ಅಂದು ಖ್ಯಾತ ಖಳನಟರಾಗಿ ಅಬ್ಬರ: ಇಂದು ಅವಕಾಶಗಳ ಬರ; ಈಗ ಎಲ್ಲಿದ್ದಾರೆ ʼರಥಸಪ್ತಮಿʼ ಅರವಿಂದ್
Team Udayavani, Mar 5, 2024, 5:21 PM IST
ಬೆಂಗಳೂರು: ಸಿನಿಮಾರಂಗ ಅಂದರೆ ಹಾಗೆಯೇ ಅದೊಂದು ಮಾಯಾಲೋಕ. ಇಂದು ನಾಯಕ – ಖಳ ನಾಯಕನಾಗಿ ಮಿಂಚಿದವರು ನಾಳೆಯ ದಿನ ಎಲ್ಲೂ ಕಾಣದೆ ಇದ್ದಕ್ಕಿದ್ದಂತೆ ನಟನೆಯಿಂದ ದೂರವಾಗಿ ಬಿಡುತ್ತಾರೆ. ಒಂದು ಕಾಲದಲ್ಲಿ ತನ್ನ ನಟನೆಯಿಂದಲೇ ಖ್ಯಾತಿ ಗಳಿಸಿದ್ದ ಖ್ಯಾತ ಕಲಾವಿದರು ಬಹಳ ಅಪರೂಪಕ್ಕೆ ಇದೀಗ ಕಾಣಿಸಿಕೊಂಡಿದ್ದಾರೆ.
ಚಂದನವನದಲ್ಲಿ ಖಳನಟನ ಪಾತ್ರದಲ್ಲೇ ಹೆಚ್ಚು ಕಾಣಿಸಿಕೊಂಡು, ಬೇಡಿಕೆಯ ನಟನಾಗಿ ಬೆಳದವರು ʼರಥಸಪ್ತಮಿʼ ಖ್ಯಾತಿಯ ಅರವಿಂದ್. 90 ಹಾಗೂ 2000 ಇಸವಿಯ ಸಿನಿ ಮಂದಿಗೆ ಅರವಿಂದ್ ಅವರ ಪರಿಚಯ ಇರುತ್ತದೆ. ಬಣ್ಣದ ಲೋಕದಲ್ಲಿ ಅರವಿಂದ್ ನಾನಾ ಪಾತ್ರಗಳಿಗೆ ಬಣ್ಣ ಹಚ್ಚಿದ್ದು, ಖಳನಟನ ಪಾತ್ರ ಅವರ ವೃತ್ತಿ ಬದುಕಿನ ಯಶಸ್ಸಿನ ಮೆಟ್ಟಲಾಯಿತು ಎಂದರೆ ತಪ್ಪಾಗದು.
ನಟನೆಗೆ ಬರುವ ಮುನ್ನ ಅರವಿಂದ್ ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೋರ್ಸ್ ಮುಗಿಸಿ, ಆ ಬಳಿಕ ಮೊದಲ ಬಾರಿಗೆ ಚಂದನವನಕ್ಕೆ ಕಾಲಿಟ್ಟರು. ʼಗೀತಾʼ ಎನ್ನುವ ಸಿನಿಮಾದಲ್ಲಿ ಪಾತ್ರವೊಂದನ್ನು ಮಾಡಿದರು.
ಅವರನ್ನು ಸಿನಿಮಾಗೆ ಪರಿಚಯಿಸಿದವರು ಛಾಯಾಗ್ರಾಹಕ ಬಿ.ಸಿ.ಗೌರಿಶಂಕರ್. ‘ಗೋಪಾಲ ಕೃಷ್ಣ’ಎನ್ನುವುದು ಅರವಿಂದ್ ಅವರ ಜನ್ಮನಾಮವಾಗಿತ್ತು. ಇದನ್ನು ನಿರ್ದೇಶಕರ ಭಗವಾನ್ ಅವರು ʼಅರವಿಂದ್ʼ ಎಂದು ಬದಲಾಯಿಸಿದರು.
1986 ರಲ್ಲಿ ಬಂದ ಶಿವರಾಜ್ ಕುಮಾರ್ ಅವರ ʼರಥಸಪ್ತಮಿʼ ಸಿನಿಮಾದಲ್ಲಿನ ಅವರ ಅಭಿನಯದಿಂದ ಅವರು ʼರಥಸಪ್ತಮಿʼ ಅರವಿಂದ್ ಎಂದೇ ಖ್ಯಾತರಾದರು.
