KGF ನಂತಹ ಸಿನಿಮಾ ಸಿಕ್ಕಿದ್ದು ಯಶ್ ಅದೃಷ್ಟ..ರವಿತೇಜ ಮಾತಿಗೆ ಗರಂ ಆದ ರಾಕಿಭಾಯ್ ಫ್ಯಾನ್ಸ್
ರವಿತೇಜ ಸಿನಿಮಾಕ್ಕೆ ಬ್ಯಾನ್ ಬಿಸಿ
Team Udayavani, Oct 11, 2023, 3:07 PM IST
ಹೈದರಾಬಾದ್: ಟಾಲಿವುಡ್ ನಟ ಮಾಸ್ ಮಹಾರಾಜ ರವಿತೇಜ ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ಹೇಳಿರುವ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ.
ರವಿತೇಜ ವೃತ್ತಿ ಬದುಕಿನ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ʼಟೈಗರ್ ನಾಗೇಶ್ವರರಾವ್ʼ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಸದ್ಯ ಸಿನಿಮಾದ ಪ್ರಚಾರದಲ್ಲಿ ಚಿತ್ರತಂಡ ನಿರತವಾಗಿದೆ.
ಪ್ರಚಾರದ ಅಂಗವಾಗಿ ನಟ ರವಿತೇಜ ಅವರು ವೆಬ್ ಸೈಟ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಯಶ್ ಬಗ್ಗೆ ಆಡಿರುವ ಮಾತು ರಾಕಿಭಾಯ್ ಫ್ಯಾನ್ಸ್ ಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸಂದರ್ಶನದಲ್ಲಿ ರ‍್ಯಾಪಿಡ್ ಫೈಯರ್ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ನಟರ ಬಗ್ಗೆ ಕೇಳಿ ಅಭಿಪ್ರಾಯವನ್ನು ಕೇಳಿದ್ದಾರೆ.
ಇದನ್ನೂ ಓದಿ: Shocking Video: ಚಲಿಸುತ್ತಿರುವ ರೈಲಿನ ಮೇಲೆ ಯುವಕನ ಅಪಾಯಕಾರಿ ಸ್ಟಂಟ್
ಮೊದಲಿಗೆ ರಾಮ್ ಚರಣ್ ಅವರಿಂದ ನೀವೇನು ಪಡೆಯುತ್ತೀರಾ ಎಂದಿದ್ದಾರೆ, “ರಾಮ್ ಚರಣ್ ರಿಂದ ಡ್ಯಾನ್ಸ್, ಅವರೊಬ್ಬ ಸೂಪರ್ ಡ್ಯಾನ್ಸರ್” ಎಂದಿದ್ದಾರೆ. ಪ್ರಭಾಸ್ ಬಗ್ಗೆ ಕೇಳಿದಾಗ “ಅವರೆಂದರೆ ಅಪಿಯರೆನ್ಸ್” ಮತ್ತು ಅವರು ಡಾರ್ಲಿಂಗ್ ಎಂದಿದ್ದಾರೆ. ರಾಜಾಮೌಳಿ ಅವರು ವಿಷನ್ ಎಂದಿದ್ದಾರೆ. ದಳಪತಿ ವಿಜಯ್ ಅವರು ಕೂಡ ಒಬ್ಬ ಅದ್ಭುತ ಡ್ಯಾನ್ಸರ್ ಎಂದು ರವಿತೇಜ ಹೇಳಿದ್ದಾರೆ.
ಇದಾದ ಬಳಿಕ ಯಶ್ ಬಗ್ಗೆ ಕೇಳಿದಾಗ ರವಿತೇಜ ಅವರು, “ಯಶ್ ಅವರದು ನಾನು ಕೆಜಿಎಫ್ ಮಾತ್ರ ನೋಡಿದ್ದೇನೆ. ಕೆಜಿಎಫ್ ನಂತಹ ಸಿನಿಮಾಗಳು ಸಿಗುವುದು ತುಂಬಾ ಅದೃಷ್ಟವೆಂದು”ಹೇಳಿದ್ದಾರೆ.
ಯಶ್ ಅವರ ಬಗ್ಗೆ ರವಿತೇಜ ಹೇಳಿದ ರೀತಿ ಒಂದು ಬಗೆಯಲ್ಲಿ ಉಡಾಫೆಯ ವರ್ತನೆದಂತಿತ್ತು ಎಂದು ರಾಕಿಭಾಯ್ ಅಭಿಮಾನಿಗಳು ಮಾಸ್ ಮಹಾರಾಜನ ವಿರುದ್ಧ ಗರಂ ಆಗಿದ್ದಾರೆ.
ಯಶ್ ಬಾಸ್ ತಮ್ಮ 6 ವರ್ಷಗಳನ್ನು ಫ್ರಾಂಚೈಸಿಗೆ ಮೀಸಲಿಟ್ಟರು. ಸಿನಿಮಾ ನಿರ್ಮಾಣದ ಎಲ್ಲ ವಿಭಾಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾಗೆ ಕೊಂಡೊಯ್ದದ್ದು ಅವರೇ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.
ರಾಜಮೌಳಿ ಅವರ ʼ ವಿಕ್ರಮಾರ್ಕುಡುʼ ಲಾಟರಿ ಇಲ್ಲದಿದ್ದರೆ ಇವರು ಯಾರೆಂದು ಗೊತ್ತಾಗುತ್ತಿರಲಿಲ್ಲ. “ಅದೃಷ್ಟ” ಎಂಬ ಒಂದೇ ಪದದಿಂದ ಒಬ್ಬ ನಟನ ಯಶಸ್ಸಿನ ಪರಿಶ್ರಮವನ್ನು ದೋಷಿಸುವುದು ಸರಿಯಲ್ಲ. ಅವರ ರಾಜ್ಯದಲ್ಲಿ 100 ಕೋಟಿಯ ಒಂದು ಪಾಲು ಕೂಡ ಇಲ್ಲ. ಯಶ್ ಆಂಧ್ರ ಹಾಗೂ ತೆಲಂಗಾಣದಲ್ಲಿ 100 ಕೋಟಿ ಮಾಡಿದ್ದಾರೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಸದ್ಯ ರವಿತೇಜ ಅವರ ಈ ಹೇಳಿಕೆ ವೈರಲ್ ಆಗುವುದರ ಜೊತೆಗೆ ಕರ್ನಾಟಕದಲ್ಲಿ ಅವರ ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಕೆಲವರು ಆಗ್ರಹಿಸಿದ್ದಾರೆ. ಶಿವರಾಜ್ ಕುಮಾರ್ ʼಘೋಸ್ಟ್ʼ ಸಿನಿಮಾ ಅ.19 ರಂದು ರಿಲೀಸ್ ಆಗಲಿದ್ದು, ಅ.20 ರಂದು ʼ ʼಟೈಗರ್ ನಾಗೇಶ್ವರರಾವ್ʼ ಸಿನಿಮಾ ರಿಲೀಸ್ ಆಗಲಿದೆ.
#Ramcharan & #ThalapathyVijay are really good dancers,I want to steal dance from them,#Prabhas is truly a darling,I like his appearance,SS RAJAMOULI is an visionary,#YASH is lucky for having #KGF
– #Raviteja#TigerNageswaraRao pic.twitter.com/V6z5SlU6ko— Indian Cinema Hub (@IndianCinemaHub) October 10, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.