

Team Udayavani, Jan 30, 2025, 5:37 PM IST
ನಟ ರಾಜವರ್ಧನ್ ಈಗ ಕುಸ್ತಿ ಅಖಾಡಕ್ಕೆ ಇಳಿದಿದ್ದಾರೆ. ಅವರ ಅಭಿನಯದ ಬಹು ನಿರೀಕ್ಷಿತ “ಗಜರಾಮ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಈ ಸಿನಿಮಾ ಮೂಲಕ ಕುಸ್ತಿ ಮನರಂಜನೆ, ಪ್ರೀತಿ, ಪ್ರೇಮ, ಆ್ಯಕ್ಷನ್, ಸೆಂಟಿಮೆಂಟ್‌ನಂಥ ಹೈಲೈಟ್ಸ್‌ಗಳನ್ನು ಪ್ರೇಕ್ಷಕರು ಕಣ್ತುಂಬಿ ಕೊಳ್ಳಬಹುದು. ಫೆ. 7 ರಂದು ಚಿತ್ರ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
ಈವರೆಗೆ ಚಂದನವನದ ಕೆಲ ಚಿತ್ರ ಗಳಲ್ಲಿ ಸಹಾಯಕ, ಸಹ ನಿರ್ದೇಶಕರಾಗಿ ಅನುಭವ ಗಳಿಸಿರುವ ಸುನೀಲ್ ಕುಮಾರ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.
ಲೈಫ್ಲೈನ್ ಫಿಲ್ಮ್ ಪ್ರೊಡಕ್ಷನ್ಸ್‌ನಡಿ ನರಸಿಂಹಮೂರ್ತಿ ಈ ಚಿತ್ರಕ್ಕೆ ಹಣ ಹೂಡಿದ್ದು, ಈ ಕಾರ್ಯದಲ್ಲಿ ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಾಥ್ ನೀಡಿದ್ದಾರೆ. ರಾಜವರ್ಧನ್, ತಪಸ್ವಿನಿ, ಕಬೀರ್ ಸಿಂಗ್, ದೀಪಕ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಗೀತೆಯೊಂದಕ್ಕೆ ಹೆಜ್ಜೆ ಹಾಕಿರುವುದು ವಿಶೇಷ.
ಮನೋಮೂರ್ತಿ ಅವರ ಸಂಗೀತ ಕೆ.ಎಸ್. ಚಂದ್ರ ಶೇಖರ್ ಛಾಯಾ ಗ್ರಾಹಣ, ಜ್ಞಾನೇಶ್ ಮಠದ್ ಸಂಕಲನ, ಧನಂಜಯ್ ನೃತ್ಯ ಸಂಯೋಜನೆ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ.
Kundapura: ನಿರ್ವಹಣೆಯಿಲ್ಲದೆ ನಿಷ್ಪ್ರಯೋಜಕವಾದ ಗುಂಡೂರು ಅಣೆಕಟ್ಟು
MUDA ಸೈಟ್ ಹಿಂದಿರುಗಿಸಿದ ನಂತರ ಇ.ಡಿ ನೋಟಿಸ್ ಕೊಡಲಾಗದು: ಪಾರ್ವತಿ ಪರ ವಕೀಲ ಸಂದೇಶ ಚೌಟ
Udupi: ಖಾಸಗಿ ಫೈನಾನ್ಸ್ ಮಾಲಕ ಕುಸಿದು ಬಿದ್ದು ಸಾ*ವು
Bollywood: ಸೆಟ್ಟೇರುವ ಮುನ್ನವೇ ನಿಂತು ಹೋಗುತ್ತಾ ವೈರಲ್ ಹುಡುಗಿ ಮೊನಾಲಿಸಾಳ ಸಿನಿಮಾ?
Mangaluru: ಪ್ರವಾಸೋದ್ಯಮ: 7,800 ಕೋ.ರೂ. ಹೂಡಿಕೆ
You seem to have an Ad Blocker on.
To continue reading, please turn it off or whitelist Udayavani.