ಲಾಕ್‌ಡೌನ್ ನಡುವೆ ಸರಳವಾಗಿ ನಡೆದ ರಾಜ್ ಕುಮಾರ್ ಹುಟ್ಟುಹಬ್ಬ
Team Udayavani, Apr 25, 2021, 10:54 AM IST
ವರನಟ ಡಾ.ರಾ ಜ್ ಕುಮಾರ್ ಅವರ ಹುಟ್ಟು ಹಬ್ಬ ವನ್ನು ಶನಿವಾರ (ಏ.24) ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ದೇವ ರು ಗಳು ಸರಳ ವಾಗಿ ಆಚರಿಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಬೆಳಗ್ಗೆ ರಾಜ್ ಪುಣ್ಯ ಭೂಮಿಗೆ ತೆರಳಿ ಪೂಜೆ ಸಲ್ಲಿಸದರು.
ಕೋವಿಡ್ ಹಾಗೂ ವೀಕೆಂಡ್ ಲಾಕ್ ಡೌನ್ ಇದ್ದ ಕಾರಣ ಕೆಲವೇ ಕೆಲವು ಮಂದಿ ಪುಣ್ಯ ಭೂಮಿಯಲ್ಲಿ ಪೂಜೆ ಸಲ್ಲಿಸಬೇಕಾಯಿತು. ಪ್ರತಿ ವರ್ಷ ಅಣ್ಣಾವ್ರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಹಲವು ಸಾಮಾ ಜಿಕ ಕಾರ್ಯ ಗಳ ಮೂಲಕ ಆಚರಿಸುತ್ತಿದ್ದರು. ಆದರೆ, ಕಳೆದ ವರ್ಷ ಹಾಗೂ ಈ ವರ್ಷ ಕೋವಿಡ್ ದಿಂದ ಸರಳವಾಗಿ ಆಚರಿಸುವ ಅನಿವಾರ್ಯತೆ ಎದುರುರಾಗಿದೆ.
ಕನಕಪುರದ ಫಾರ್ಮ್ ಹೌ ಸ್ ನಲ್ಲಿ ಶಿವಣ್ಣ ಆಚರಣೆ: ಶಿವ ರಾ ಜ್ ಕು ಮಾರ್
ಅವ ರು ಕನಕಪುರದ ಫಾರ್ಮ್ ಹೌಸ್ ನಲ್ಲಿ ಇದ್ದ ಕಾರಣ, ಅಲ್ಲೇ ಅಣ್ಣಾವ್ರ ಹುಟ್ಟು ಹ ಬ್ಬ ವನ್ನು ಆಚರಿಸಿದರು. ಹೊಲದ ಮಧ್ಯದಲ್ಲಿ ಅಣ್ಣಾವ್ರ ಭಾವ ಚಿತ್ರವಿಟ್ಟು, ಅದಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ.
ನಟ ಪುನೀತ್ ವಿಶಿಷ್ಟ ಗಿಫ್ಟ್:
ಪುನೀತ್ ರಾಜ್ ಕುಮಾರ್ ತಮ್ಮ ತಂದೆಯ ಹುಟ್ಟು ಹಬ್ಬಕ್ಕೆ ವಿಭಿನ್ನವಾಗಿ ಕೊಡುಗೆ ನೀಡಿದ್ದಾರೆ. ಅದು ಭಾವನಾ ತ್ಮಕ ಹಾಡೊಂದನ್ನು ಹಾಡುವ ಮೂಲಕ. “ಬಡ ವರ ಬಂಧು’ ಚಿತ್ರದ “ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ.. ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ…’ ಹಾಡನ್ನು ಭಾವನಾತ್ಮಕವಾಗಿ ಹಾಡಿದ್ದಾರೆ. ಹಾಡಿನುದ್ದಕ್ಕೂ ಪುನೀತ್ ಭಾವು ಕರಾಗಿದ್ದು ಕಂಡು ಬರುತ್ತದೆ. ತಾವು ಹಾಡಿದ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿರುವ ಪುನೀತ್, “ಅಪ್ಪಾಜಿ ಅವರ ಹುಟ್ಟು ಹಬ್ಬಕ್ಕೆ ನಮ್ಮ ಪುಟ್ಟ ಕಾಣಿಕೆ’ ಎಂದು ಬರೆದು ಕೊಂಡಿದ್ದಾರೆ. ಈ ಹಾಡನ್ನು ಅಭಿ ಮಾನಿಗಳು ಮೆಚ್ಚಿಕೊಂಡಿದ್ದಾರೆ.
