Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Team Udayavani, Apr 27, 2024, 1:19 PM IST
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ ‘ಸಪ್ತ ಸಾಗರದಾಚೆ ಎಲ್ಲೋʼ(ಪಾರ್ಟ್ ‘ಎ’ʼʼಬಿʼ) ಸಿನಿಮಾ ಸಕ್ಸಸ್ ಆದ ಖುಷಿಯಲ್ಲಿದ್ದಾರೆ. ಈ ಸಿನಿಮಾದ ಬಳಿಕ ಅವರೀಗ ʼ ‘ರಿಚರ್ಡ್ ಆಂಟನಿʼ ತಯಾರಿಗೆ ಸಿದ್ದರಾಗುತ್ತಿದ್ದಾರೆ.
ʼಉಳಿದವರು ಕಂಡಂತೆʼ ಸಿನಿಮಾದ ಬಳಿಕ ರಕ್ಷಿತ್ ಶೆಟ್ಟಿ ಮತ್ತೆ ನಿರ್ದೇಶನಕ್ಕಿಳಿಯಲಿದ್ದಾರೆ. ಆ ಸಿನಿಮಾದಲ್ಲಿ ʼರಿಚ್ಚಿʼ ಎನ್ನುವ ಪಾತ್ರದ ಸುತ್ತ ಸಾಗುವ ಕಥೆಯನ್ನು ರಕ್ಷಿತ್ ʼರಿಚರ್ಡ್ ಆಂಟನಿʼ ಯಲ್ಲಿ ಹೇಳಲಿದ್ದಾರೆ. ಅನೌನ್ಸ್ ಆದ ದಿನದಿಂದ ದೊಡ್ಡಮಟ್ಟದಲ್ಲಿ ಹೈಪ್ ಹೆಚ್ಚಿಸಿರುವ ಈ ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎನ್ನುವುದು ಇಷ್ಟು ದಿನ ಸಸ್ಪೆನ್ಸ್ ಆಗಿಯೇ ಉಳಿದಿತ್ತು. ಇದೀಗ ರಕ್ಷಿತ್ ಈ ಬಗ್ಗೆ ಮಾತನಾಡಿದ್ದಾರೆ.
ಲೋಕಸಭಾ ಚುನಾವಣೆಗೆ ಮತ ಚಲಾಯಿಸಲು ಉಡುಪಿಗೆ ಬಂದಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು ʼರಿಚರ್ಡ್ ಆಂಟನಿʼ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
“ರಿಚರ್ಡ್ ಆಂಟನಿʼʼ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸ ಶುರುವಾಗಿದೆ. ನಾನು ಮತ ಹಾಕೋಕೆ ಇಲ್ಲಿಗೆ ಬಂದಿದ್ದೆ. ಪೂರ್ತಿ ತಂಡ ಇಲ್ಲಿಗೆ ಶಿಫ್ಟ್ ಆಗ್ತಾ ಇದೆ. ಮೇ 1 ರಿಂದ ಕೆಲಸ ಶುರುವಾಗಲಿದೆ. ಒಂದು ಡ್ರಾಫ್ಟ್ ಸ್ಕ್ರಿಪ್ಟ್ ಕೆಲಸ ಆಗಿದೆ. ಇನ್ನು ಸ್ವಲ್ಪ ಕೆಲಸ ಬಾಕಿಯಿದೆ. ಶೇ. 50-60ರಷ್ಟು ಶೂಟಿಂಗ್ ಕರಾವಳಿ ಭಾಗದಲ್ಲೇ ನಡೆಯಲಿದೆ. 