ಕೆಜಿಎಫ್-2ನಲ್ಲಿ ರವೀನಾ ಟಂಡನ್ ನಟನೆ?
Team Udayavani, Feb 25, 2019, 5:38 AM IST
“ಕೆಜಿಎಫ್’ ಚಿತ್ರ ಹಿಟ್ಲಿಸ್ಟ್ ಸೇರುತ್ತಿದ್ದಂತೆ ಅಭಿಮಾನಿಗಳು “ಕೆಜಿಎಫ್- ಚಾಪ್ಟರ್-2’ನತ್ತ ದೃಷ್ಟಿ ನೆಟ್ಟಿದ್ದಾರೆ. ಅದಕ್ಕೆ ಸರಿಯಾಗಿ ಚಿತ್ರತಂಡ ಕೂಡಾ ಚಾಪ್ಟರ್-2ನ ಕೆಲಸದಲ್ಲಿ ತೊಡಗಿಕೊಂಡಿದೆ. ಈಗಾಗಲೇ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ಛಾಯಾಗ್ರಾಹಕ ಭುವನ್ ಗೌಡ ಹಾಗೂ ಕಲಾ ನಿರ್ದೇಶಕ ಶಿವಕುಮಾರ್ ಕೋಲಾರಕ್ಕೆ ಭೇಟಿ ನೀಡಿ ಲೊಕೇಶನ್ ಹುಡುಕಾಟದಲ್ಲಿದ್ದಾರೆ. ಈ ಬಾರಿ ಯಾವ ಶೈಲಿಯ ಸೆಟ್ಗಳನ್ನು ನಿರ್ಮಿಸುವುದು, ಯಾವ ಜಾಗದಲ್ಲಿ ನಿರ್ಮಿಸಿದರೆ ಸೂಕ್ತ ಎಂಬ ಲೆಕ್ಕಾಚಾರದಲ್ಲಿ ತೊಡಗಿದೆ.
ಈ ನಡುವೆಯೇ ಚಿತ್ರದ ತಾರಾಬಳಗ ಕೂಡಾ ದೊಡ್ಡದಾಗುತ್ತಿದೆ. ಚಾಪ್ಟರ್-2ನಲ್ಲಿ ಮತ್ತೂಂದಿಷ್ಟು ಪಾತ್ರಗಳು ಸೇರಿಕೊಳ್ಳುತ್ತಿವೆ. ಈಗಾಗಲೇ ಚಿತ್ರದಲ್ಲಿ ಸಂಜಯ್ ದತ್ ಪ್ರಮುಖ ಪಾತ್ರ ಮಾಡಲಿದ್ದಾರೆಂಬ ಸುದ್ದಿ ಕೇಳಿಬಂದಿದೆ. ಈಗ ಬಾಲಿವುಡ್ನಿಂದ ಮತ್ತೂಂದು ಹೆಸರು “ಕೆಜಿಎಫ್’ ಸುತ್ತ ಸುತ್ತುತ್ತಿದೆ. ಅದು ರವೀನಾ ಟಂಡನ್ ಅವರು. “ಕೆಜಿಎಫ್ ಚಾಪ್ಟರ್-2’ನಲ್ಲಿ ರವೀನಾ ಟಂಡನ್ ಅವರು ಪ್ರಮುಖ ಪಾತ್ರ ಮಾಡಲಿದ್ದಾರಂತೆ.
ಎಲ್ಲಾ ಓಕೆ, ರವೀನಾ ಅವರು “ಕೆಜಿಎಫ್-2’ನಲ್ಲಿ ಯಾವ ಪಾತ್ರ ಮಾಡುತ್ತಾರೆಂಬ ಕುತೂಹಲ ನಿಮ್ಮನ್ನು ಕಾಡಬಹುದು. ಮೂಲಗಳ ಪ್ರಕಾರ, ಚಿತ್ರದಲ್ಲಿ ಅವರು ರಾಜಕಾರಣಿಯಾಗಿ ನಟಿಸುತ್ತಿದ್ದಾರಂತೆ. “ಕೆಜಿಎಫ್’ ಚಿತ್ರದ ಆರಂಭದಲ್ಲಿ ರಮಿಕಾ ಸೇನ್ ಎಂಬ ಪಾತ್ರವೊಂದರ ಧ್ವನಿಯನ್ನು ನೀವು ಕೇಳಿರಬಹುದು. ಈಗ ರವೀನಾ ಟಂಡನ್ ಅವರು ಆ ಪಾತ್ರದಲ್ಲಿ ನಟಿಸುತ್ತಿದ್ದಾರೆನ್ನಲಾಗಿದೆ. ಹಾಗಂತ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಇನ್ನು “ಕೆಜಿಎಫ್’ನ ಹಿಂದಿ ಅವತರಣಿಕೆಯ ಬಿಡುಗಡೆಯಲ್ಲಿ ರವೀನಾ ಅವರ ಪತಿ ಅನಿಲ್ ತದಾನಿ ಕೈ ಜೋಡಿಸಿದ್ದರು. ಸಿನಿಮಾ ನೋಡಿದ ರವೀನಾ ಟಂಡನ್ ಕೂಡಾ ಟ್ವೀಟರ್ ಮೂಲಕ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಈಗ ಅವರು ಕೂಡಾ ಈ ಸಿನಿಮಾದ ಒಂದು ಭಾಗವಾಗುತ್ತಿದ್ದಾರೆನ್ನಲಾಗಿದೆ. ಅಂದಹಾಗೆ, ರವೀನಾ ಟಂಡನ್ ಈಗಾಗಲೇ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದು, ಯಶ್, ಶ್ರೀನಿಧಿ ಶೆಟ್ಟಿ ನಾಯಕ-ನಾಯಕಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.