ ಹೇಳುವಂತೆ, “ನಾನು ಇಲ್ಲಿ ನಟಿಯಾಗಬೇಕು ಎಂಬ ಕನಸನ್ನು ಇಟ್ಟುಕೊಂಡು ಬಂದವಳು.
ನಾನು ಯಾವಾಗಲೂ ಯಾವುದೋ ಒಂದೇ ಒಂದು ಪಾತ್ರದಲ್ಲಿ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ. ನನಗೆ ಸವಾಲಿನ ಪಾತ್ರಗಳನ್ನು ಮಾಡಬೇಕು ಎಂಬ ಕನಸಿದೆ. ಪ್ರತಿ ಚಿತ್ರದಲ್ಲೂ ನನಗೆ ಹೊಸ ಥರದ ಪಾತ್ರಗಳು ಸಿಗಬೇಕು ಎಂದು ಬಯಸುತ್ತೇನೆ. ಅಂಥ ಪಾತ್ರಗಳನ್ನು ಮಾಡುವುದು ನಿಜಕ್ಕೂ ನನಗೆ ಖುಷಿ ಕೊಡುತ್ತದೆ.
ಅದರಲ್ಲೂ ಕನ್ನಡದಲ್ಲಿ ಬಯೋಪಿಕ್ ಚಿತ್ರಗಳಲ್ಲಿ ಅಭಿನಯಿಸಬೇಕೆಂಬ ಆಸೆಯಿದೆ. ಸ್ಪೋರ್ಟ್ಸ್ ಸಬ್ಜೆಕ್ಟ್ ಚಿತ್ರಗಳು, ಮಹಿಳಾ ಪ್ರಧಾನ ಚಿತ್ರಗಳು ಅಂದ್ರೆ ನನಗಿಷ್ಟ. ಅಂಥ ಚಿತ್ರಗಳು ಸಿಕ್ಕರೆ ಖಂಡಿತಾ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಅಂಥ ಚಿತ್ರಗಲು ಸಿಗಬಹುದು ಎನ್ನುವ ನಿರೀಕ್ಷೆ ಇದೆ’ಎನ್ನುತ್ತಾರೆ ರಾಗಿಣಿ. ಸದ್ಯ ರಾಗಿಣಿ “ಗಾಂಧಿಗಿರಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.