60-70 -80 ರ ಉಡುಪಿಯನ್ನು ನಾನು ರೀ ಕ್ರಿಯೇಟ್ ಮಾಡಬೇಕು ಅದು ಸಾಧ್ಯವಿಲ್ಲ. 10 ವರ್ಷದ ಹಿಂದೆ ಇದ್ದ ಉಡುಪಿಯ ಲೋಕೇಶನ್ ನ್ನು ಈಗ ಹುಡುಕುವುದು ಅಷ್ಟು ಸುಲಭವಲ್ಲ. ಕೆಲವು ಲೋಕೇಶನ್ ಹುಡುಕಲು ಕೇರಳಕ್ಕೆ ಹೋಗಬಹುದು ಅಥವಾ ಗೋಕರ್ಣಕ್ಕೆ ಹೋಗಬೇಕಾಗಿ ಬರಬಹುದು. ಸಿನಿಮಾದಲ್ಲಿ ನಟಿಸೋಕೆ ಬೆಂಗಳೂರಿನ ಕಲಾವಿದರು ಕೇಳ್ತಾ ಇದ್ದಾರೆ. ಆದರೆ ಸ್ಥಳೀಯ ಕಲಾವಿದರೇ ಸಿನಿಮಾದಲ್ಲಿ ಹೆಚ್ಚಾಗಿ ಇರಲಿದ್ದಾರೆ. ಏಕೆಂದರೆ ಸಿನಿಮಾದಲ್ಲಿ ಉಡುಪಿಯ ಭಾಷೆ, ಶೈಲಿಯನ್ನು ಅರಿತವರು ಬೇಕು. ಇಲ್ಲಿನ ಭಾಷೆಯನ್ನು ಬೇರೆಯವರು ಬಂದು ಪ್ರಯತ್ನಿಸಿದರೆ ಅದು ಆಗಲ್ಲ. ಪ್ರತಿಯೊಬ್ಬ ಕಲಾವಿದರು ಉಡುಪಿಯವರೇ ಆಗಿರುತ್ತಾರೆ” ಎಂದು ಹೇಳಿದ್ದಾರೆ.
ಕರಾವಳಿ ಮೂಲದ ಈ ನಟಿಯರಿಗೆ ಒಲಿಯಬಹುದೇ ಅದೃಷ್ಟ?: ರಕಿತ್ ಶೆಟ್ಟಿ ಅವರ ʼರಿಚರ್ಡ್ ಆಂಟನಿʼಯಲ್ಲಿ ಕರಾವಳಿ ಬೇರಿನ ಕಲಾವಿದರೇ ಇರಲಿದ್ದಾರೆ ಎಂದು ಸಿಂಪಲ್ ಸ್ಟಾರ್ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಸಿನಿಮಾದಲ್ಲಿ ನಾಯಕಿ ಯಾರಾಗಿರಬಹುದು ಎನ್ನುವ ಪ್ರಶ್ನೆಗಳು ಮೂಡಿವೆ.
ಶ್ರೀನಿಧಿ ಶೆಟ್ಟಿ: ʼಕೆಜಿಎಫ್ʼ ಮೂಲಕ ಕನ್ನಡಿಗರ ಮನಗೆದ್ದಿರುವ ಕರಾವಳಿ ಬೆಡಗಿ ಶ್ರೀನಿಧಿ ಶೆಟ್ಟಿ ಇಂದು ಸೌತ್ ಸಿನಿಮಾದಲ್ಲಿ ಭರವಸೆ ಮೂಡಿಸಿರುವ ನಟಿಯರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾದಲ್ಲೂ ತನ್ನ ನಟನೆಯ ಮೂಲಕ ಮೋಡಿ ಶ್ರೀನಿಧಿ ಮೂಲತಃ ದಕ್ಷಿಣ ಕನ್ನಡದ ಮೂಲ್ಕಿಯವರು. ರಕ್ಷಿತ್ ಶೆಟ್ಟಿ ಅವರ ʼರಿಚರ್ಡ್ ಆಂಟನಿʼ ಯಲ್ಲಿ ಕಾಣಿಸಿಕೊಳ್ಳುವವರ ಸಾಲಿನಲ್ಲಿ ಸೇರಿದ್ದಾರೆ.
ಸಿನಿ ಶೆಟ್ಟಿ: 2022ರ ಫೇಮಿನಾ ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡಿರುವ ಸಿನಿ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಇನ್ನಂಜೆ ಮೂಲದವರು. ಮುಂಬಯಿಯಲ್ಲಿ ಬೆಳೆದರೂ ಅವರ ಮೂಲ ಕರಾವಳಿ ಆಗಿರುವುದರಿಂದ ಅವರು ಕೂಡ ʼರಿಚರ್ಡ್ ಆಂಟನಿʼಯ ಭಾಗವಾಗಬಹುದು ಎನ್ನಲಾಗುತ್ತಿದೆ.
