ಜುಲೈ 3ಕ್ಕೆ ರಕ್ಷಿತ್ ಶೆಟ್ಟಿ-ರಶ್ಮಿಕಾ ನಿಶ್ಚಿತಾರ್ಥ
Team Udayavani, Jun 3, 2017, 11:43 AM IST
ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಮಧ್ಯೆ ನಿಜಕ್ಕೂ ಲವ್ ಇದೆಯಾ, ಅವರಿಬ್ಬರು ಮದುವೆಯಾಗುತ್ತಿದ್ದಾರಾ ಅಥವಾ ಸುಮ್ಮನೆ ಹಬ್ಬಿದ ಗಾಸಿಪ್ ಎಂಬ ಪ್ರಶ್ನೆ ಅನೇಕರಲ್ಲಿ ಕಾಡುತ್ತಿದೆ. ಅದಕ್ಕೆ ಕಾರಣ ಕೆಲ ದಿನಗಳ ಹಿಂದೆ ರಕ್ಷಿತ್ ಹಾಗೂ ರಶ್ಮಿಕಾ ಮಧ್ಯೆ ಅಫೇರ್ ಇದ್ದು, ಅವರಿಬ್ಬರು ಮದುವೆಯಾಗಲಿದ್ದಾರೆಂಬ ಸುದ್ದಿ ಜೋರಾಗಿ ಕೇಳಿಬಂದಿತ್ತು.
ಆದರೆ, ಸುದ್ದಿ ಜೋರಾಗಿ ಸುತ್ತುತ್ತಿದ್ದಂತೆ ಇಬ್ಬರೂ, “ವಿ ಆರ್ ಜಸ್ಟ್ ಫ್ರೆಂಡ್ಸ್’ ಎನ್ನುವ ಮೂಲಕ ಕುತೂಹಲವನ್ನು ತಣ್ಣಗಾಗಿಸಿದರು. ಆದರೆ, ಈಗ ಲೇಟೆಸ್ಟ್ ನ್ಯೂಸ್ ಬಂದಿದೆ. ಅದೇನೆಂದರೆ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಜುಲೈ 3 ರಂದು ನಡೆಯಲಿದೆ. ಇದು ಹಂಡ್ರೆಡ್ ಪರ್ಸೆಂಟ್ ಕನ್ಫರ್ಮ್.
ಜುಲೈ 3 ರಂದು ರಕ್ಷಿತ್ ಹಾಗೂ ರಶ್ಮಿಕಾ ಅವರ ನಿಶ್ಚಿತಾರ್ಥ ಕುಶಾಲನಗರದಲ್ಲಿ ನಡೆಯಲಿದ್ದು, ಎರಡು ಕುಟುಂಬ ಹಾಗೂ ಅವರ ಆಪೆ¤ಷ್ಟರಷ್ಟೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ “ಕಿರಿಕ್ ಪಾರ್ಟಿ’ ಚಿತ್ರದ ಕರ್ಣ ಹಾಗೂ ಸಾನ್ವಿ ಒಂದಾಗುತ್ತಿದ್ದಾರೆ. ರಕ್ಷಿತ್ ಕಥೆ ಬರೆದು, ನಾಯಕರಾಗಿ ನಟಿಸಿರುವ “ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಲಾಂಚ್ ಆದವರು ರಶ್ಮಿಕಾ ಮಂದಣ್ಣ.
ತಮ್ಮ ಮೊದಲ ಚಿತ್ರದ ನಟನೆಯಲ್ಲೇ ಎಲ್ಲರ ಮೆಚ್ಚುಗೆ ಪಡೆಯುವ ಮೂಲಕ ಸಾಕಷ್ಟು ಅವಕಾಶಗಳನ್ನು ಪಡೆದುಕೊಂಡವರು ರಶ್ಮಿಕಾ. ಕನ್ನಡವಷ್ಟೇ ಅಲ್ಲದೇ, ತೆಲುಗಿನಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ತಾನು ಲಾಂಚ್ ಮಾಡಿದ ಹುಡುಗಿಯನ್ನೇ ರಕ್ಷಿತ್ ವಿವಾಹವಾಗುವ ಮೂಲಕ ಚಿತ್ರರಂಗದ ಸಿನಿಜೋಡಿಗಳ ಸಾಲಿಗೆ ಸೇರುತ್ತಿದ್ದಾರೆ.
ಜುಲೈ 3ಕ್ಕೆ ನಿಶ್ಚಿತಾರ್ಥ ನಡೆದರೆ, ಮದುವೆ ಯಾವಾಗ ಎಂಬ ಪ್ರಶ್ನೆ ಬರಬಹುದು. ಮದುವೆಗೆ ಇನ್ನೂ ಸಮಯವಿದೆ. ಏಕೆಂದರೆ, ಇಬ್ಬರೂ ಸಿನಿಮಾಗಳಲ್ಲಿ ಬಿಝಿ ಇದ್ದಾರೆ. ಇತ್ತ ಕಡೆ ರಕ್ಷಿತ್ “ಅವನೇ ಶ್ರೀಮನ್ನನಾರಾಯಣ’ ಸಿನಿಮಾದಲ್ಲಿ ಬಿಝಿ ಇದ್ದಾರೆ. ಅದು ಮುಗಿದ ನಂತರ ಸುದೀಪ್ ಚಿತ್ರ ನಿರ್ದೇಶಿಸಲಿದ್ದಾರೆ. ಇತ್ತ ಕಡೆ ರಶ್ಮಿಕಾ, ಸುನಿ ನಿರ್ದೇಶನದ “ಚಮಕ್’ ಜೊತೆಗೆ ತೆಲುಗು ಚಿತ್ರದಲ್ಲೂ ಬಿಝಿ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್; ದಶಕದ ಬಳಿಕ ಕನ್ನಡಕ್ಕೆ
Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್ ಪ್ರಸಾದ್ ಸಿನಿಮಾ
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.