ರವಿ ಹಿಸ್ಟರಿ ಹೇಳ್ತಾರೆ ಚಂದ್ರ


Team Udayavani, Feb 21, 2018, 11:40 AM IST

Ravi-History.jpg

ರವಿ ಹಿಸ್ಟರಿ … ಇದು ಡಿ.ಕೆ. ರವಿ ಅವರ ಹಿಸ್ಟರಿನಾ, ರವಿ ಬೆಳಗೆರೆ ಅವರ ಹಿಸ್ಟರಿನಾ, ರವಿಚಂದ್ರನ್‌ ಹಿಸ್ಟರಿನಾ ಅಥವಾ … ರವಿಪೂಜಾರಿ ಹಿಸ್ಟರಿನಾ? ಶೀರ್ಷಿಕೆ ನೋಡಿದಾಗ ಸಹಜವಾಗಿ ಮೂಡುವ ಪ್ರಶ್ನೆಗಳಿವು. ಆದರೆ, ಇಲ್ಲೀಗ ಹೇಳ ಹೊರಟಿರುವ ಇದು ಯಾರ “ಹಿಸ್ಟರಿ’ ಅಲ್ಲ, ಒಬ್ಬ ಸಾಮಾನ್ಯ ಹುಡುಗನ ಸಾಧನೆ ಹಿಂದಿರುವ ಇತಿಹಾಸ. ಇಂಥದ್ದೊಂದು ಇತಿಹಾಸ ಸಾರುವ ಕಥೆ ಇಟ್ಟುಕೊಂಡು ಹೀಗೊಂದು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಮಧುಚಂದ್ರ. 

“ಸೈಬರ್‌ ಯುಗದೊಳ್‌ ನವಯುವ ಮಧುರ ಪ್ರೇಮ ಕಾವ್ಯಂ’ ಮತ್ತು “ವಾಸ್ಕೋಡಿಗಾಮ’ ನಿರ್ದೇಶಿಸಿದ್ದ ಮಧುಚಂದ್ರ ಅವರ ಮೂರನೇ ಚಿತ್ರವಿದು. ರವಿ ಎಂಬ ಹುಡುಗನೊಬ್ಬ ತನ್ನ ಕನಸು ನನಸಸಾಗಿಸಿಕೊಳ್ಳಲು ಹೊರಡುವ ಜರ್ನಿ ಸುತ್ತ ನಡೆಯುವ ಕಥೆ ಇದು. ಆ ಜರ್ನಿಯಲ್ಲಿ ಏನೆಲ್ಲಾ ಆಗುತ್ತೆ ಅನ್ನೋದು ಕಥೆ. ಒಂದೇ ಕಥೆ ಇಲ್ಲಿದ್ದರೂ ನಾಲ್ಕು ಆಯಾಮಗಳು ಇಲ್ಲಿವೆ. ರವಿ ಎಂಬ ಹುಡುಗನೊಬ್ಬನ ಬಯೋಗ್ರಫಿ ಇಲ್ಲಿದೆ.

ಅಂದಹಾಗೆ, ನಿರ್ದೇಶಕರು ಈ ಚಿತ್ರ ಶುರುವಿಗೆ ಮುನ್ನ, ಎಲ್ಲಾ ಕಲಾವಿದರನ್ನು ಒಂದೆಡೆ ಸೇರಿಸಿ, ಮೂರು ತಿಂಗಳ ಕಾಲ ವರ್ಕ್‌ಶಾಪ್‌ ಮಾಡಿಸಿದ್ದಾರೆ. ನೀನಾಸಂ, ರಂಗಾಯಣ ಪ್ರತಿಭೆಗಳಿಗೂ ಇಲ್ಲಿ ಜಾಗ ಕೊಟ್ಟಿದ್ದಾರೆ. ಇದು ನೈಜ ಘಟನೆಯೇನಲ್ಲ. ಬೆಂಗಳೂರಲ್ಲೇ ಬಹುತೇಕ ಚಿತ್ರೀಕರಿಸಿದ್ದಾರೆ ಮಧುಚಂದ್ರ. ಕಾರ್ತಿಕ್‌ ಈ ಚಿತ್ರದ ಹೀರೋ. ಅಷ್ಟೇ ಅಲ್ಲ, ಹಣ ಹಾಕಿ ನಿರ್ಮಾಪಕರೂ ಆಗಿದ್ದಾರೆ.

