“ರಾಜರಥ’ದ ಮೊದಲ ಪೋಸ್ಟರ್ ಬಿಡುಗಡೆ
Team Udayavani, Oct 3, 2017, 10:39 AM IST
ಅನೂಪ್ ಭಂಡಾರಿ ನಿರ್ದೇಶನದ, ನಿರೂಪ್ ಭಂಡಾರಿ ಅಭಿನಯದ “ರಾಜರಥ’ ಚಿತ್ರದ ಚಿತ್ರೀಕರಣ ಕೆಲವು ದಿನಗಳ ಹಿಂದೆ ಸದ್ದಿಲ್ಲದೆ ಮುಗಿದಿದೆ. ಸೋಮವಾರ ಸಂಜೆ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟರ್ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದ್ದು, ನಿರೂಪ್ ಭಂಡಾರಿ, ರವಿಶಂಕರ್ ಮತ್ತು ಆವಂತಿಕಾ ಶೆಟ್ಟಿ ಈ ಪೋಸ್ಟರ್‌ನಲ್ಲಿ ವಿಶೇಷವಾಗಿ ಕಾಣುತ್ತಾರೆ.
“ರಾಜರಥ’ ಚಿತ್ರದಲ್ಲಿ ನಿರೂಪ್ ಭಂಡಾರಿ, ಅವಂತಿಕಾ ಶೆಟ್ಟಿ, ರವಿಶಂಕರ್ ಮುಂತಾದವರು ನಟಿಸುತ್ತಿದ್ದು, ಚಿತ್ರಕ್ಕೆ ಅನೂಪ್ ಭಂಡಾರಿ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುವುದರ ಜೊತೆಗೆ ಸಂಗೀತವನ್ನೂ ಸಂಯೋಜಿಸಿದ್ದರು. ಚಿತ್ರವನ್ನು ಅಜಯ್ ರೆಡ್ಡಿ, ಅಂಜು ವಲ್ಲಭ್, ವಿಷ್ಣು ಡಾಕಪ್ಪಗರಿ, ಸತೀಶ್ ಶಾಸ್ತ್ರಿ ಮುಂತಾದವರು ನಿರ್ಮಿಸುತ್ತಿದ್ದಾರೆ. ಅಂದಹಾಗೆ, ಈ ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ.
ತಮಿಳಿನ ಜನಪ್ರಿಯ ನಟ ಆರ್ಯ, ಈ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದು, ಈಗಾಗಲೇ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಈ ಚಿತ್ರದಲ್ಲಿ ಆರ್ಯ ಅವರ ಪಾತ್ರ ಏನು ಎಂಬುದನ್ನು ಚಿತ್ರತಂಡದವರು ಬಹಿರಂಗಗೊಳಿಸಿಲ್ಲ. ಆರ್ಯ ಅವರ ಪಾತ್ರವನ್ನು ರಹಸ್ಯವಾಗಿಟ್ಟಿರುವ ಚಿತ್ರತಂಡವು ಮುಂದಿನ ದಿನಗಳಲ್ಲಿ ಬಹಿರಂಗಗೊಳಿಸಲಿದೆಯಂತೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.