ಸೂಪರ್ ಸ್ಟಾರ್ ರಜನಿ ʼಜೈಲರ್ʼ ಶೂಟಿಂಗ್ ಶುರು: ಫಸ್ಟ್ ಲುಕ್ ನಲ್ಲಿ ಮಿಂಚಿದ ʼತಲೈವಾʼ
ವಿಜಯ್ ಅವರೊಂದಿಗೆ ಮಾಡಿದ ʼಬೀಸ್ಟ್ʼ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಷ್ಟು ಕಲೆಕ್ಷನ್ ಮಾಡಿಲ್ಲ
Team Udayavani, Aug 22, 2022, 5:50 PM IST
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಚಿತ್ರ ʼಜೈಲರ್ʼ ಬಗ್ಗೆ ಹೊಸ ಅಪ್ ಡೇಟ್ ಹೊರ ಬಿದ್ದಿದೆ. ಸೋಮವಾರ (ಆ.22 ರಂದು) ಸನ್ ಪಿಕ್ಚರ್ಸ್ ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದೆ.
2021 ರಲ್ಲಿ ರಜನಿಕಾಂತ್ ಅಭಿನಯದ ʼ ಅಣ್ಣಾತೆʼ ಚಿತ್ರ ಬಿಡುಗಡೆಯಾಗಿತ್ತು. ಆದರೆ ಚಿತ್ರ ಅಷ್ಟು ಸದ್ದು ಮಾಡಿಲ್ಲ. ಚಿತ್ರದ ಬಗ್ಗೆ ಎಲ್ಲಡೆಯಿಂದ ಮಿಶ್ರ ಪ್ರತಿಕ್ರಿಯೆ ಕೇಳಿ ಬಂತು. ಆ ಬಳಿಕ ಅವರ ಮುಂದಿನ ಚಿತ್ರ ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರೊಂದಿಗೆ ಎಂದು ಅನೌನ್ಸ್ ಆಗಿತ್ತು. ಚಿತ್ರಕ್ಕೆ ʼಜೈಲರ್ʼ ಎಂದು ಟೈಟಲ್ ಇಡಲಾಗಿದೆ.
ನೆಲ್ಸನ್ ದಿಲೀಪ್ ಕುಮಾರ್ ʼಡಾಕ್ಟರ್ʼ ಸಿನಿಮಾದ ಬಳಿಕ ವಿಜಯ್ ಅವರೊಂದಿಗೆ ಮಾಡಿದ ʼಬೀಸ್ಟ್ʼ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಷ್ಟು ಕಲೆಕ್ಷನ್ ಮಾಡಿಲ್ಲ. ಮುಂದಿನ ಚಿತ್ರ ರಜನಿಕಾಂತ್ ಅವರೊಂದಿಗೆ ಮಾಡಲಿರುವುದರಿಂದ ದೊಡ್ಟ ಮಟ್ಟದ ನಿರೀಕ್ಷೆ ಸಹಜವಾಗಿಯೇ ಇದೆ.
ಚಿತ್ರ ಅನೌನ್ಸ್ ಆಗಿ ಯಾವಾಗದಿಂದ ಚಿತ್ರೀಕರಣ ಆರಂಭವಾಗುತ್ತದೆ ಎಂದು ಫ್ಯಾನ್ಸ್ ಕಾಯುತ್ತಿದ್ದರು. ಇದೀಗ ಅಭಿಮಾನಿಗಳಿಗೆ ಸನ್ ಪಿಕ್ಚರ್ಸ್ ಮಾಡಿರುವ ಟ್ವೀಟ್ ಖುಷಿ ತಂದಿದೆ. ಇಂದಿನಿಂದಲೇ ಅಂದರೆ ಸೋಮವಾರದಿಂದ ಚಿತ್ರದ ಚಿತ್ರೀಕರಣ ಆರಂಭವಾಗಿದೆ ಎಂದು ಸನ್ ಪಿಕ್ಷರ್ಸ್, ಫಸ್ಟ್ ಲುಕ್ ಮೂಲಕ ವಿಷಯವನ್ನು ಹಂಚಿಕೊಂಡಿದೆ. ಚೆನ್ನೈಯಲ್ಲಿ ಚಿತ್ರೀಕರಣ ಆರಂಭವಾಗಿದೆ.
ಇತ್ತೀಚೆಗೆ ತನ್ನ ಸಂಗೀತದಿಂದ ಸುದ್ದಿ ಮಾಡುತ್ತಿರುವ ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೂ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಇನ್ನು ಪಾತ್ರಗಳತ್ತ ಚಿತ್ತ ಹರಿಸಿದರೆ, ಐಶ್ವರ್ಯ ರೈ ಬಚ್ಚನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಮ್ಯಾ ಕೃಷ್ಣ, ಯೋಗಿಬಾಬು, ಪ್ರಿಯಾಂಕಾ ಅರುಣ್ ಮೋಹನ್ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನೊಂದು ವಿಶೇಷವೆಂದರೆ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಪೆಷೆಲ್ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇದು ತಲೈವಾ ರಜನಿ ಅವರ 169 ನೇ ಚಿತ್ರವಾಗಿದ್ದು, 2023 ರ ಬೇಸಿಗೆಯಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ.
#Jailer begins his action Today!@rajinikanth @Nelsondilpkumar @anirudhofficial pic.twitter.com/6eTq1YKPPA
— Sun Pictures (@sunpictures) August 22, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.