ಆಗಸ್ಟ್ 4ಕ್ಕೆ ‘ಟೋಬಿ’ ಟ್ರೇಲರ್: ನಿರೀಕ್ಷೆ ಹೆಚ್ಚಿಸಿರುವ ರಾಜ್ ಶೆಟ್ರ ಸಿನಿಮಾ
Team Udayavani, Jul 31, 2023, 10:45 AM IST
“ಒಂದು ಮೊಟ್ಟೆಯ ಕಥೆ’ ಮೂಲಕ ಸೈಲೆಂಟ್ ಆಗಿ ಬಂದ ರಾಜ್ ಬಿ ಶೆಟ್ಟಿ ಈಗ ಸಖತ್ ವೈಲೆಂಟ್ ಆಗಿದ್ದಾರೆ. ಈಗಾಗಲೇ “ಗರುಡ ಗಮನ ವೃಷಭ ವಾಹನ’ ಮೂಲಕ ಕೈಗೆ ರಕ್ತಮೆತ್ತಿಕೊಂಡಿದ್ದ ರಾಜ್ ಶೆಟ್ಟಿ ಈ ಬಾರಿ ಇಡೀ ಪೂರ್ತಿ ದೇಹಕ್ಕೆ ರಕ್ತಾಭಿಷೇಕ ಮಾಡಿಕೊಂಡಂತಿದೆ. ಅವರ ಈ ರಕ್ತತರ್ಪಣಕ್ಕೆ ಕಾರಣವಾಗಿರೋದು “ಟೋಬಿ’. ನಿಮಗೆ ಗೊತ್ತಿರುವಂತೆ ರಾಜ್ ಬಿ ಶೆಟ್ಟಿ “ಟೋಬಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಆಗಸ್ಟ್ 25ರಂದು ತೆರೆಕಾಣುತ್ತಿದೆ.
ಈಗಾಗಲೇ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದ್ದು, ಸಿನಿಮಾದೊಳಗಿನ ಮಾಸ್ ಎಲಿಮೆಂಟ್ಸ್ ಅನ್ನು ಎತ್ತಿಹಿಡಿದಿದೆ. ರೆಡ್ ಥೀಮ್ನೊಂದಿಗೆ ಮೂಡಿಬಂದಿರುವ ಈ ಫಸ್ಟ್ಲುಕ್ನಲ್ಲಿ ರಾಜ್ ಬಿ ಶೆಟ್ಟಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಮುಖದ ತುಂಬಾ ಕುರುಚಲು ಗಡ್ಡ, ಮೂಗಿನಲ್ಲೊಂದು ದೊಡ್ಡ ಮೂಗುತಿ, ತಲೆ, ಮೂಗಿನ ಮೇಲೆ ರಕ್ತಸೋರುತ್ತಿರುವ ಗಾಯ … ಹೀಗೆ ಔಟ್ ಅಂಡ್ ಔಟ್ ಮಾಸ್ ಫೀಲ್ ಕೊಡುವ “ಟೋಬಿ’ ಚಿತ್ರದ ಫಸ್ಟ್ಲುಕ್ ವೈರಲ್ ಆಗಿದೆ. ಈಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದ್ದು, ಆಗಸ್ಟ್ 4ರಂದು ಅದ್ದೂರಿಯಾಗಿ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.
ಸದ್ಯ ಕನ್ನಡ ಚಿತ್ರರಂಗದಲ್ಲಿ ಬಹುನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಇದಾಗಿದ್ದು, ಈ ಚಿತ್ರದ ಮೂಲಕ ಮತ್ತೂಂದು ಬ್ರೇಕ್ ಸಿಗುವ ನಿರೀಕ್ಷೆ ಸಿನಿಪ್ರೇಮಿಗಳದ್ದು.
“ಟೋಬಿ’ ಚಿತ್ರಕ್ಕೆ “ಮಾರಿ ಮಾರಿ ..ಮಾರಿಗೆ ದಾರಿ’ ಎಂಬ ಅಡಿಬರಹವಿದೆ. ರಾಜ್ ಬಿ ಶೆಟ್ಟಿ ಈವರೆಗಿನ ಚಿತ್ರಗಳ ಪೈಕಿ ಟೋಬಿ ಬಿಗ್ ಬಜೆಟ್ನ ಚಿತ್ರ. ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲಂಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರವಿ ರೈ ಕಳಸ ಈ ಚಿತ್ರದ ನಿರ್ಮಾಪಕರು. ಶಾಮಿಲ್ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
ರಾಜ್ ಬಿ ಶೆಟ್ಟಿ ರಚನೆ ಹಾಗೂ ಬಾಸಿಲ್ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ಪ್ರವೀಣ್ ಶ್ರೀಯನ್ ಛಾಯಾಗ್ರಹಣ, ಸಂಕಲನ ಹಾಗೂ ಅರ್ಜುನ್ ರಾಜ್ – ರಾಜಶೇಖರ್ ಅವರ ಸಾಹಸ ನಿರ್ದೇಶನ ಟೋಬಿ ಚಿತ್ರಕಿದೆ. ರಾಜ್ .ಬಿ. ಶೆಟ್ಟಿ, ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.