Rakshak bullet:ಮೊದಲ ಚಿತ್ರದಲ್ಲೇ ಮಚ್ಚು ಹಿಡಿಯಲಿರುವ ರಕ್ಷಕ್‌ ಬುಲೆಟ್:‌ಪೋಸ್ಟರ್‌ ರಿಲೀಸ್

Team Udayavani, Apr 3, 2024, 10:38 AM IST

7

ಬೆಂಗಳೂರು:  ಸ್ಯಾಂಡಲ್‌ವುಡ್‌ನಲ್ಲಿ ತನ್ನ ಹಾಸ್ಯದಿಂದಲೇ ಅಪಾರ ಮಂದಿಯ ಮನೆ – ಮನ ಗೆದ್ದ ಬುಲೆಟ್‌ ಪ್ರಕಾಶ್‌ ಅವರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅವರ ಕಾಮಿಡಿ ಟೈಮಿಂಗ್‌  ಚಂದನವನದಲ್ಲಿ ಅವರನ್ನು ಉತ್ತುಂಗಕ್ಕೇರಿಸಿತ್ತು.

ಇದೀಗ ಬುಲೆಟ್‌ ಪ್ರಕಾಶ್‌ ಅವರ ಮಗ ರಕ್ಷಕ್‌ ಇದೇ ಮೊದಲ ಬಾರಿಗೆ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಮೊದಲ ಚಿತ್ರ ಶೀಘ್ರದಲ್ಲೇ ಆರಂಭಗೊಳ್ಳಲಿದೆ.

ರಕ್ಷಕ್‌ ಅವರ ಪರಿಚಯ ಕನ್ನಡಿಗರಿಗೆ ಮಾಡಿಕೊಡಬೇಕಿಲ್ಲ. ಯಾಕೆಂದರೆ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮದೇ ಆದ ಫಾಲೋವರ್ಸ್‌ ಗಳನ್ನು ಸೃಷ್ಟಿಸಿರುವ ಅವರು, ದೊಡ್ಡ ದೊಡ್ಡ ಡೈಲಾಗ್ಸ್‌ ಗಳನ್ನು ಹೇಳಿ ತಮಗೆ ತಾವೇ ಹೈಪ್‌ ಕೊಟ್ಟು ಸಾಗಿ ಬಂದಿದ್ದಾರೆ.

ಹತ್ತು‌ ಮಾಸ್ ಡೈಲಾಗ್  ಬಿಟ್ರೆ ಕರ್ನಾಟಕನೇ ನಂದು.. ಹೀಗೆ ಅನೇಕ ಡೈಲಾಗ್ಸ್‌ ಗಳನ್ನು ಹೇಳಿ ಹೈಪ್‌ ಸೃಷ್ಟಿಸಿಕೊಂಡ ರಕ್ಷಕ್‌ ಸಾಮಾಜಿಕ ಜಾಲತಾಣದಲ್ಲಿ ಹತ್ತಾರು ಬಾರಿ ಟ್ರೋಲ್‌ ಗಳಿಗೆ ಆಹಾರವಾಗಿದ್ದಾರೆ.  ಟ್ರೋಲ್‌ ಗಳಿಂದ ಸುದ್ದಿಯಾದ ಅವರಿಗೆ ಅದೇ ಟ್ರೋಲ್‌ ಗಳಿಂದ ಬಿಗ್‌ ಬಾಸ್‌ ಸೀಸನ್‌ 10 ಗೆ ಹೋಗುವ ಅವಕಾಶ ಒದಗಿಬಂತು. ಬಿಗ್‌ ಬಾಸ್‌ ನಲ್ಲೂ ತನ್ನ ವರ್ತನೆಯಿಂದ ಸದ್ದು ಮಾಡಿದ ರಕ್ಷಕ್‌ ಅಲ್ಲಿಂದ ಹೊರಬಂದ ಬಳಿಕವೂ ಬಿಗ್‌ ಬಾಸ್‌ ಬಗ್ಗೆಯೇ ಸಂದರ್ಶನದಲ್ಲಿ ಕೆಲವೊಂದು ಮಾತುಗಳನ್ನಾಡಿ ಟೀಕೆ ಹಾಗೂ ಟ್ರೋಲ್‌ ಗೆ ಒಳಗಾಗಿದ್ದರು.

