Puneeth Rajkumar: “ಅಪ್ಪು“ ಸದಾ ಶಾಶ್ವತ ಎಂದ ಕಿಚ್ಚ.. ವಿಶೇಷ ಮೆಲುಕು ಹಂಚಿಕೊಂಡ ರಾಧಿಕಾ
Team Udayavani, Oct 29, 2023, 5:31 PM IST
ಬೆಂಗಳೂರು: ಅಪ್ಪು ಅಗಲಿ ಇಂದಿಗೆ ಎರಡು ವರ್ಷಗಳು ಕಳೆದಿದೆ. ಅವರ ಅಗಲಿಕೆಯ ಬಳಿಕ ಪ್ರತಿ ನಿತ್ಯವೂ ಅವರ ಸಮಾಧಿಯ ಬಳಿಗೆ ಹೋಗಿ ಅಭಿಮಾನಿಗಳು ಭೇಟಿ ನೀಡಿದ್ದಾರೆ. ಎರಡನೇ ವರ್ಷದ ಪುಣ್ಯಸ್ಮರಣೆ ದಿನ ರಾಜ್ ಕುಟುಂಬದ ಸದಸ್ಯರು ಸಮಾಧಿ ಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ.
ಇತ್ತ ಅಭಿಮಾನಿಗಳು ಸಮಾಧಿ ಬಳಿ ಅಪ್ಪು ಅವರ ಸ್ಮರಣೆಯನ್ನು ಮಾಡಿದ್ದಾರೆ. ಪುಟ್ಟ ಮಕ್ಕಳೂ ಕೂಡ ತನ್ನ ನೆಚ್ಚಿನ ʼರಾಜಕುಮಾರʼನನ್ನು ನೆನೆದಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ವ್ಯಕ್ತಿತ್ವದ ಬಗ್ಗೆ ಅವರ ಅಭಿಮಾನಿಗಳು ಹೊಗಳಿದ್ದಾರೆ. ಅಪ್ಪು ಅವರ ಹಳೆಯ ವಿಡಿಯೋ, ನುಡಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಅಗಲಿಕೆಯ ದಿನ ಸೆಲೆಬ್ರಿಟಿಗಳನ್ನು ಅವರನ್ನು ನೆನೆದು ಭಾವುಕರಾಗಿದ್ದಾರೆ. ಸುದೀಪ್, ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕರು ಅಪ್ಪು ಅವರನ್ನು ಸ್ಮರಿಸಿದ್ದಾರೆ.
ನಮ್ಮ “ಅಪ್ಪು“ ಸದಾ ಶಾಶ್ವತ ….❤️ ಎಂದು ಕಿಚ್ಚ ಸುದೀಪ್ ಅಪ್ಪು ಅವರ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು, “ನಮ್ಮ ಮನಗಳಲ್ಲಿ ನೀವು ಎಂದೆಂದಿಗೂ ಜೀವಂತ!” ಎಂದು ಬರೆದುಕೊಂಡಿದ್ದಾರೆ. ನಟಿ ರಾಧಿಕಾ ಪಂಡಿತ್ ಅವರು ತನ್ನ ಮದುವೆ ವೇಳೆ ಪುನೀತ್ ಬಂದು ಹಾರೈಸಿದ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಅಪ್ಪು ಫೋಟೋವನ್ನು ಹಂಚಿಕೊಂಡಿದ್ದಾರೆ.
ಪತ್ನಿ ಅಶ್ವಿನಿ, ನೆನಪಿನ ಆಳದಲ್ಲಿ ಎರಡು ವರ್ಷಗಳು… ನಮ್ಮೆಲ್ಲರ ಸತ್ಕಾರ್ಯಗಳಿಗೆ ಮಾರ್ಗದರ್ಶಿಯಾಗಿ ನಿಂತಿರುವ ಅಪ್ಪು ಅವರ ಅನನ್ಯ ಚೇತನಕ್ಕೆ ಕಾಲವೇ ಸಾಕ್ಷಿಯಾಗಿದೆ. ಅಪ್ಪು ಅವರ ಮೇಲೆ ಸದಾ ತಮ್ಮ ಅಭಿಮಾನ ಮತ್ತು ಪ್ರೀತಿಯನ್ನು ತೋರುವ ಎಲ್ಲಾ ಬಂಧು ಮಿತ್ರರು ಹಾಗೂ ಅಭಿಮಾನಿಗಳಿಗೆ ನಮ್ಮ ಗೌರವಪೂರ್ಣ ವಂದನೆಗಳು. ನಾವೆಲ್ಲರೂ ಸದಾ ಅಪ್ಪು ಅವರ ನೆನಪುಗಳನ್ನು ಸ್ಮರಿಸುತ್ತಾ ಹಾಗೂ ಅವರ ನಲ್ಮೆಯ ನಗುವನ್ನು ಸಂಭ್ರಮಿಸೋಣ ಎಂದು ಬರೆದುಕೊಂಡಿದ್ದಾರೆ.
ನಮ್ಮ “ಅಪ್ಪು“ ಸದಾ ಶಾಶ್ವತ ….❤️. pic.twitter.com/68kaJqVaZw
— Kichcha Sudeepa (@KicchaSudeep) October 29, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ
Sandalwood: ಪ್ಯಾನ್ ಇಂಡಿಯಾ ʼಪುಷ್ಪʼ ಜೊತೆ ರಿಲೀಸ್ ಆಗಲಿದೆ ಕನ್ನಡದ ʼಭಗತ್ʼ
Sandalwood: ಡಿ.27ಕ್ಕೆ ‘ರಾಜು ಜೇಮ್ಸ್ ಬಾಂಡ್’ ರಿಲೀಸ್
Toxic Movie: ಯಶ್ ʼಟಾಕ್ಸಿಕ್ʼ ಸಿನಿಮಾಕ್ಕಾಗಿ ಮರ ಕಡಿದ ಆರೋಪ; ಎಫ್‌ಐಆರ್ ದಾಖಲು
Abishek Ambareesh: ಗಂಡು ಮಗುವಿಗೆ ಜನ್ಮ ನೀಡಿದ ಅವಿವಾ; ಅಂಬಿ ಮನೆಯಲ್ಲಿ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.