ಟ್ರೇಲರ್‌ನಲ್ಲಿ ರಾಣ ಎಂಟ್ರಿ
Team Udayavani, Oct 26, 2022, 1:26 PM IST
ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಾಯಕನಾಗಿ ನಟಿಸಿರುವ “ರಾಣ’ ಸಿನಿಮಾದ ಆ್ಯಕ್ಷನ್ ಟ್ರೇಲರ್ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಯಿತು.
ನಟ ಧ್ರುವ ಸರ್ಜಾ, ವಿಕ್ರಮ್ ರವಿಚಂದ್ರನ್, ನಿರ್ಮಾಪಕರಾದ ಕೆ. ಸಿ. ಎನ್ ಕುಮಾರ್, ಸೂರಪ್ಪ ಬಾಬು, ರಮೇಶ್ ರೆಡ್ಡಿ, ಚೇತನ್ ಗೌಡ, ಕಡ್ಡಿಪುಡಿ ಚಂದ್ರು, ರೈತ ಕೇಶವ್ ಮತ್ತು ನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು “ರಾಣ’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ನಟ ಧ್ರುವ ಸರ್ಜಾ, “ಶ್ರೇಯಸ್ ನನ್ನ ಆತ್ಮೀಯ ಗೆಳೆಯ. ಈ ಸಿನಿಮಾಕ್ಕಾಗಿ ಆತ ಪಟ್ಟಿರುವ ಪರಿಶ್ರಮ ಟ್ರೇಲರ್‌ನಲ್ಲಿ ಕಾಣುತ್ತಿದೆ. ಉತ್ತಮ ತಂತ್ರಜ್ಞರ ಹಾಗೂ ಕಲಾವಿದರ ಸಂಗಮದಲ್ಲಿ, ಸಿನಿಮಾ ಚೆನ್ನಾಗಿ ಬಂದಿದೆ. ನಾನು ಮೊದಲ ದಿನವೇ ಸಿನಿಮಾ ನೋಡುತ್ತೇನೆ’ ಎಂದರು.
ಸಿನಿಮಾದ ಬಗ್ಗೆ ಮಾತನಾಡಿದ ನಟ ಶ್ರೇಯಸ್, “ಸಿನಿಮಾ ನನ್ನ ಉಸಿರು. ಮೂರುವರೆ ವರ್ಷಗಳ (ಪಡ್ಡೆ ಹುಲಿ) ನಂತರ ನನ್ನ ಅಭಿನಯದ “ರಾಣ’ ಸಿನಿಮಾ ಇದೇ ನವೆಂಬರ್ 11 ರಂದು ಬಿಡುಗಡೆಯಾಗುತ್ತಿದೆ. ಸಿನಿಮಾದ ಬಿಡುಗಡೆಯ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ. ಒಂದೊಳ್ಳೆ ಸಿನಿಮಾ ಮಾಡಿದ್ದು, ಖಂಡಿತವಾಗಿಯೂ “ರಾಣ’ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. “ಸಿನಿಮಾ ಚೆನ್ನಾಗಿ ಬಂದಿದೆ ಎಂದು “ರಾಣ’ದ ಬಗ್ಗೆ ಎಲ್ಲರೂ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ. ಸಿನಿಮಾ ಚೆನ್ನಾಗಿ ಬಂದಿದೆ ಎಂದರೆ ಆ ಕೀರ್ತಿ ಇಡೀ ಚಿತ್ರತಂಡಕ್ಕೆ ಸೇರಬೇಕು’ ಎನ್ನುವುದು ನಿರ್ದೇಶಕ ನಂದಕಿಶೋರ್ ಮಾತು. “ಏಕ್ ಲವ್ ಯಾ’ ಸಿನಿಮಾದ ನಂತರ ರೀಷ್ಮಾ ನಾಣಯ್ಯ “ರಾಣ’ ಸಿನಿಮಾದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದರು.
ನಟಿಯರಾದ ರಜನಿ ಭಾರದ್ವಾಜ್, ರಘು, ಮೋಹನ್ ಧನರಾಜ್ ಮುಂತಾದವರು “ರಾಣ’ ಸಿನಿಮಾದ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.
ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ಛಾಯಾಗ್ರಹಕ ಶೇಖರ್ ಚಂದ್ರ, ನಿರ್ಮಾಪಕ ಕೆ. ಮಂಜು, ಪುರುಷೋತ್ತಮ ಗುಜ್ಜಲ್ ಸೇರಿದಂತೆ ಚಿತ್ರತಂಡದ ಸದಸ್ಯರು “ರಾಣ’ನ ವಿಶೇಷತೆಗಳ ಬಗ್ಗೆ ಮಾತನಾಡಿದರು.
ಸದ್ಯ ಬಿಡುಗಡೆಯಾಗಿರುವ “ರಾಣ’ ಸಿನಿಮಾದ ಟ್ರೇಲರ್‌ಗೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಎರಡೇ ದಿನಗಳಲ್ಲಿ “ರಾಣ’ ಟ್ರೇಲರ್ 3 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.