‘ವೀಲ್ ಚೇರ್’ ನಲ್ಲಿ ರಾಮ್ ಚೇತನ್; ಚೊಚ್ಚಲ ಚಿತ್ರದ ಬಗ್ಗೆ ರೋಮಿಯೋ ನಿರೀಕ್ಷೆಯ ಮಾತು…
Team Udayavani, May 16, 2022, 10:34 AM IST
ಸಾಮಾನ್ಯವಾಗಿ ಹೀರೋ ಆಗಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಯಾಗಲು ಬಯಸುವ ಬಹುತೇಕ ಯುವನಟರು ಸಾಕಷ್ಟು ಅಳೆದು-ತೂಗಿ ತಮ್ಮ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ತಮ್ಮ ಮೊದಲ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್, ಮಸ್ತ್ ಡ್ಯಾನ್ಸ್, ಖಡಕ್ ಡೈಲಾಗ್ಸ್ ಇರಲೇಬೇಕೆಂಬ ನಿರೀಕ್ಷೆ ಬಹುತೇಕರಲ್ಲಿರುತ್ತದೆ. ಆದರೆ ಇಲ್ಲೊಬ್ಬ ಯುವ ನಾಯಕ ನಟ ತನ್ನ ಚೊಚ್ಚಲ ಸಿನಿಮಾದಲ್ಲೇ ಅಂಗವಿಕಲನ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಎಂಟ್ರಿಯಾಗುತ್ತಿದ್ದಾರೆ. ಅವರೇ ರಾಮ್ ಚೇತನ್.
ಹೌದು, ಇದೇ ಮೇ. 27ರಂದು ಬಿಡುಗಡೆಯಾಗುತ್ತಿರುವ “ವೀಲ್‌ಚೇರ್ ರೋವಿಯೋ’ ಸಿನಿಮಾದ ಮೂಲಕ ರಾಮ್ ಚೇತನ್ ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ರಾಮ್ ಚೇತನ್ ಅವರದ್ದು ಅಂಗವಿಕಲ ಹುಡುಗನ ಪಾತ್ರವಂತೆ. ಅಷ್ಟಕ್ಕೂ ತಮ್ಮ ಮೊದಲ ಸಿನಿಮಾದಲ್ಲೇ ಇಂಥದ್ದೊಂದು ಪಾತ್ರ ಮಾಡಲು ಕಾರಣ ಸಿನಿಮಾ ಕಥೆ ಎನ್ನುತ್ತಾರೆ ರಾಮ್ ಚೇತನ್.
“ಸಿನಿಮಾ ಮಾಡಬೇಕೆಂದು ಸುಮಾರು 70ಕ್ಕೂ ಹೆಚ್ಚು ಕಥೆಗಳನ್ನು ಕೇಳಿದ್ದರೂ, ಯಾವ ಕಥೆಗಳೂ ನಮಗೆ ಇಷ್ಟವಾಗಿರಲಿಲ್ಲ. ಆ ನಂತರ ನಿರ್ದೇಶಕ ನಟರಾಜ್ ಹೇಳಿದ “ವೀಲ್‌ಚೇರ್ ರೋವಿಯೋ’ ಕಥೆ ನನಗೆ ಮತ್ತು ನಿರ್ಮಾಪಕರಿಗೆ ತುಂಬ ಇಷ್ಟವಾಯ್ತು. ಕೊನೆಗೆ ಅದನ್ನೇ ಸಿನಿಮಾ ಮಾಡಲು ಮುಂದಾದೆವು. ಇದೊಂದು ಕಂಪ್ಲೀಟ್ ಎಮೋಶನ್ ಸಬ್ಜೆಕ್ಟ್. ಇದರಲ್ಲಿ ಲವ್, ಕಾಮಿಡಿ, ಸೆಂಟಿಮೆಂಟ್, ಸಾಂಗ್ಸ್ ಹೀಗೆ ಎಲ್ಲ ಥರದ ಎಂಟರ್‌ಟೈನ್ಮೆಂಟ್ ಎಲಿಮೆಂಟ್ಸ್ ಇದೆ. ಕೈ-ಕಾಲು ಇಲ್ಲದ ಅಂಗವಿಕಲ ಹುಡುಗ ಮತ್ತು ಅಂಧ ಹುಡುಗಿಯ ಪಾತ್ರದ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಇಲ್ಲಿ ಕಥೆಯೇ ಹೈಲೈಟ್. ಪ್ರತಿ ಪಾತ್ರಕ್ಕೂ ಅದರದ್ದೇ ಆದ ಮಹತ್ವವಿದೆ. ಪ್ರತಿಯೊಬ್ಬರಿಗೂ ಇಷ್ಟವಾಗುವಂತ, ಕನೆಕ್ಟ್ ಆಗುವಂಥ ಸಬೆjಕ್ಟ್ ಸಿನಿಮಾದಲ್ಲಿರುವುದರಿಂದ, ಮೊದಲ ಸಿನಿಮಾದಲ್ಲೇ ಇಂಥದ್ದೊಂದು ಪಾತ್ರ ಮಾಡಲು ಒಪ್ಪಿಕೊಂಡೆ’ ಎನ್ನುತ್ತಾರೆ ರಾಮ್ ಚೇತನ್.
