ತೆಲುಗು “ಶ್ರೀಮನ್ನಾರಾಯಣ’ನಿಗೆ ರಾಮ ಜೋಗಯ್ಯ ಸಾಥ್
ಖ್ಯಾತ ಗೀತಸಾಹಿತಿಯ ಹಾಡು
Team Udayavani, Sep 28, 2019, 4:02 AM IST
ರಕ್ಷಿತ್ ಶೆಟ್ಟಿ ಅಭಿನಯದ “ಅವನೇ ಶ್ರೀಮನ್ನಾರಾಯಣ’ ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗುತ್ತಿದೆ ಎಂಬ ವಿಷಯ ಎಲ್ಲರಿಗೂ ಗೊತ್ತೇ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ “ಅವನೇ ಶ್ರೀಮನ್ನಾರಾಯಣ ‘ ಚಿತ್ರ ಬಿಡುಗಡೆಯಾಗಲಿದೆ. ಈಗ ಈ ಚಿತ್ರದ ಹೊಸ ಸುದ್ದಿಯೆಂದರೆ ಚಿತ್ರದ ತೆಲುಗಿನ ಅವತರಣಿಕೆಗೆ ರಾಮ ಜೋಗಯ್ಯ ಶಾಸ್ತ್ರಿ ಅವರು ಹಾಡುಗಳನ್ನು ಬರೆಯುತ್ತಿದ್ದಾರೆ. ಹೌದು, ತೆಲುಗು ಚಿತ್ರರಂಗದಲ್ಲಿ ರಾಮ ಜೋಗಯ್ಯ ಶಾಸ್ತ್ರಿ ಅವರು ಯಶಸ್ವಿ ಗೀತರಚನೆಕಾರರಾಗಿದ್ದಾರೆ.
ಅಲ್ಲಿನ ಸೂಪರ್ ಸ್ಟಾರ್ ಚಿತ್ರಗಳಿಗೆ ಇವರ ಹಾಡುಗಳು ಇರಲೇಬೇಕು. ಸೂಪರ್ ಹಿಟ್ ಸಾಂಗ್ಸ್ ಬರೆದಿರುವ ರಾಮ ಜೋಗಯ್ಯ ಶಾಸ್ತ್ರಿ ಈಗಾಗಲೇ ಕನ್ನಡದ “ಕೆಜಿಎಫ್’ ಹಾಗು “ಪೈಲ್ವಾನ್’ ಚಿತ್ರಗಳಿಗೆ ತೆಲುಗಿನಲ್ಲಿ ಗೀತೆಗಳನ್ನು ಬರೆದಿದ್ದಾರೆ. ಈಗ “ಅವನೇ ಶ್ರೀಮನ್ನಾರಾಯಣ’ ಸಿನಿಮಾಗೂ ಗೀತೆ ಬರೆಯುತ್ತಿದ್ದಾರೆ. ಹೀಗಂತ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ತೆಲುಗಿನಲ್ಲಿ ಈಗಾಗಲೇ ಬಂದ “ಕೆಜಿಎಫ್’ ಹಾಗು “ಪೈಲ್ವಾನ್’ ಚಿತ್ರದ ಹಾಡುಗಳು ಜನಮೆಚ್ಚುಗೆ ಪಡೆದಿವೆ.
ಈಗ “ಅವನೇ ಶ್ರೀಮನ್ನಾರಾಯಣ’ ಚಿತ್ರದ ಕಥೆ ಕೇಳಿದ್ದಲ್ಲದೆ, ಚಿತ್ರದ ಮೇಕಿಂಗ್ ನೋಡಿ ತಂಬಾನೇ ಖುಷಿಯಿಂದ ಎಲ್ಲಾ ಹಾಡು ಬರೆದುಕೊಡಲು ಮುಂದಾಗಿದ್ದಾರಂತೆ. ಅಂದಹಾಗೆ, ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಹಾಗೂ ಚರಣ್‌ರಾಜ್ ಅವರು ಸಂಗೀತ ನೀಡುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದು, ಸಚಿನ್ ರವಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರಿಗೆ ಸಾನ್ವಿ ಶ್ರೀವಾಸ್ತವ್, ಅಚ್ಯುತ ಕುಮಾರ್ , ಪ್ರಮೋದ್ ಶೆಟ್ಟಿ, ಬಾಲಾಜಿ ಮೋಹನ್ ಸೇರಿದಂತೆ ಹಲವು ನಟರು ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Suri Loves Sandhya: ಟೀಸರ್‌ನಲ್ಲಿ ಸೂರಿ ಲವ್ ಸ್ಟೋರಿ
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.