“ಕನ್ನಡ ಮೀಡಿಯಂ ರಾಜು’ ಜೊತೆ ಸುದೀಪ್
Team Udayavani, Aug 3, 2017, 5:33 PM IST
ಈ ಹಿಂದೆ “ಫಸ್ಟ್ Rank ರಾಜು’ ಚಿತ್ರದ ಮೂಲಕ ಹೆಸರಾಗಿದ್ದ ಗುರುನಂದನ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ “ರಾಜು ಕನ್ನಡ ಮೀಡಿಯಂ’. ಈ ಚಿತ್ರದಲ್ಲಿ ಸುದೀಪ್ ಅವರೂ ಒಂದು ಪಾತ್ರ ನಿರ್ವಹಿಸಿ ಹೊಸಬರ ತಂಡಕ್ಕೆ ಉತ್ತೇಜನ ನೀಡುತ್ತಿದ್ದಾರೆ.
ಸುದೀಪ್ ಅಭಿನಯದ ಚಿತ್ರೀಕರಣ ನಿನ್ನೆ ಈಗಲ್ಟನ್ ರೆಸಾರ್ಟಿನಲ್ಲಿ ನಿಗಧಿಯಾಗಿತ್ತು. ಇಡೀ ಚಿತ್ರತಂಡವೇ ಉತ್ಸಾಹದಿಂದ ರೆಡಿಯಾಗಿ ರೆಸಾರ್ಟಿನ ಆವರಣದಲ್ಲಿ ನೆರೆದಿತ್ತು. ಹನ್ನೊಂದು ಘಂಟೆ ಹೊತ್ತಿಗೆಲ್ಲಾ ಸುದೀಪ್ ಕೂಡಾ ಅಲ್ಲಿಗೆ ಹಾಜರಾಗಿದ್ದರು. ಆದರೆ, ಆ ಹೊತ್ತಿಗೆಲ್ಲಾ ಐಟಿ ಅಧಿಕಾರಿಗಳು ಈಗಲ್ಟನ್ ರೆಸಾರ್ಟಿನಲ್ಲಿ ಪರಿಶೀಲನೆ ನಡೆಸುತ್ತಿದ್ದರು. ಆದ ಕಾರಣ ಚಿತ್ರ ತಂಡ ಏನೇ ಪ್ರಯತ್ನ ಪಟ್ಟರೂ ಕೂಡಾ ಒಂದು ಘಂಟೆ ಕಾಲ ಸುದೀಪ್ ಸೇರಿದಂತೆ ಯಾರನ್ನೂ ಒಳ ಬಿಟ್ಟಿರಲಿಲ್ಲ.
ಕಡೆಗೆ ಚಿತ್ರ ತಂಡ ಬಿಡದಿ ಪೊಲೀಸರ ಸಹಕಾರದೊಂದಿಗೆ ಈಗಲ್ಟನ್ ರೆಸಾರ್ಟ್ ಒಳಗಿರೋ ಗಾಲ್ಫ್ ಮೈದಾನದಲ್ಲಿ ಚಿತ್ರೀಕರಣ ಆರಂಭಿಸಿತ್ತು. ಇಷ್ಟೆಲ್ಲ ಆಗುವವರೆಗೂ ತಾಳ್ಮೆಯಿಂದ ಕಾದು ನಂತರ ಸರಿರಾತ್ರಿ ಒಂದು ಘಂಟೆಯವರೆಗೂ ಸುದೀಪ್ ಉತ್ಸಾಗದಿಂದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
“ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ಗುರುನಂದನ್, ಆಶಿಕಾ, ಆವಂತಿಕಾ ಶೆಟ್ಟಿ ಮುಂತಾದವರು ನಟಿಸಿದ್ದು, ಆ್ಯಂಜಲೀನಾ ಎಂಬ ರಷ್ಯದ ಮಾಡೆಲ್ ನಟಿಸಿರುವುದು ವಿಶೇಷ. ಜೊತೆಗೆ, “ಬಿಗ್ ಬಾಸ್ ಸೀಸನ್-4′ ವಿನ್ನರ್ ಪ್ರಥಮ್ ಕೂಡಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ನರೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ “ಫಸ್ಟ್ Rank ರಾಜು’ ಸಿನಿಮಾ ಮೂಲಕ ಗಾಂಧಿನಗರದಲ್ಲಿ ಸುದ್ದಿಯಾದ ನರೇಶ್ ಈಗ ಮತ್ತೂಮ್ಮೆ ಗುರುನಂದನ್ ಜೊತೆಗೆ ಸಿನಿಮಾ ಮಾಡಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಅವರದ್ದೇ. ಇನ್ನು ಕಿರಣ್ ರವೀಂದ್ರನಾಥ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.