ಹೊಸ ಅವತಾರದಲ್ಲಿ ರಥಾವರ
Team Udayavani, Jul 26, 2017, 10:58 AM IST
“ಆ ಸಿನಿಮಾದಲ್ಲಾದ ನೋವನ್ನು ನೆನಪಿಸಿಕೊಂಡರೆ, ಇನ್ನು ಮುಂದೆ ಸಿನಿಮಾ ಮಾಡೋದು ಬೇಡ ಅಂತ ನಿರ್ಧರಿಸಿದ್ದೆ. ಈ ಚಿತ್ರದ ನಿರ್ದೇಶಕರ ಸಿನಿಮಾ ಪ್ರೀತಿ ನೋಡಿ ಚಿತ್ರ ಮಾಡುವುದಕ್ಕೆ ಮುಂದಾದೆ. “ರಥಾವರ’ ಚಿತ್ರದ ಸಂದರ್ಭದಲ್ಲಿ ಏನು ನೋವಾಯ್ತು ಅಂತ ಸದ್ಯಕ್ಕೆ ಬೇಡ. ಆ ಚಿತ್ರವನ್ನು ಮರುಬಿಡುಗಡೆ ಮಾಡುವುದಕ್ಕೆ ಯೋಚಿಸುತ್ತಿದ್ದೀನಿ …’ ಅಂತ ಕೆಲವು ದಿನಗಳ ಹಿಂದ ಹೇಳಿಕೊಂಡಿದ್ದರು, “ರಥಾವರ’ ಚಿತ್ರದ ನಿರ್ಮಾಪಕರಾದ ಧರ್ಮಶ್ರೀ ಮಂಜುನಾಥ್.
ಅದರಂತೆ ಅವರೀಗ ಆ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಸಿದ್ದು, ಆಗಸ್ಟ್ ತಿಂಗಳಲ್ಲಿ “ರಥಾವರ’ ಚಿತ್ರದ ಹೊಸ ಅವತಾರ ಬಿಡುಗಡೆಯಾಗುತ್ತಿದೆ. “ರಥಾವರ’ದ ಹೊಸ ಅವತಾರದಲ್ಲಿ ದ್ವಿತೀಯಾರ್ಧ ಪೂರ್ತಿ ಬದಲಾಗಲಿದೆಯಂತೆ. “ಚಿತ್ರದ ಸೆಕೆಂಡ್ ಹಾಫ್ ಜನರಿಗೆ ಇಷ್ಟವಾಗಲಿಲ್ಲ. ಜನರಿಗೆ ಯಾಕೆ, ನಮಗೇ ಇಷ್ಟವಾಗಲಿಲ್ಲ. ಹಾಗಾಗಿ ಅದನ್ನು ಬದಲಾಯಿಸಿ, ಬೇರೆ ಬಿಡುಗಡೆ ಮಾಡೋಣ ಅಂತ ಬಿಡುಗಡೆ ಮಾಡುತ್ತಿದ್ದೇವೆ.
ಆಗಲೇ ಇನ್ನೊಂದು ವರ್ಷನ್ ಚಿತ್ರೀಕರಣ ಸಹ ಮಾಡಿಟ್ಟುಕೊಂಡಿದ್ದೆವು. ಅದನ್ನೇ ಈಗ ಬಿಡುಗಡೆ ಮಾಡುತ್ತಿದ್ದೇವೆ. ಈ ಹೊಸ ವರ್ಷನ್‌ನಲ್ಲಿ ಕ್ಲೈಮ್ಯಾಕ್ಸ್ ಬದಲಾಗಲಿದೆ. ಒಂದು ಹೊಸ ಹಾಡು ಸಹ ಸೇರಿಕೊಳ್ಳಲಿದೆ ಎಲ್ಲಕ್ಕಿಂತ ಹೆಚ್ಚಾಗಿ, ಆ ಚಿತ್ರದಲ್ಲಿ ಸಾಕಷ್ಟು ಗೊಂದಲಗಳಿದ್ದವು. ಈಗ ಅದಕ್ಕೆಲ್ಲಾ ಕ್ಲಾರಿಟಿ ಕೊಡಲಾಗಿದೆ. ಸರಿಯಾಗಿ ಹೇಳಬೇಕೆಂದರೆ, ಮೊದಲು ಚಿತ್ರ ಎಷ್ಟಿತ್ತೋ, ಈಗ ಅದಕ್ಕೆ 10 ನಿಮಿಷ ಹೆಚ್ಚಾಗಿ ಸೇರಿಕೊಂಡಿದೆ.
ಈಗಾಗಲೇ ಚಿತ್ರ ತಯಾರಿದೆ. ಸದ್ಯದಲ್ಲೇ ಚಿತ್ರವನ್ನು ಇನ್ನೊಮ್ಮೆ ಸೆನ್ಸಾರ್ ಮಾಡಿಸಿ ಬಿಡುಗಡೆ ಮಾಡಬೇಕಿದೆ. ಚಿತ್ರ ಯಾವಾಗ ಬಿಡುಗಡೆ ಎಂದು ಆಗಸ್ಟ್ ನಾಲ್ಕರಂದು ಹೇಳಲಿದ್ದೇವೆ’ ಎನ್ನುತ್ತಾರೆ ಮಂಜುನಾಥ್. ಇನ್ನು “ರಥವಾರ’ ಚಿತ್ರವನ್ನು ತೆಲುಗಿನಲ್ಲಿ ಡಬ್ ಮಾಡಲಾಗಿದ್ದು, ಆ ಚಿತ್ರವನ್ನು ಆಗಸ್ಟ್ 18ರಂದು ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಡುಗಡೆ ಮಾಡಲಾಗುತ್ತದಂತೆ.
“ಈಗಾಗಲೇ ಚಿತ್ರ ಡಬ್ ಆಗಿ, ಬಿಡುಗಡೆಗೆ ತಯಾರಾಗಿದೆ. ಅಲ್ಲೂ ಸಹ ಹೊಸ ಅವತಾರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಈಗಾಗಲೇ ಹೆವಿ ಪ್ರಚಾರ ಆಗಿದೆ. ಮುರಳಿ ಅವರಿಗೆ ದೊಡ್ಡ ಲಾಂಚ್ ಆಗಲಿದೆ. ಚಿತ್ರ ಆಗಸ್ಟ್ 18ಕ್ಕೆ ಬಿಡುಗಡೆಯಾಗಲಿದೆ’ ಎನ್ನುತ್ತಾರೆ ಅವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.