ರಾಜ್ ಸ್ಮರಿ ಸಿದ ತಾರೆಯರು :
ಡಾ.ರಾ ಜ್ ಕುಮಾರ್ ಅವರ ಹುಟ್ಟು ಹಬ್ಬವನ್ನು ಅಭಿ ಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ರೀತಿಯಲ್ಲಿ ಆಚರಿಸುವ ಮೂಲಕ ಸ್ಮರಣೆ ಮಾಡಿದರೆ, ತಾರೆ ಯರು ಕೂಡಾ ಟ್ವೀಟ್ ಮೂಲಕ ರಾಜ್ ಅವರಿಗೆ ನಮಿಸಿದ್ದಾರೆ. ನಟ ರಾದ ಸುದೀಪ್, ದರ್ಶನ್, ರಮೇಶ್ ಅರ ವಿಂದ್, ಜಗ್ಗೇಶ್, ಗಣೇಶ್, ಶರಣ್ ಸೇರಿದಂತೆ ಅನೇಕರು ಟ್ವೀಟ್ ಮೂಲಕ ಅಣ್ಣಾ ವ್ರನ್ನು ನೆನ ಪಿ ಸಿ ಕೊಂಡಿ ದ್ದಾರೆ. ಇನ್ನು ಪರ ಭಾಷೆಯ ಹಲವು ನಟರು ಕೂಡಾ ರಾಜ್ ಹುಟ್ಟು ಹಬ್ಬದಂದು ಸ್ಮರಿ ಸಿ ದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ, ಅಣ್ಣಾವ್ರ ಜೊತೆಗಿನ ಬಾಂಧ ವ್ಯ ನೆನಪಿಸಿಕೊಂಡು, “ಅಣ್ಣಾವ್ರು ನಿಜವಾದ ಬಂಗಾರದ ಮನುಷ್ಯ. ಅವರು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿ ದ್ದಾರೆ’ ಎಂದಿದ್ದಾರೆ. ಇನ್ನು, ಮಂಗಳೂರು ಪೊಲೀಸ್ ಕಮೀಶನರ್ ಶಶಿ ಕು ಮಾರ್, “ಆಡಿ ಸಿ ನೋಡು, ಬೀಳಿಸಿ ನೋಡು..’ ಹಾಡನ್ನು ಹಾಡುವ ಮೂಲಕ ರಾಜ್ ಅವ ರನ್ನು ಸ್ಮರಿಸಿದ್ದಾರೆ.
ಮೂರು ಕೃತಿಗಳು ಲೋಕಾರ್ಪಣೆ : ವರನಟ ಡಾ. ರಾಜಕುಮಾರ್ ಜನ್ಮದಿನದಂದು ಮೂರು ಕೃತಿಗಳು ಲೋಕಾರ್ಪಣೆಗೊಂಡವು. ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಚಿತ್ರ ನಿರ್ದೇಶಕ ಬಿ ಎಂ. ಗಿರಿರಾಜ ಅವರ ಚೊಚ್ಚಲ ಕೃತಿ “ಕಥೆಗೆ ಸಾವಿಲ್ಲ’ ಮತ್ತು ಎಸ್. ರತ್ನ ವಿಠ್ಠಲ್ಕರ್ ಬರೆದ “ಪುನರ್ವಸಂತ’ ಕವನ ಸಂಕಲನವನ್ನು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಲೋಕಾರ್ಪಣೆಗೊಳಿಸಿದ್ದಾರೆ. ಇನ್ನು ಹಿರಿಯ ಪತ್ರಕರ್ತ ಮಹೇಶ್ ದೇವಶೆಟ್ಟಿ ಬರೆದಿರುವ, “ಬಂಗಾರದ ಮನುಷ್ಯ’ ಚಿತ್ರದ ಕುರಿತ “ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಕೃತಿ ಕೂಡ ಅಣ್ಣಾವ್ರ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.