ಇನ್ನು “ವೀಲ್‌ಚೇರ್ ರೋವಿಯೋ’ ಸಿನಿಮಾದ ಪಾತ್ರಕ್ಕಾಗಿ ಸುಮಾರು 80 ಕೆ.ಜಿ ತೂಕವಿದ್ದ ರಾಮ್ ಚೇತನ್ ತಮ್ಮ ತೂಕವನ್ನು 20 ಕೆ.ಜಿ ಯಷ್ಟು ಇಳಿಸಿಕೊಳ್ಳಬೇಕಾಗಿತ್ತಂತೆ. “ಅಂಗವಿಕಲನ ಪಾತ್ರವಾಗಿದ್ದರಿಂದ ಇಡೀ ಸಿನಿಮಾದಲ್ಲಿ ನಾನು ವೀಲ್ ಚೇರ್‌ನಲ್ಲಿ ಕುಳಿತುಕೊಂಡಿರಬೇಕಿತ್ತು. ಹಾಗಾಗಿ ಪಾತ್ರಕ್ಕಾಗಿ ಎರಡೇ ತಿಂಗಳಿನಲ್ಲಿ ತೂಕವನ್ನು ಇಳಿಸಿಕೊಂಡಿರುವುದರ ಜೊತೆಗೆ, ವೀಲ್‌ಚೇರ್‌ನಲ್ಲಿ ಕುಳಿತುಕೊಳ್ಳುವುದು, ಅಂಗವಿಕಲರ ಮ್ಯಾನರಿಸಂ ಎಲ್ಲವನ್ನೂ ಕಲಿತುಕೊಳ್ಳಬೇಕಾಯ್ತು. ನನ್ನ ಒಂದಷ್ಟು ಅಂಗವಿಕಲ ಸ್ನೇಹಿತರು ಈ ವಿಷಯದಲ್ಲಿ ನನಗೆ ಸಹಾಯ ಮಾಡಿದರು’ ಎಂದು ತೆರೆಹಿಂದಿನ ತಾಲೀಮನ್ನು ವಿವರಿಸುತ್ತಾರೆ.
ಇದನ್ನೂ ಓದಿ:ದೇಸಿ ಮಕ್ಕಳ ಮೊಬೈಲ್ ಪ್ರೌಢಿಮೆ; ವಿಶ್ವದಲ್ಲಿ ಭಾರತವೇ ಮೊದಲೆಂದ ಮ್ಯಾಕೆಫೀ ವರದಿ
ಇನ್ನು ಈಗಾಗಲೇ ಬಿಡುಗಡೆಯಾಗಿರುವ “ವೀಲ್ ಚೇರ್ ರೋಮಿಯೋ’ ಚಿತ್ರದ ಪೋಸ್ಟರ್, ಟೀಸರ್, ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೆಲ ತಿಂಗಳ ಹಿಂದಷ್ಟೇ “ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ’ದಲ್ಲೂ ಪ್ರದರ್ಶನಕೊಂಡು ಪ್ರೇಕ್ಷಕರ, ವಿಮರ್ಶಕರ ಮೆಚ್ಚುಗೆ ಪಡೆದುಕೊಂಡಿದೆ. ಒಟ್ಟಾರೆ “ವೀಲ್‌ಚೇರ್ ರೋಮಿಯೋ’ಗೆ ಎಲ್ಲ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಸಿನಿಮಾ ಥಿಯೇಟರ್ ನಲ್ಲೂ ಜನಮನ ಗೆಲ್ಲಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ನಾಯಕ ನಟ ರಾಮ್ ಚೇತನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.