ರಾಜ-ಹಂಸದಲ್ಲೊಂದು ಕುರುಕ್ಷೇತ್ರ ಪ್ರಸಂಗ
Team Udayavani, Sep 14, 2017, 12:22 PM IST
ಕನ್ನಡ ಚಿತ್ರರಂಗದಲ್ಲೀಗ “ಕುರುಕ್ಷೇತ್ರ’ದ್ದೇ ಮಾತು. ದರ್ಶನ್ ಅಭಿನಯದ 50ನೇ ಚಿತ್ರವಾದ “ಕುರುಕ್ಷೇತ್ರ’ದ ಚಿತ್ರೀಕರಣ, ಅದಕ್ಕೆ ಮಾಡಿಕೊಳ್ಳುತ್ತಿರುವ ಸಿದ್ಧತೆಗಳು, ಕಲಾವಿದರ ಆಯ್ಕೆ … ಹೀಗೆ ಹಲವು ಕಾರಣಗಳಿಗಾಗಿ “ಕುರುಕ್ಷೇತ್ರ’ ಸುದ್ದಿ ಮಾಡುತ್ತಲೇ ಇದೆ. ಹೀಗಿರುವಾಗಲೇ “ಕುರುಕ್ಷೇತ್ರ’ ಪ್ರಸಂಗವು ಸದ್ದಿಲ್ಲದೆ ಒಂದು ಚಿತ್ರದಲ್ಲಿ ಬಂದಿದೆ. ಅದೇ
ಕಳೆದ ವಾರ ಬಿಡುಗಡೆಯಾದ “ರಾಜ-ಹಂಸ’.
ಗೌರಿಶಿಖರ್ ಮತ್ತು ರಂಜಿನಿ ರಾಘವನ್ ಅಭಿನಯದ “ರಾಜ-ಹಂಸ’ ಚಿತ್ರದಲ್ಲೂ ಕುರುಕ್ಷೇತ್ರ ಪ್ರಸಂಗ ಬರುತ್ತದೆ ಮತ್ತು ಆ ಪ್ರಸಂಗದಲ್ಲಿ ನಾಯಕ ಗೌರಿಶಿಖರ್ ಅಭಿಮನ್ಯುವಾಗಿ ಕಾಣಿಸಿಕೊಂಡಿದ್ದಾರೆ ಎನ್ನುವುದು ವಿಶೇಷ. ಹೌದು, ಚಿತ್ರದಲ್ಲಿ ನಾಯಕ ಮತ್ತು ಆತನ ಮನೆಯವರು ಸವಾಲಿಗೆ ನಾಟಕ ಮಾಡಬೇಕಾದ ಪ್ರಸಂಗ ಬರುತ್ತದೆ. ಆ ಸಂದರ್ಭದಲ್ಲಿ ನಾಯಕನ ಮನೆಯವರು
ಆಯ್ಕೆ ಮಾಡಿಕೊಳ್ಳುವುದು ಅದೇ ಕುರುಕ್ಷೇತ್ರ ನಾಟಕವನ್ನ. ಆ ನಾಟಕವನ್ನಾಡುವ ಸಂದರ್ಭದಲ್ಲಿ ನಾಯಕನ ಮನೆಯವರು ಏನೆಲ್ಲಾ ಅನುಭವಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ಮನರಂಜನಾತ್ಮಕವಾಗಿ ಹೇಳಲಾಗಿದೆ.
ಇಲ್ಲಿ ಗೌರಿಶಿಖರ್ ಅಭಿಮನ್ಯುವಾಗಿ, ಯಮುನಾ ಸುಭದ್ರಳಾಗಿ, ಶ್ರೀಧರ್ ದುರ್ಯೋಧನನಾಗಿ, ವಿಜಯ್ ಚೆಂಡೂರ್ ಶಕುನಿಯಾಗಿ ಕಾಣಿಸಿಕೊಂಡಿರುವುದು ವಿಶೇಷ. ಇದಲ್ಲದೆ ಇನ್ನೂ ಒಂದು ದೃಶ್ಯದಲ್ಲಿ ನಾಟಕದ ತುಣುಕೊಂದಿದ್ದು, ಅದರಲ್ಲಿ ಬಿ.ಸಿ. ಪಾಟೀಲ್ ಅವರು ಕೌರವೇಶ್ವರನಾಗಿ ಕಾಣಿಸಿಕೊಂಡಿದ್ದಾರೆ.
“ರಾಜ-ಹಂಸ’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಿರಿಯ ನಟ ಜಗ್ಗೇಶ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕವಿರಾಜ್ ಸೇರಿದಂತೆ ಹಲವರು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಈ ಚಿತ್ರವು ಜನಮನ ಸಿನಿಮಾ ಬ್ಯಾನರ್‌ನಡಿ ನಿರ್ಮಾಣವಾಗಿದ್ದು, ಜಡೇಶ್ ಕುಮಾರ್ ನಿರ್ದೇಶಿಸಿದ್ದಾರೆ. ಇನ್ನು ಜೋಶ್ವಾ ಶ್ರೀಧರ್ ಅವರ ಸಂಗೀತ ಈ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.