ʼರಕ್ಷಕʼ ಹಾಡಿನ ಮೂಲಕ ಪೊಲೀಸ್ ಇಲಾಖೆಗೆ ಗೌರವ ಸಲ್ಲಿಸಿದ “ನಿಮ್ಮೆಲ್ಲರ ಆಶೀರ್ವಾದ” ಚಿತ್ರತಂಡ
Team Udayavani, Jul 17, 2023, 4:35 PM IST
ಬೆಂಗಳೂರು: ಪೊಲೀಸ್ ವೃತ್ತಿ ಬದುಕಿನ ಸುತ್ತ ಸಾಗುವ ಕಥೆಯನ್ನಿಟ್ಟುಕೊಂಡು ತೆರೆಗೆ ಬರಲು ಸಿದ್ದವಾಗಿರುವ “ನಿಮ್ಮೆಲ್ಲರ ಆಶೀರ್ವಾದ” ಚಿತ್ರತಂಡ ಟ್ರೇಲರ್ ರಿಲೀಸ್ ಮಾಡಿ ಗಮನ ಸೆಳೆದಿತ್ತು. ಇದೀಗ ಚಿತ್ರತಂಡ ಸಿನಿಮಾದ ಮತ್ತೊಂದು ಹಾಡನ್ನು ರಿಲೀಸ್ ಮಾಡಿದ್ದು, ಸಖತ್ ಗಮನ ಸೆಳೆಯುತ್ತಿದೆ.
ಆಶೀರ್ವಾದ್ ಎನ್ನುವ ಪೊಲೀಸ್ ಅಧಿಕಾರಿಯ ವೃತ್ತಿ ಬದುಕಿನ ಸುತ್ತ ಸಾಗುವ “ನಿಮ್ಮೆಲ್ಲರ ಆಶೀರ್ವಾದ” ಚಿತ್ರ ಈ ಹಿಂದೆ ʼಆಸರೆʼ ಎನ್ನುವ ಹಾಡನ್ನು ರಿಲೀಸ್ ಮಾಡಿತ್ತು. ರೊಮ್ಯಾಂಟಿಕ್ ಸಾಹಿತ್ಯವುಳ್ಳ ಈಗಾಗಲೇ ಕೇಳುಗರ ಮನಗೆದ್ದಿದೆ. ಇದೀಗ ʼರಕ್ಷಕʼ ಎನ್ನುವ ಆರಕ್ಷಕ ಇಲಾಖೆಗೆ ಗೌರವ ಸಲ್ಲಿಸುವ ಸ್ಪೂರ್ತಿದಾಯಕ ಸಾಲನ್ನು ಸಾರುವ ಹಾಡನ್ನು ರಿಲೀಸ್ ಮಾಡಿದೆ.
ಖ್ಯಾತ ಗಾಯಕ ರಘು ದೀಕ್ಷಿತ್ ಅವರ ಧ್ವನಿಯಲ್ಲಿ ,ಉಮೇಶ್ ಗೌತಮ್ ನಾಯಕ್ ಅವರ ಸ್ಪೂರ್ತಿದಾಯಕ ಸಾಹಿತ್ಯದಲ್ಲಿ ಸುನಾದ್ ಗೌತಮ್ ಅವರ ಮ್ಯೂಸಿಕ್ ನಲ್ಲಿ ಈ ಹಾಡು ಮೂಡಿಬಂದಿದೆ.
“ಜೈಹಿಂದ್” ಎಂದು ಶುರುವಾಗುವ ಹಾಡು “ತನ್ನಸೆಯ ಬಿಟ್ಟು ದೇಶಕ್ಕೆ ಎದೆಕೊಟ್ಟು…” ಎನ್ನುವ ಸಾಲಿನೊಂದಿಗೆ ಸಾಗುತ್ತದೆ. ಹಾಡು ಕೇಳುವಾಗ ಪೊಲೀಸರ ಕಾರ್ಯವೈಖ್ಯರಿ ಬಗ್ಗೆ ಹೆಮ್ಮೆಯಾಗುತ್ತದೆ.
ಈ ಹಾಡು ಎ2 ಮ್ಯೂಸಿಕ್ ನಲ್ಲಿ ರಿಲೀಸ್ ಆಗಿದ್ದು, ರಘು ದೀಕ್ಷಿತ್ ಅವರ ಮ್ಯಾಜಿಕಲ್ ವಾಯ್ಸ್ ವುಳ್ಳ ಹಾಡು ಮೋಡಿ ಮಾಡುತ್ತದೆ.
ವರುಣ್ ಸಿನಿ ಕ್ರಿಯೇಶನ್ಸ್‌ನಡಿ ವರುಣ್ ಹೆಗ್ಡೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ರವಿಕಿರಣ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪ್ರತೀಕ್ ಶೆಟ್ಟಿ ಮತ್ತು ಪಾಯಲ್ ರಾಧಾಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಎಂ. ಎನ್.ಲಕ್ಷ್ಮೀದೇವಿ, ಅರವಿಂದ ಬೋಳಾರ್, ಗೋವಿಂದೇಗೌಡ, ಸ್ವಾತಿ ಗುರುದತ್, ದಿನೇಶ್ ಮಂಗಳೂರು ಸೇರಿ ಹಲವರಿದ್ದಾರೆ.
ಚಿತ್ರಕ್ಕೆ ಸರವಣನ್ ಜಿ.ಎನ್ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ, ರೂಪೇಂದ್ರ ಆಚಾರ್ ಕಲಾ ನಿರ್ದೇಶನ, ಸುನಾದ್ ಗೌತಮ್ ಸಂಗೀತ ಮತ್ತು ವಿವೇಕ್ ಚಕ್ರವರ್ತಿ ಹಿನ್ನೆಲೆ ಸಂಗೀತ, ಸುರೇಶ್ ಆರುಮುಗಂ ಸಂಕಲನವಿದೆ.
ಇದೇ ಜು.21 ರಂದು ರಾಜ್ಯಾದ್ಯಂತ ಸಿನಿಮಾ ತೆರೆಗೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.