ರಾಮಾ ರಾಮಾ ರೇ ಸತ್ಯಪ್ರಕಾಶ್ ಮತ್ತೆ ಬಂದ್ರು
Team Udayavani, Nov 19, 2017, 5:46 PM IST
“ರಾಮಾ ರಾಮಾ ರೇ’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಡಿ.ಸತ್ಯ ಪ್ರಕಾಶ್ ಹೊಸ ಸಿನಿಮಾಕ್ಕಾಗಿ ಕಥೆಯಲ್ಲಿ ನಿರತರಾಗಿದ್ದರು. ಈಗ ಕಥೆ ಅಂತಿಮವಾಗಿದ್ದು, ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಹೌದು, ಸತ್ಯಪ್ರಕಾಶ್ ನಿರ್ದೇಶನದ ಹೊಸ ಚಿತ್ರವನ್ನು ಉಮಾಪತಿಯವರು ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಹೆಬ್ಬುಲಿ’ ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿದ್ದ ಉಮಾಪತಿಯವರು ಈಗ ಹೊಸ ತಂಡದೊಂದಿಗೆ ಹೊಸ ಬಗೆಯ ಚಿತ್ರ ಮಾಡಲು ಮುಂದಾಗಿದ್ದಾರೆ.
ಉಮಾಪತಿ ಹಾಗೂ ಸತ್ಯಪ್ರಕಾಶ್ ಜೊತೆಯಾಗಿ ಸಿನಿಮಾ ಮಾಡುತ್ತಾರೆಂಬ ಸುದ್ದಿ ತುಂಬಾ ದಿನಗಳಿಂದ ಓಡಾಡುತ್ತಿತ್ತು. ಆದರೆ, ಈಗ ಅಂತಿಮವಾಗಿದೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಅಂದಹಾಗೆ, ಇದು ಕಮರ್ಷಿಯಲ್ ಸಿನಿಮಾವಲ್ಲ. ಹೊಸ ಬಗೆಯ ಕಥೆಯೊಂದಿಗೆ ಈ ಬಾರಿಯೂ ಸತ್ಯಪ್ರಕಾಶ್ ಸಿನಿಮಾ ಮಾಡುತ್ತಿದ್ದಾರೆ. ಇಲ್ಲಿ ನಾಯಕ-ನಾಯಕಿ, ವಿಲನ್ ಯಾರೂ ಇರೋದಿಲ್ಲ. ಚಿತ್ರತಂಡ ಹೇಳುವಂತೆ ಕಥೆಯೇ ಈ ಚಿತ್ರದ ನಾಯಕ.
ಚಿತ್ರದ ಮುಖ್ಯಪಾತ್ರಧಾರಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಚಿತ್ರದ ಮುಖ್ಯಪಾತ್ರಧಾರಿ 8 ರಿಂದ 10 ವರ್ಷದ ಹುಡುಗನಾಗಿರಬೇಕಾಗಿದ್ದು, ಚಿತ್ರತಂಡ ಆಡಿಷನ್ ಮೂಲಕ ಕಲಾವಿದರನ್ನು ಆಯ್ಕೆ ಮಾಡಲು ಮುಂದಾಗಿದೆ. ಕರ್ನಾಟಕದ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಆ ಮೂಲಕ ಚಿತ್ರದ ಮುಖ್ಯಪಾತ್ರಧಾರಿಯನ್ನು ಆಯ್ಕೆ ಮಾಡುವ ಆಲೋಚನೆ ಕೂಡಾ ಚಿತ್ರತಂಡಕ್ಕಿದೆ.
ಸ್ಪಷ್ಟವಾಗಿ ಕನ್ನಡ ಮಾತನಾಡುವ ಹಾಗೂ ನಿರ್ದೇಶಕರ ಕಲ್ಪನೆಯನ್ನು ಅರ್ಥಮಾಡಿಕೊಂಡು ನಟಿಸುವ ಸಾಮರ್ಥ್ಯವಿರುವ ಹುಡುಗರು ಯಾವುದೇ ಶಾಲೆಯಲ್ಲಿದ್ದರೂ ಆ ಶಾಲೆಯವರು ಚಿತ್ರತಂಡವನ್ನು ಸಂಪರ್ಕ ಮಾಡಬಹುದಂತೆ. ಇನ್ನು, ಚಿತ್ರಕ್ಕೆ ಟೈಟಲ್ ಅಂತಿಮವಾಗಿಲ್ಲ. ಉಳಿದಂತೆ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ, ಲವಿತ್ ಛಾಯಾಗ್ರಹಣ, ವರದರಾಜ ಕಾಮತ್ ಕಲಾನಿರ್ದೇಶನ, ಕೆಂಪರಾಜು ಸಂಕಲನ ಚಿತ್ರಕ್ಕಿದೆ. ಚಿತ್ರೀಕರಣ ಮಲೆನಾಡಿನ ವಿವಿಧ ಕಡೆಗಳಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.