ರಜನಿಕಾಂತ್ ಜೊತೆ ನಟಿಸುವ ಅವಕಾಶ ಬಿಟ್ಟ ರಕ್ಷಿತ್ ಶೆಟ್ಟಿ
Team Udayavani, Dec 2, 2019, 10:25 AM IST
ರಕ್ಷಿತ್ ಶೆಟ್ಟಿ ಅಭಿನಯದ “ಅವನೇ ಶ್ರೀಮನ್ನಾರಾಯಣ‘ ಚಿತ್ರದ ಟ್ರೇಲರ್‌ಗೆ ಎಲ್ಲೆಡೆಯಿಂದ ಭರಪೂರ ಮೆಚ್ಚುಗೆ ಸಿಗುತ್ತಿರುವುದು ಗೊತ್ತೇ ಇದೆ. ಇದರ ಬೆನ್ನಲ್ಲೇ, ತಮಿಳಿನ ಸೂಪರ್ ಹಿಟ್ ಸಿನಿಮಾ “ಪೆಟ್ಟಾ‘ ಚಿತ್ರದ ನಿರ್ದೇಶಕಕಾರ್ತಿಕ್ ಸುಬ್ಬರಾಜು ಕೂಡ ಚಿತ್ರದ ಟ್ರೇಲರ್ ವೀಕ್ಷಿಸಿ, “ಅದ್ಭುತ ಸಿನಿಮೇಕರ್, ಬರಹಗಾರ ನಟ ರಕ್ಷಿತ್ ಶೆಟ್ಟಿಅವರಿಗೆ ತಮಿಳು ಇಂಡಸ್ಟ್ರಿಗೆ ಸ್ವಾಗತ. ಇಡೀ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್. ಆದಷ್ಟು ಬೇಗ ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ‘ ಎಂದು ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.
ಇಷ್ಟೇ ಆಗಿದ್ದರೆ, ಹೇಳುವಂತಹ ಸುದ್ದಿಯೇನೂ ಅಲ್ಲ. ಆದರೆ, ರಕ್ಷಿತ್‌ಶೆಟ್ಟಿ ಅವರಿಗೆ ರಜನಿಕಾಂತ್ ಅವರ ಜೊತೆ ನಟಿಸುವ ಅವಕಾಶ ಬಂದಿದ್ದರೂ, ಅದನ್ನು ನಿರಾಕರಿಸಿದ್ದರು ಎಂದರೆ ನಂಬಲೇಬೇಕು. ಹೌದು, ಇದುಸತ್ಯ. “ಪೆಟ್ಟಾ‘ ಚಿತ್ರದಲ್ಲಿ ನಟಿಸುವ ಅವಕಾಶ ರಕ್ಷಿತ್ ಶೆಟ್ಟಿ ಅವರನ್ನು ಹುಡುಕಿ ಬಂದಿತ್ತು. ಆದರೆ, ರಕ್ಷಿತ್ ಶೆಟ್ಟಿ ಮಾತ್ರ, ನಟಿಸಲು ಸಾಧ್ಯವಾಗಲಿಲ್ಲ. “ಪೆಟ್ಟಾ‘ ಚಿತ್ರದ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಮತ್ತು ರಕ್ಷಿತ್ ಶೆಟ್ಟಿ ಗೆಳೆಯರು. ಹಾಗಾಗಿ ಚಿತ್ರದ ಒಂದು ಪಾತ್ರಕ್ಕೆ ರಕ್ಷಿತ್ ಶೆಟ್ಟಿ ಅವರನ್ನು ಕಾರ್ತಿಕ್ ಸುಬ್ಬರಾಜು ಸಂಪರ್ಕಿಸಿದ್ದರು. ಆದರೆ, ರಕ್ಷಿತ್ ಶೆಟ್ಟಿ ಆ ಅವಕಾಶವನ್ನು ನಿರಾಕರಿಸಿದ್ದರು. ಅದಕ್ಕೆ ಕಾರಣವೇನು ಗೊತ್ತಾ? ಆ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಅವರು “ಅವನೇ ಶ್ರೀಮನ್ನಾರಾಯಣ‘ ಚಿತ್ರದ ಚಿತ್ರೀಕರಣದಲ್ಲಿ ಬಿಝಿಯಾಗಿದ್ದರು. ಆ ಸಿನಿಮಾಗೆ ಹೆಚ್ಚು ಆದ್ಯತೆ ಕೊಟ್ಟಿದ್ದರಿಂದ ರಕ್ಷಿತ್ ಶೆಟ್ಟಿ “ಪೆಟ್ಟಾ‘ ಚಿತ್ರದಲ್ಲಿ ರಜನಿಕಾಂತ್ ಅವರ ಜೊತೆ ನಟಿಸುವ ಅವಕಾಶ ಮಿಸ್‌ಮಾಡಿಕೊಂಡಿದ್ದರು.
ಆ ಬಳಿಕ ರಕ್ಷಿತ್‌ಗೆ ಬಂದ ಅವಕಾಶ, ವಿಜಯ್ ಸೇತುಪತಿ ಅವರಿಗೆ ಹೋಯಿತು. ಆ ಚಿತ್ರದಲ್ಲಿ ವಿಜಯ್ ಸೇತುಪತಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡರು. ಆ ಚಿತ್ರ ಯಶಸ್ವಿಯೂ ಆಯ್ತು. ಅದೇನೆ ಇರಲಿ, ರಜನಿಕಾಂತ್ ಅವರ
ಸಿನಿಮಾದಲ್ಲಿ ನಟಿಸುವ ಅವಕಾಶ ಬಂದರೆ, ಯಾರು ತಾನೆ ಬಿಡುತ್ತಾರೆ? ಆದರೆ, ರಕ್ಷಿತ್ ಮಾತ್ರ, ಆ ಚಿತ್ರ ಒಪ್ಪಿದ್ದರೆ, “ಅವನೇ ಶ್ರೀಮನ್ನಾರಾಯಣ‘ ಚಿತ್ರ ಲೇಟ್ ಆಗುತ್ತಿತ್ತು. ಅಭಿಮಾನಿ ಗಳಿಗೆ ಹೆಚ್ಚು ಕಾಯಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಅವರು, ಆ ಅವಕಾಶ ಬಿಟ್ಟಿದ್ದಾರೆ. ಮುಂದೊಂದು ದಿನ ಒಳ್ಳೆಯ ಅವಕಾಶ ಸಿಗಬಹುದು ಎಂಬ ಆಶಯದಲ್ಲಿದ್ದಾರೆ ರಕ್ಷಿತ್ ಶೆಟ್ಟಿ. ಸ್ವತಃ ರಕ್ಷಿತ್ ಶೆಟ್ಟಿ ತಮಗೆ ಅವಕಾಶ ಬಂದಿದ್ದನ್ನು ಒಪ್ಪಿಕೊಳ್ಳುತ್ತಾರೆ. “ಪೆಟ್ಟಾ ಸಿನಿಮಾದಿಂದ ನನಗೆ ಅವಕಾಶ ಬಂದಿದ್ದು ನಿಜ. ಆದರೆ, ನಾನು ಚಿತ್ರೀಕರಣದಲ್ಲಿದ್ದ ಕಾರಣ ಮಾಡಲಾಗಲಿಲ್ಲ‘ ಎನ್ನುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.