ರಾಮ್‌ಕುಮಾರ್ ಪುತ್ರ ಈಗ ದಾರಿ ತಪ್ಪಿದ ಮಗ
Team Udayavani, Oct 19, 2018, 12:05 PM IST
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾಗಳ ಪೈಕಿ ಡಾ. ರಾಜಕುಮಾರ್ ಅಭಿನಯದ “ದಾರಿ ತಪ್ಪಿದ ಮಗ’ ಚಿತ್ರ ಕೂಡ ಒಂದು. ಈಗ ಇದೇ ಹೆಸರಿನ ಚಿತ್ರ ಮತ್ತೆ ಕನ್ನಡದಲ್ಲಿ ಬೆಳ್ಳಿ ತೆರೆಮೇಲೆ ಬರುತ್ತಿದೆ. ಕನ್ನಡದಲ್ಲಿ ಹಳೆಯ ಜನಪ್ರಿಯ ಸಿನಿಮಾಗಳ ಶೀರ್ಷಿಕೆಗಳನ್ನು ಮರುಬಳಕೆ ಮಾಡಿಕೊಳ್ಳುವ ಟ್ರೆಂಡ್ ಸದ್ಯ ಜೋರಾಗಿದ್ದು, ಸಾಲಿಗೆ ಈಗ “ದಾರಿ ತಪ್ಪಿದ ಮಗ’ ಚಿತ್ರ ಕೂಡ ಸೇರ್ಪಡೆಯಾಗುತ್ತಿದೆ.
ವರನಟ ಡಾ. ರಾಜಕುಮಾರ್ ಮೊಮ್ಮಗ, ನಟ ರಾಮ್ ಕುಮಾರ್ ಮತ್ತು ಪೂರ್ಣೀಮ ಅವರ ಪುತ್ರ ಧೀರೇನ್ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರಕ್ಕೆ “ದಾರಿ ತಪ್ಪಿದ ಮಗ’ ಎಂಬ ಶೀರ್ಷಿಕೆ ಇಡಲಾಗಿದ್ದು, ಶೀಘ್ರದಲ್ಲಿಯೇ ಚಿತ್ರ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಲಿದೆ. ಈಗಾಗಲೇ “ದಾರಿ ತಪ್ಪಿದ ಮಗ’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, “ವಿಕ್ಟರಿ-2′ ಖ್ಯಾತಿಯ ಅನಿಲ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ.
ಸದ್ಯ ಅನಿಲ್ ಕುಮಾರ್, ಯಶ್ ಅಭಿನಯದ “ಮೈ ನೇಮ್ ಈಸ್ ಕಿರಾತಕ’ ಚಿತ್ರದ ಚಿತ್ರೀಕರಣದಲ್ಲಿದ್ದು, ಆ ಚಿತ್ರ ಮುಗಿಯುತ್ತಿದ್ದಂತೆ, “ದಾರಿ ತಪ್ಪಿದ ಮಗ’ನಿಗೆ ಚಾಲನೆ ದೊರಲಿಯಲಿದೆ. ಅಂದಹಾಗೆ, 1975ರಲ್ಲಿ ತೆರೆಗೆ ಬಂದ “ದಾರಿ ತಪ್ಪಿದ ಮಗ’ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.
ಆದರೂ, ಈ ಚಿತ್ರದಲ್ಲಿ ನಟ ಧೀರೇನ್ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸದ್ಯಕ್ಕೆ ಈ ಚಿತ್ರದ ಬಗ್ಗೆ ಒಂದಷ್ಟು ಅಂತೆ-ಕಂತೆಗಳು ಗಾಂಧಿನಗರದಲ್ಲಿ ಜೋರಾಗಿ ಹರಿದಾಡುತ್ತಿದ್ದು, “ದಾರಿ ತಪ್ಪಿದ ಮಗ’ ಸೆಟ್ಟೇರಿದ ನಂತರವಷ್ಟೇ ಚಿತ್ರದ ಬಗ್ಗೆ ಹೆಚ್ಚಿನ ಮತ್ತು ಸ್ಪಷ್ಟ ಮಾಹಿತಿಗಳು ಲಭ್ಯವಾಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.