ಹೊಸ ಚಿತ್ರ ಘೋಷಿಸಿದ ರಕ್ಷಿತ್ ಶೆಟ್ಟಿ: ರಿಷಭ್-ದಿಗಂತ್-ಅಚ್ಯುತ್ ಜೊತೆ ‘ಬ್ಯಾಚುಲರ್ ಪಾರ್ಟಿ’
Team Udayavani, Sep 1, 2022, 3:59 PM IST
ತನ್ನ ತಂಡದಲ್ಲಿ ಕೆಲಸ ಮಾಡಿದ್ದ ನವ ನಿರ್ದೇಶಕರಿಗೆ ಸದಾ ಬೆಂಬಲವಾಗಿ ನಿಲ್ಲುವ ರಕ್ಷಿತ್ ಶೆಟ್ಟಿ ಇದೀಗ ಮತ್ತೊಂದು ಚಿತ್ರ ಘೋಷಿಸಿದ್ದಾರೆ. ತಮ್ಮ ಪರಂವಾ ಸ್ಟುಡಿಯೋಸ್ ನಲ್ಲಿ ಹೊಸ ಚಿತ್ರವನ್ನು ಘೋಷಣೆ ಮಾಡಿದ್ದು, ಚಿತ್ರಕ್ಕೆ ‘ಬ್ಯಾಚುಲರ್ ಪಾರ್ಟಿ’ ಎಂದು ಹೆಸರಿಡಲಾಗಿದೆ.
ಜಿ.ಎಸ್.ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ರಿಷಭ್ ಶೆಟ್ಟಿ, ದಿಗಂತ್ ಮಂಚಾಲೆ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕಾಮಿಡಿ ಜಾನರ್ ನ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಸಿರಿ ರವಿಕುಮಾರ್, ಅರ್ಚರಾ ಕಿರ್ಕ್, ಪ್ರಕಾಶ್ ತುಮಿನಾಡು ಮುಂತಾದವರು ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ಕೇರಳ ಪ್ರವಾಸ; ಐಎನ್ಎಸ್ ವಿಕ್ರಾಂತ್ ನಾಡಿಗೆ ಸಮರ್ಪಣೆ
ರಕ್ಷಿತ್ ಶೆಟ್ಟಿ ಅವರ ಸೆವೆನ್ ಆಡ್ಸ್ ತಂಡದಲ್ಲಿದ್ದ ಈ ಹಿಂದೆ ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ಸ.ಹಿ.ಪ್ರಾ.ಶಾ. ಕಾಸರಗೋಡು ಚಿತ್ರಗಳ ಕಥೆ- ಚಿತ್ರಕಥೆಯಲ್ಲಿ ಕೆಲಸ ಮಾಡಿದ್ದ ಅಭಿಜಿತ್ ಮಹೇಶ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.
ಬ್ಯಾಚುಲರ್ ಪಾರ್ಟಿ ಚಿತ್ರದ ಕಥೆ- ಚಿತ್ರಕಥೆ ಅಭಿಜಿತ್ ಮಹೇಶ್ ಅವರದ್ದೇ. ಚಿತ್ರಕ್ಕೆ ಅರ್ಜುನ್ ರಾಮು ಸಂಗೀತವಿದ್ದು, ಅರವಿಂದ ಎಸ್ ಕಶ್ಯಪ್ ಛಾಯಾಗ್ರಹಣವಿದೆ.
ನಮ್ಮ @ParamvahStudios ನಿರ್ಮಾಣ ಮಾಡುತ್ತಿರುವ ಮತ್ತೊಂದು ಹೊಸ ಚಿತ್ರ ‘ಬ್ಯಾಚುಲರ್ ಪಾರ್ಟಿ’. ನಮ್ಮ ಈ ಪ್ರಯಾಣವನ್ನು ನಿಮ್ಮ ಸಮ್ಮುಖದಿಂದ, ಹರಸಿರಿ ?
Happy and delighted to announce #ParamvahStudios‘ next project, an adventure comedy film, “Bachelor Party”.https://t.co/lF5LQ3HIaq #BachelorParty
— Rakshit Shetty (@rakshitshetty) September 1, 2022
ಸದ್ಯ ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಶೂಟಿಂಗ್ ಮುಗಿಸಿರುವ ರಕ್ಷಿತ್ ಶೆಟ್ಟಿ ಮುಂದೆ ತಮ್ಮ ನಿರ್ದೇಶದ ‘ರಿಚರ್ಡ್ ಆ್ಯಂಟನಿ’ ಯ ಕೆಲಸದತ್ತ ಗಮನ ಹರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.