ಈ ಸಿನಿಮಾದ ಬಳಿಕ ಅರವಿಂದ್ ಅವರಿಗೆ ಅದೃಷ್ಟ ಹುಡುಕಿಕೊಂಡು ಬಂತು. ಸಾಲು ಸಾಲು ಸಿನಿಮಾದಲ್ಲಿ ಅವರು ಕಾಣಿಸಿಕೊಂಡರು. ಇದರಲ್ಲಿ ಬಹುತೇಕ ಖಳನಟನ ಪಾತ್ರವಾಗಿತ್ತು. ಅವರು ಖಳನಟನಾಗಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದರು.
ಸುಮಾರು 250ಕ್ಕೂ ಚಿತ್ರಗಳಲ್ಲಿ ಅಭಿನಯಿಸಿ, 4 ದಶಕಕ್ಕೂ ಹೆಚ್ಚಿನ ಕಾಲ ಚಂದನವನದಲ್ಲಿ ಬಹುತೇಕ ಸ್ಟಾರ್ ನಟರ ಸಿನಿಮಾದಲ್ಲಿ ಕಾಣಿಸಿಕೊಂಡು ಅರವಿಂದ್, ಇದ್ದಕ್ಕಿದ್ದಂತೆ ಸಿನಿಮಾರಂಗದಂತೆ ಮಾಯಾವಾದರು. ಹೊಸ ಕಾಲದ ಸಿನಿಮಾದಲ್ಲಿ ಅವರು ಕಾಣಿಸಿಕೊಂಡದ್ದು ತೀರಾ ಕಡಿಮೆ.
ಅರವಿಂದ್ ಎನ್ನುವ ಖಳನಾಯಕ ಜನಪ್ರಿಯತೆ ಇಂದಿನ ಕಾಲ ಮರೆತೇ ಹೋಗಿರಬಹುದು ಎನ್ನುವಷ್ಟರ ಮಟ್ಟಿಗೆ ಚಿತ್ರರಂಗದಿಂದ ಅರವಿಂದ್ ದೂರವಾದರು.
ಇದೀಗ ಬಹು ಸಮಯದ ಬಳಿಕ ಅರವಿಂದ್ ಪ್ರತ್ಯಕ್ಷರಾಗಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅರವಿಂದ್, ನಟನೆಯಲ್ಲಿ ಅವಕಾಶಗಳೇ ಇಲ್ಲ ಎನ್ನುವುದರ ಬಗ್ಗೆ ನೋವನ್ನು ಹಂಚಿಕೊಂಡಿದ್ದಾರೆ.
ಅರವಿಂದ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಯಾಕೆ ಎಂದು ಮಹಿಳೆಯೊಬ್ಬರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಅರವಿಂದ್ ನಗುಮುಖದಿಂದಲೇ ಉತ್ತರಿಸಿದ್ದಾರೆ. “ಎಲ್ಲಾ ಹೊಸಬರ ಹಾವಳಿ, ಅದರಿಂದ ನಮ್ಗೆ ಸ್ವಲ್ಪ ರೆಸ್ಟ್. ಮತ್ತೆ ತಿರುಗಿ ಶುರು ಆಗುತ್ತೆ. ಇಷ್ಟು ದಿನ ಆಜ್ಞಾತವಾಸ, ಮತ್ತೆ ತಿರುಗಿ ಶುರು” ಎಂದಿದ್ದಾರೆ.
ಏನು ಕ್ಯಾರೆಕ್ಟರ್ ಮಾಡೋಕೆ ಇಷ್ಟಪಡ್ತೀರಾ ಎಂದು ಕೇಳಿದಾಗ “ಇಂಥ ಕ್ಯಾರೆಕ್ಟರ್ ಅಂಥೇನಿಲ್ಲ. ನಾನೊಬ್ಬ ಆರ್ಟಿಸ್ಟ್, ಎನಿ ಕ್ಯಾರೆಕ್ಟರ್, ಯಾವ್ ಕ್ಯಾರೆಕ್ಟರ್ ಇದ್ರು ಮಾಡುತ್ತೇನೆ” ಎಂದಿದ್ದಾರೆ.
2022 ರಲ್ಲಿ ಅರವಿಂದ್ ಅವರು, ʼʼನೆನಪಾಗುತ್ತಿಲ್ಲ” ಕಾಣಿಸಿಕೊಂಡಿದ್ದರು. ಆದಾದ ಬಳಿಕ ಅವರು, ಹೊಸಬರ ʼಅನಾವರಣʼ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದಾದ ನಂತರ ಅವರು ಸಿನಿಮಾರಂಗದಿಂದ ಮಾಯಾವಾಗಿದ್ದರು.
ಎಲ್ಲೋದ್ರು ಇವ್ರೆಲ್ಲ!#KFI pic.twitter.com/gveW6osjb3
— ಅಪ್ಪು ಡೈನಾಸ್ಟಿ (@appudynasty1) March 5, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.