ಯಶಾ ಶಿವಕುಮಾರ್: ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸಿರುವ “ಪದವಿಪೂರ್ವ” ಚಿತ್ರದ ಮೂಲಕ ಮಿಂಚಿರುವ ಕರಾವಳಿ ಮೂಲದ ಯಶಾ ಶಿವಕುಮಾರ್ ʼರಿಚರ್ಡ್ ಆಂಟನಿʼಯಲ್ಲಿ ಅವಕಾಶ ಪಡೆದರೆ ಅಚ್ಚರಿ ಪಡಬೇಕಿಲ್ಲ. ಈಗಾಗಲೇ ಯಶಾ ʼರಾಜ್ ಸೌಂಡ್ಸ್ & ಲೈಟ್ಸ್ʼ ಎನ್ನುವ ತುಳು ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
ರಚನಾ ರೈ: ಕೋಸ್ಟಲ್ ವುಡ್ ಸಿನಿಮಾದಲ್ಲಿ ಮಿಂಚಿ ಚಂದನವನಕ್ಕೆ ಕಾಲಿಟ್ಟಿರುವ ರಚನಾ ರೈ ಕರಾವಳಿಯ ಭಾಷೆ, ಶೈಲಿ, ಆಚರಣೆಯನ್ನು ಮರೆತಿಲ್ಲ. ಪುತ್ತೂರು ಮೂಲದ ರಚನಾ ರೈ ʼವಾಮನʼ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಡಿಬಾಸ್ ದರ್ಶನ್ ಅವರ ʼಡೆವಿಲ್ʼ ಸಿನಿಮಾ ರಚನಾ ರೈ ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ಸಮಯದಿಂದ ಹರಿದಾಡುತ್ತಿದೆ. ರಚನಾ ರೈ ʼರಿಚರ್ಡ್ ಆಂಟನಿʼಯಲ್ಲಿ ನಾಯಕಿಯಾಗಿ ಆಯ್ಕೆ ಆದರೆ ಅಚ್ಚರಿಯೇನಿಲ್ಲ.
ಸೋನಲ್ ಮೊಂಥೆರೋ: ಚಂದನವನಕ್ಕೆ ಇತ್ತೀಚಿನ ದಿನದಲ್ಲಿ ಸಖತ್ ಬ್ಯುಸಿಯಾಗಿರುವ ತುಳುನಾಡಿನ ಮತ್ತೊಂದು ನಟಿಯೆಂದರೆ ಅದು ಸೋನಲ್ ಅವರು. ʼಬನಾರಸ್ʼ, ʼಪಂಚತಂತ್ರʼ, ʼಗರಡಿʼ ಸೇರಿದಂತೆ ಅನೇಕ ಸಿನಿಮಾದಲ್ಲಿ ನಟಿಸಿರುವ ಸೋನಲ್ ಅವರಿಗೆ ಕೋಸ್ಟಲ್ ಭಾಷಾ ಸೊಗಡು ಸರಾಗವಾಗಿ ಬರುತ್ತದೆ. ಆ ನಿಟ್ಟಿನಲ್ಲಿ ಅವರು ಕೂಡ ʼರಿಚರ್ಡ್ ಆಂಟನಿʼ ಭಾಗವಾಗಬಹುದು ಎನ್ನುವುದು ಸದ್ಯದ ಲೆಕ್ಕಚಾರ.
ಇನ್ನು ಈ ಸಾಲಿನಲ್ಲಿ ನಿಮಿಕಾ ರತ್ನಾಕರ್, ನಟಿ ಹಾಗೂ ನಿರೂಪಕಿ ಅನುಶ್ರೀ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಇವೆಲ್ಲ ಆಯ್ಕೆ ಬಿಟ್ಟು ಹೊಸ ಮುಖವನ್ನು ರಕ್ಷಿತ್ ಪರಿಚಯಿಸಿದರೆ ಅಚ್ಚರಿ ಪಡಬೇಕಿಲ್ಲ.
ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.