“ಗರುಡ ಗಮನ ವೃಷಭ ವಾಹನ”ಕ್ಕೆ ರಕ್ಷಿತ್ ಶೆಟ್ಟಿ ಸಾಥ್
Team Udayavani, Oct 4, 2021, 4:51 PM IST
ಬೆಂಗಳೂರು: “ಒಂದು ಮೊಟ್ಟೆಯ ಕಥೆ”ಯ ರಾಜ್ ಬಿ ಶೆಟ್ಟಿ ಹಾಗೂ ನಟ ರಿಷಬ್ ಶೆಟ್ಟಿ ಕಾಂಬಿನೇಷನ್‍ನ “ಗರುಡ ಗಮನ ವೃಷಭ ವಾಹನ” ಚಿತ್ರಕ್ಕೆ ಇದೀಗ ರಕ್ಷಿತ್ ಶೆಟ್ಟಿಯ ಆಗಮನವಾಗಿದೆ. ಹಾಗಂತ ಸಿಂಪಲ್ ಸ್ಟಾರ್ ರಕ್ಷಿತ್ ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಬಿಡುಗಡೆಗೆ ಸಿದ್ಧವಾಗಿರುವ “ಗರುಡ ಗಮನ ವೃಷಭ ವಾಹನ” ಚಿತ್ರವನ್ನು ರಕ್ಷಿತ್ ಶೆಟ್ಟಿಯವರ “ಪರಂವ ಸ್ಟುಡಿಯೋ” ಅರ್ಪಿಸುತ್ತಿದೆ.
ಇಂದು ಈ ಬಗ್ಗೆ ಹೇಳಿಕೊಂಡಿರುವ ರಕ್ಷಿತ್ ಶೆಟ್ಟಿ, ರಾಜ್ ಶೆಟ್ಟಿ ಎಂಬ ಪ್ರತಿಭೆ ಯಾವ ದೇವರ ವರವೋ ಗೊತ್ತಿಲ್ಲ, ಕನ್ನಡ ಚಿತ್ರರಂಗಕ್ಕೆ ಅವರ ತಪಸ್ಸು, ನಿಷ್ಠೆ, ಆತ್ಮ ಸಮರ್ಪಣೆ ಎಲ್ಲವೂ ಸೇರಿ ಅವರನ್ನು ಉತ್ತಮ ಬರಹಗಾರನನ್ನಾಗಿ ಮಾಡಿದೆ. ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಅವರ ನಿರ್ದೇಶನ ಮತ್ತು ಅಭಿನಯದ ಹೃದಯ ಕಣಿವೆಯಲ್ಲಿ ಚಪ್ಪಾಳೆ ಹರಿಸುತ್ತದೆ. ರಿಷಬ್ ಶೆಟ್ಟಿ, ಗೋಪಾಲ್ ದೇಶಪಾಂಡೆ ಇಬ್ಬರು ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ. ಇಂತಹ ಕಲಾ ಕನಸಿನೊಂದಿಗೆ ಕೈ ಜೋಡಿಸುವುದು, ನನ್ನ ಕನಸು ನನಸಾದಷ್ಟೇ ಸಂತೋಷ. ಪರಂವ ಪಿಕ್ಚರ್ಸ್ ಮೂಲಕ ಈ ಚಿತ್ರವನ್ನು ನಿಮಗೆ ಅರ್ಪಿಸುತ್ತೇವೆ ಎಂದಿದ್ದಾರೆ.
Happy and excited to be collaborating with the team of #GarudaGamanaVrishabhaVahana and presenting the film through #ParamvahPictures ?#ParamvahPresentsGGVV #GGVV #GGVVTheMovie #WelcomeToMangaladevi @RajbShettyOMK @shetty_rishab @ParamvahStudios pic.twitter.com/r9vMhHjAD9
— Rakshit Shetty (@rakshitshetty) October 4, 2021
ಎಲ್ಲಾ ಅಂದುಕೊಂಡಹಾಗೆ ನಡೆದಿದ್ದರೆ ರಾಜ್ ಬಿ ಶೆಟ್ಟಿ ಅವರ “ರುಡ ಗಮನ ವೃಷಭ ವಾಹನ” ಜೂನ್ 4 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಿತ್ತು. ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಕಾರಣವಾಗಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಯಿತು.
ಈ ಚಿತ್ರ ಒಂದು ಗ್ಯಾಂಗ್ ಸ್ಟರ್ ಡ್ರಾಮಾ ಆಗಿದ್ದು ಇದರಲ್ಲಿ ಎರಡು ಪುರುಷ ಪಾತ್ರಗಳಿವೆ, ಇದರಲ್ಲಿ ರಾಜ್ ಮತ್ತು ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇದು ಶಿವ ಮತ್ತು ಹರಿ ನಡುವಿನ ಅಹಂ ನ ಘರ್ಷಣೆಗೆ ಸಂಬಂಧಿಸಿದೆ. ಯಕ್ಷಗಾನ ಪ್ರಸಂಗವಾಗಿರುವ “ಶ್ರೀ ದೇವಿ ಮಹಾತ್ಮೆ” ಕಥೆಯನ್ನೂ ಇದು ಆಧರಿಸಿದೆ. ಈ ಚಿತ್ರವು ತಾಯಿಯ ಪಾತ್ರವನ್ನು ಹೊರತುಪಡಿಸಿ ಯಾವುದೇ ಪ್ರಮುಖ ಸ್ತ್ರೀ ಪಾತ್ರಗಳನ್ನು ಹೊಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.