ಅಭಿನಯ ತರಂಗ ಮತ್ತು ಮುಂಬೈನ ಅನುಪಮ್‌ಖೇರ್‌ ನಟನಾ ಶಾಲೆಯಲ್ಲಿ ಕಲಿತು ಸಿನಿಮಾ ಮಾಡುವ ಕನಸು ಕಂಡಿದ್ದರು. ಆ ಕನಸಿಗೆ ಜೊತೆಯಾದವರು ಮಧುಚಂದ್ರ. ಕಥೆ ಕೇಳಿದ ಕಾರ್ತಿಕ್‌ ಇಷ್ಟಪಟ್ಟು, ಸಿನಿಮಾ ಮಾಡಿದ್ದಾರೆ. ಒಂದುವರೆ ವರ್ಷದ ಈ ಜರ್ನಿಯಲ್ಲಿ ಒಳ್ಳೆಯ ಅನುಭವ ಪಡೆದು, ಹೊಸ ತಂಡ ಕಟ್ಟಿಕೊಂಡು ಹೊಸಬಗೆಯ ಚಿತ್ರ ಕೊಡುವ ಉತ್ಸಾಹ ಅವರದು.

ಪಲ್ಲವಿ ರಾಜ್‌ ಚಿತ್ರದ ನಾಯಕಿ ಅವರಿಗೆ ಇಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ಸಿಕ್ಕಿದೆ. ಐಶ್ವರ್ಯರಾವ್‌ ಎಂಬ ಮೈಸೂರಿನ ಇನ್ನೊಬ್ಬ ಬೆಡಗಿಯೂ ಇಲ್ಲಿ ನಾಯಕಿ. ಮೂಲತಃ ಡ್ಯಾನ್ಸರ್‌ ಆಗಿರುವ ಐಶ್ವರ್ಯರಾವ್‌, ಒಳ್ಳೇ ತಂಡದಲ್ಲಿ ಕೆಲಸ ಮಾಡಿದ ಬಗ್ಗೆ ಖುಷಿಗೊಂಡಿದ್ದಾರೆ. ಚಿತ್ರಕ್ಕೆ ಸೂರಜ್‌ ಸರ್ಜಾ ಮತ್ತು ವಿಜೇತ್‌ ಕೃಷ್ಣ ಸಂಗೀತ ನೀಡಿದ್ದಾರೆ. ಇವರಿಬ್ಬರೂ ಅರ್ಜುನ್‌ ಸರ್ಜಾ ಅವರ ಕುಟುಂಬದವರು ಎಂಬುದು ವಿಶೇಷ.

ಚಿತ್ರದಲ್ಲಿ ಮೂರು ಹಾಡುಗಳಿಗೆ ರಾಗ ಸಂಯೋಜಿಸಿದ್ದು, ಇಲ್ಲಿ ಮೆಲೋಡಿ, ರ್ಯಾಪ್‌ ಕಲ್ಚರ್‌ ಮೇಲಿನ ಹಾಡು ಹಾಗೂ ಗ್ಯಾಂಗ್‌ಸ್ಟರ್‌ ಕುರಿತ ಟಪ್ಪಾಂಗುಚ್ಚಿ ಹಾಡು ಕೊಟ್ಟಿದ್ದಾರೆ ಸೂರಜ್‌ ಸರ್ಜಾ ಮತ್ತು ವಿಜೇತ್‌ ಕೃಷ್ಣ. ಚಿತ್ರದ ಆಡಿಯೋ ಹಕ್ಕನ್ನು ಡಿಬೀಟ್ಸ್‌ ಸಂಸ್ಥೆ ಪಡೆದಿದೆ. ಶೈಲಜಾನಾಗ್‌ ಅವರು ಹಾಡುಗಳನ್ನು ಕೇಳಿ, ಯಾವುದೇ ವ್ಯಾಪಾರ ದೃಷ್ಟಿಯಿಂದ ಮಾತನಾಡದೆ, ಹೊಸಬರ ಪ್ರಯತ್ನಕ್ಕೆ ಸಾಥ್‌ ಕೊಟ್ಟಿದ್ದಾರೆ. ಅನಂತ್‌ ಅರಸ್‌ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಅಬ್ದುಲ್‌ ಕರೀಂ ಸಂಕಲನ ಮಾಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹೊರಬಂದಿವೆ.

ಟಾಪ್ ನ್ಯೂಸ್

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

2

Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.