ಎಷ್ಟೇ ಟ್ರೋಲ್‌ ಮಾಡಿದರೂ, ತಾನು ಇರೋದೆ ಹೀಗೆ ಎನ್ನುವ ರಕ್ಷಕ್‌ ಬುಲೆಟ್‌ ಇದೀಗ ಚೊಚ್ಚಲ ಬಾರಿಗೆ ಸಿನಿರಂಗಕ್ಕೆ ಕಾಲಿಡಲಿದ್ದಾರೆ. ಆ ಮೂಲಕ ತಂದೆಯ ಹಾದಿಯಲ್ಲಿ ಹೆಜ್ಜೆ ಇಡಲಿದ್ದಾರೆ.

ಯಾವ ಸಿನಿಮಾ ಇದು?:  ಬುಲೆಟ್‌ ಪ್ರಕಾಶ್‌ ಅವರ ಹುಟ್ಟುಹಬ್ಬದಂದು(ಏ.2 ರಂದು) ರಕ್ಷಕ್‌ ತಮ್ಮ ಮೊದಲ ಸಿನಿಮಾದ ಪೋಸ್ಟರ್‌ ನ್ನು ರಿಲೀಸ್‌ ಮಾಡಿದ್ದಾರೆ.

“ಎಲ್ಲಾ ‌ನನ್ನ‌ ಆತ್ಮೀಯರೆ , ಇಂದು‌ ನನ್ನ ಪೂಜ್ಯ ತಂದೆ ದಿವಂಗತ “ಬುಲೆಟ್ ಪ್ರಕಾಶ್” ರವರ 47ನೇ ಜನ್ಮದಿನ. ಇಂದಿನ ವಿಶೇಷವೇನೆಂದರೆ, ನಾನು ನಾಯಕ ನಟನಾಗಿ ನಟಿಸುತ್ತಿರುವ, ನನ್ನ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ನನಗೆ ಸಂತಸ ತಂದಿದೆ. ನನ್ನ ತಂದೆಯ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಕೂಡ ಸದಾ ನನ್ನ ಮೇಲಿರಲಿ ಎಂದು ಬಯಸುತ್ತೇನೆ. ನನಗೂ ಹಾಗೂ ನನ್ನ ಇಡೀ ಚಿತ್ರ ತಂಡಕ್ಕೂ ಹರಸಿ ಹಾರೈಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ” ಎಂದು ರಕ್ಷಕ್‌ ಬರೆದುಕೊಂಡಿದ್ದಾರೆ.

ಮಚ್ಚು ಅಡ್ಡವಿಟ್ಟು ʼಆರ್‌ ಬಿ 01ʼ ಎಂದು ಬರೆಯಲಾಗಿದೆ. ಟೈಟಲ್‌ – ಟೀಸರ್‌ ಶೀಘ್ರದಲ್ಲೇ ರಿಲೀಸ್‌ ಆಗಲಿದೆ. ಪೋಸ್ಟರ್‌ ಕೆಳಗೆ ”ಮಚ್ಚಾ ಏರಿಯಾನಲ್ಲಿ ಕಣ್ಮುಂದೆ ಬೇಜಾನ್ ಗಾಡಿಗಳು ಸೌಂಡ್ ಮಾಡ್ತಾವೆ. ಆದರೆ ಸೌಂಡ್ ಕೇಳ್ತಿದ್ದಂಗೆ ಇದೇ ಗಾಡಿ ಅಂತ ಹೇಳೋದು ಒಂದನ್ನೇ”. ”ಬುಲೆಟ್”, ”ಇನ್ಮುಂದೆ ನಂದೆ ರೌಂಡು.. ನಂದೆ ಸೌಂಡು..” ಎನ್ನುವ ಸಾಲುಗಳನ್ನು ಬರೆಯಲಾಗಿದೆ.

ಈ ಸಿನಿಮಾವನ್ನು ಕ್ರಿಶ್‌ ಎನ್ನುವವರು ನಿರ್ದೇಶನ ಮಾಡಲಿದ್ದಾರೆ.  ಶ್ರೀಹರಿ  ಅವರ ಸಂಗೀತ ನಿರ್ದೇಶನ ಇರಲಿದೆ. ಶಿವು ಅವರ ನೃತ್ಯ ನಿರ್ದೇಶನ , ಮಹೇಶ್ ಗಂಗಾವತಿ ಸಾಹಸ ನಿರ್ದೇಶನ ಚಿತ್ರಕ್ಕಿರಲಿದೆ. ‘ಶ್ರೀಧರ ಕಶ್ಯಪ್’ ಕ್ಯಾಮರಾದಲ್ಲಿ ಸಿನಿಮಾ ಸೆರೆಯಾಗಲಿದೆ.

View this post on Instagram

A post shared by rakshak sena (@rakshak_bullet)

ಟಾಪ್ ನ್ಯೂಸ್

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು

ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.